ಬೆಂಗಳೂರು: ನಟಿ ಹರಿಪ್ರಿಯಾ (Actress Haripriya) ಹಾಗೂ ನಟ ವಸಿಷ್ಠ ಸಿಂಹ ಡಿಸೆಂಬರ್ 3ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ವಿಡಿಯೊ ಮೂಲಕ ತಮ್ಮ ಪ್ರೀತಿಯ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ಹರಿಪ್ರಿಯಾ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯೂಟ್ ವಿಡಿಯೊ ಹಂಚಿಕೊಂಡು, ಮನಬಿಚ್ಚಿ ಮಾತನಾಡಿದ್ದಾರೆ.
“”ನಮ್ಮ ಮನೆಯಲ್ಲಿ ಈಗಾಗಲೇ ಲಕ್ಕಿ ಮತ್ತು ಹ್ಯಾಪಿ ಎಂಬ ಎರಡು ನಾಯಿಗಳಿವೆ. ಲಕ್ಕಿ ಸತ್ತ ನಂತರ ಹ್ಯಾಪಿಗಾಗಿ ಮತ್ತೊಂದು ನಾಯಿಯನ್ನು ತಂದುಕೊಟ್ಟಿದ್ದರಂತೆ ವಸಿಷ್ಠ. ಅದರ ಹೆಸರು ಕ್ರಿಸ್ಟಲ್. ಆದರೆ ಈ ಕ್ರಿಸ್ಟಲ್ ನಾಯಿ ಹ್ಯಾಪಿ ನಾಯಿಯ ಆಟದ ಸಾಮಾನುಗಳೊಂದಿಗೆ ಆಡುತ್ತಿತ್ತು. ಆದರೆ ಹ್ಯಾಪಿ ನಾಯಿ ಮರಿ ಇದನ್ನು ಒಪ್ಪುತ್ತಿರಲಿಲ್ಲ. ಯಾವಾಗಲೂ ಕ್ರಿಸ್ಟಲ್ ಜತೆ ಜಗಳ ಮಾಡ್ತಿತ್ತು. ನಂತರ ಹ್ಯಾಪಿಗೆ ಕ್ರಿಸ್ಟಲ್ ನೋಡಿ ಲಕ್ಕಿ ಅಂತ ಅನಿಸಿ ಇಬ್ಬರೂ ಜಗಳ ಮಾಡೋದನ್ನೇ ನಿಲ್ಲಿಸಿದ್ದರು. ಕ್ರಿಸ್ಟಲ್ ನೋಡೋ ರೀತಿ, ಆಡುವ ರೀತಿ ತುಂಬಾನೇ ಮುದ್ದು. ಯಾರು ಬೇಕಾದರೂ ಅದನ್ನ ಫ್ರೆಂಡ್‌ಶಿಪ್ ಮಾಡಿಕೊಳ್ಳುತ್ತಾರೆ. ಅದು ಯಾರನ್ನು ಬೇಕಾದರೂ ಮೋಡಿ ಮಾಡುತ್ತೆ. ಸಿಂಹ ಅವರು ನನಗೆ ಕ್ರಿಸ್ಟಲ್ ಗಿಫ್ಟ್ ಮಾಡಿದಾಗ ಅದು ಒಂದು ಸಿಕ್ರೇಟ್ ತಂದಿತ್ತು. ಕ್ರಿಸ್ಟಲ್ ಹೊಟ್ಟೆ ಮೇಲೆ ಹಾರ್ಟ್ ಶೇಪ್ ಬರ್ತ್ ಮಾರ್ಕ್ ಇತ್ತು. ಈ ಮಾರ್ಕ್ ಬೆಳೀತಾ ಬೆಳೀತಾ ನನ್ನ ಹಾಗೂ ವಸಿಷ್ಠ ಸಿಂಹ ನಡುವಿನ ಫ್ರೆಂಢ್‌ಶಿಪ್ ಕೂಡ ಬೆಳೀತು. ಇಬ್ಬರ ನಡುವೆ ಪ್ರೀತಿನೂ ಬೆಳೀತು. ಕ್ರಿಸ್ಟಲ್ ನಮ್ಮ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆʼʼ ಎಂದು ಹರಿಪ್ರಿಯಾ ಮನೋಜ್ಞವಾಗಿ ಹೇಳಿಕೊಂಡಿದ್ದಾರೆ. ಈ ಕ್ರಿಸ್ಟಲ್ ಕಾರಣಕ್ಕಾಗಿಯೇ ಹರಿಪ್ರಿಯಾಗೆ ವಸಿಷ್ಠ ಮೇಲೆ ಪ್ರೇಮ ಮೂಡಿತು ಎನ್ನುವುದು ಈ ಸಂದೇಶದ ಸಾರ.
ಇದನ್ನೂ ಓದಿ | Actress Haripriya | ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೊಗಳು ವೈರಲ್!
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡರು ಎಂದು ಹೇಳಲಾಗುತ್ತಿತ್ತು. ಆದರೆ ತಮ್ಮ ಪ್ರೀತಿಯ ಹಿಂದಿನ ಸತ್ಯ ಸಂಗತಿಯನ್ನು ಅವರು ಇದೀಗ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ | Actress Haripriya | ಸಿಂಹದ ಮಡಿಲಲ್ಲಿ ಹರಿಪ್ರಿಯಾ ಪ್ರೀತಿ: ʻಎಂದೂ ನಿನ್ನ ನೆರಳಾಗಿ ಕಾಯುವೆ ನಾನುʼ ಎಂದ ವಸಿಷ್ಠ ಸಿಂಹ