ಬೆಂಗಳೂರು : ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ (Actress Haripriya) ಅವರು ಇದೇ ತಿಂಗಳ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹ ಸಮಾರಂಭವನ್ನು ನಡೆಸಲು ಜೋಡಿ ನಿರ್ಧರಿಸಿದೆ.
ಹರಿಪ್ರಿಯಾ-ವಸಿಷ್ಠ ಅವರು ಆಶ್ರಮಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಕೂಡ ಜತೆಗಿದ್ದರು. ಈ ಫೋಟೊಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ತಿಳಿಸಿದ್ದಾರೆ. ಖ್ಯಾತ ಚಲನಚಿತ್ರ ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ವಿವಾಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ನಡೆಯಲಿದೆ ಎಂದು ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Actress Haripriya | ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೊಗಳು ವೈರಲ್!
ಡಿಸೆಂಬರ್ 3 ರಂದು ಹರಿಪ್ರಿಯಾ ನಿವಾಸದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದ ಬಹುಭಾಷಾ ನಟಿ ಹರಿಪ್ರಿಯಾ ಮುದ್ದಾದ ನಾಯಿ ಮರಿ ಕ್ರಿಸ್ಟಲ್ ಇಂದಾಗಿ ತಾವು ಪ್ರೀತಿಯಲ್ಲಿ ಬಿದ್ದ ಬಗ್ಗೆ ತಿಳಿಸಿದ್ದರು.
ನಟಿ ಹರಿಪ್ರಿಯಾ ಅವರು 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ತಾವು ನಟಿಸಿದ ಸಿನಿಮಾಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಹರಿಪ್ರಿಯಾ ನಟನೆಯ ʻಪೆಟ್ರೋಮ್ಯಾಕ್ಸ್ʼ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಈ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ | Actress Haripriya | ಸಿಂಹದ ಮಡಿಲಲ್ಲಿ ಹರಿಪ್ರಿಯಾ ಪ್ರೀತಿ: ʻಎಂದೂ ನಿನ್ನ ನೆರಳಾಗಿ ಕಾಯುವೆ ನಾನುʼ ಎಂದ ವಸಿಷ್ಠ ಸಿಂಹ