Site icon Vistara News

Sandalwood Actor : ಕೊನೆಗೂ ಗುಡ್​ ನ್ಯೂಸ್ ಕೊಟ್ಟ ನಟಿ ಹರಿಪ್ರಿಯಾ; ಆದರೂ ಹೆಸರು ಹೇಳಲಿಲ್ಲ!

Actress Haripriya gave good news at last; Didn't say the name though!

#image_title

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಹರಿಪ್ರಿಯಾ (Sandalwood Actor) ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಅವರ ಬದುಕಿನಲ್ಲಾಗುವ ಪ್ರತಿಯೊಂದು ಒಳಿತಿಗೂ ಅಭಿಮಾನಿಗಳ ಶುಭ ಹಾರೈಕೆಗಳ ಇದ್ದೇ ಇರುತ್ತವೆ. ಅಂತೆಯೇ ಕೆಲವು ದಿನಗಳ ಹಿಂದೆ ಹರಿಪ್ರಿಯಾ (Haripriaya) ಅವರು ನಿಮಗೊಂದು ಗುಡ್​ನ್ಯೂಸ್​ ಅಂಥ ಸೋಶಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​ ಹಾಕಿದ್ದರು. ನಟಿ ಕೆಲವು ತಿಂಗಳ ಹಿಂದೆ ನಟ ವಸಿಷ್ಠ ಸಿಂಹ ಅವರನ್ನು ಮದುವೆಯಾಗಿ ಸಿಂಹ ಪ್ರಿಯೆ ಎನಿಸಿಕೊಂಡಿದ್ದರಿಂದ ಗುಡ್​ ನ್ಯೂಸ್​ ಅಂದಾಕ್ಷಣ ಎಲ್ಲರ ಕಿವಿ ಅರಳಿತ್ತು. ನಮ್ಮೆಲ್ಲರ ನೆಚ್ಚಿನ ನಟಿ ತಾಯಿಯಾಗುತ್ತಿದ್ದಾರೆ ಎಂದು ಚಂದದ ಮಾತುಗಳನ್ನಾಡಿದ್ದರು. ಆದರೆ, ಆ ನಿರೀಕ್ಷೆ ಸುಳ್ಳಾಗಿದೆ. ಹಾಗೆಂದು ಗುಡ್​ ನ್ಯೂಸ್​ ಕೊಟ್ಟಿಲ್ಲ ಎಂದರ್ಥವಲ್ಲ. ಕೊಟ್ಟಿದ್ದಾರೆ.

ನವ ದಂಪತಿಗಳು ಗುಡ್​ ನ್ಯೂಸ್​ ಅಂದಾಗ ತಲೆಯಲ್ಲಿ ಸುಳಿದಾಡುವ ಗುಡ್​ ನ್ಯೂಸ್ ಇದಲ್ಲ ಎಂಬುದನ್ನು ಹರಿಪ್ರಿಯಾ ಮಂಗಳವಾರ (ಮಾರ್ಚ್​ 21ರಂದು) ಬಹಿರಂಗ ಮಾಡಿದ್ದಾರೆ. ಆದರೆ, ಆ ದಿಸೆಯಲ್ಲಿ ಯೋಚನೆ ಮಾಡಿದವರಿಗೆ ಥ್ಯಾಂಕ್ಸ್​ ಹೇಳುವುದಕ್ಕೂ ಮರೆತಿಲ್ಲ. ಅದರೊಟ್ಟಿಗೆ, ನಾನೊಂದು ಯೂಟ್ಯೂಬ್​ ಚಾನೆಲ್ ಆರಂಭ ಮಾಡುತ್ತಿದ್ದೇನೆ ಎಂಬುದಾಗಿ ಘೋಷಿಸಿದ್ದಾರೆ. ಎಲ್ಲರಿಗೂ ಇಷ್ಟವಾಗವಂಥ ಅದ್ಭುತ ಕಂಟೆಂಟ್​ ಜತೆ ಬರುವ ಭರವಸೆಯನ್ನೂ ನೀಡಿದ್ದಾರೆ. ಆದರೆ, ಯೂಟ್ಯೂಬ್​ನ ಹೆಸರು ಏನು? ಅದರಲ್ಲಿ ಬರುವ ಕಂಟೆಂಟ್​ ಯಾವುದಕ್ಕೆ ಸಂಬಂಧಿಸಿದ್ದು ಎಂಬುದನ್ನು ಪ್ರಕಟಿಸಿಲ್ಲ.

ಹರಿಪ್ರಿಯಾ ಮಾಡಿದ ಟ್ವೀಟ್​ ಇಲ್ಲಿದೆ

ನಿಮ್ಮೆಲ್ಲರ ಊಹೆ ಮತ್ತು ಕಲ್ಪನೆಗಳಿಗೆ ಧನ್ಯವಾದಗಳು ಗೆಳೆಯರೇ, ಇಲ್ಲೊಂದು ಸುದ್ದಿಯಿದೆ. ನನ್ನದೊಂದು ಯೂಟ್ಯೂಚ್ ಚಾನೆಲ್​ ಅನ್ನು ಆರಂಭಿಸುತ್ತಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಕಾಯುತ್ತಲೇ ಇರಿ. ನಿಮ್ಮೊಂದಿಗೆ ಅತ್ಯುತ್ತಮ ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಜೋಡಿ ಕಳೆದ ಜನವರಿಯಲ್ಲಿ ಮದುವೆಯಾಗಿದ್ದರು. ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಹರಿಪ್ರಿಯಾ ಅವರನ್ನು ಪ್ರತಿಭಾವಂತ ನಟ ವಸಿಷ್ಠ ಮದುವೆಯಾಗುವುದು ದೊಡ್ಡ ಸುದ್ದಿಯಾಗಿತ್ತು. ಇದೀಗ ಅವರು ಸುಂದರ ಜೀವನ ನಡೆಸುತ್ತಿದ್ದಾರೆ. ಮದುವೆಯ ಬಳಿಕ ಹರಿಪ್ರಿಯಾ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯುತ್ತಾರಾ ಎಂಬ ಅನುಮಾನವೊಂದು ಮೂಡಿತ್ತು. ಅದಕ್ಕೆ ಸ್ಪಷ್ಟ ಉತ್ತರ ಇನ್ನೂ ದೊರಕಿಲ್ಲ. ಆದರೆ, ಯೂಟ್ಯೂಬ್​ ಚಾನೆಲ್​ ಮೂಲಕ ಮತ್ತೆ ಜನರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ.

Exit mobile version