ಬೆಂಗಳೂರು : ನಟ ವಸಿಷ್ಠ ಸಿಂಹ ನಡುವಿನ ಪ್ರೇಮ ಕಾವ್ಯವನ್ನು ನಟಿ ಹರಿಪ್ರಿಯಾ (Actress Haripriya) ಬಹುತೇಕ ಒಪ್ಪಿಕೊಂಡಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಹಾಕಿದ ಅವರು ಸಿಂಹನ ತೋಳಿನಲ್ಲಿ ನಾನು ಬಂಧಿ ಎಂಬ ಸಂದೇಶವನ್ನು ರವಾನಿಸುವ ಮೂಲಕ ತಮ್ಮಿಬ್ಬರ ಪ್ರಣಯ ಪ್ರಸಂಗ ಹೌದೆನ್ನುವ ಸುಳಿವು ಕೊಟ್ಟಿದ್ದಾರೆ.
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜತೆಯಾಗಿ ಓಡಾಡುತ್ತಿದ್ದು, ಈ ಜೋಡಿ ಸಪ್ತಪದಿ ತುಳಿಯಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅಂತೆಯೇ ಸ್ಯಾಂಡಲ್‌ವುಡ್‌ನ ಈ ತಾರಾ ಜೋಡಿ ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು ಕೂಡ. ಅಂತೆಯೇ ಶುಕ್ರವಾರ ಬೆಳಗ್ಗೆ ಅವರಿಬ್ಬರ ನಿಶ್ಚಿತಾರ್ಥ ಕೂಡ ನಡೆಯಿತು ಎಂಬುದಾಗಿ ಸುದ್ದಿಯಾಗಿತ್ತು.
ಏನಿದೆ ಇನ್‌ಸ್ಟಾ ಪೋಸ್ಟ್‌ನಲ್ಲಿ?
ಹರಿಪ್ರಿಯಾ ಅವರು ಶುಕ್ರವಾರ ಸಂಜೆ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದರಲ್ಲಿ ಮಹಾರಾಜನಂತೆ ಕಿರೀಟ ಧರಿಸಿ ಸುಂದರವಾಗಿರುವ ಸಿಂಹವೊಂದು ಪುಟಾಣಿ ಹೆಣ್ಣು ಮಗುವೊಂದನ್ನು ತನ್ನ ತೋಳಿನಲ್ಲಿ ಎತ್ತಿ ಹಿಡಿದ ಚಿತ್ರವನ್ನು ಹಾಕಿದ್ದಾರೆ. “ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು’ ಎಂಬುದಾಗಿ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಈ ಮೂಲಕ ಅವರು ತಮ್ಮಿಬ್ಬರ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Actress Haripriya | ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಹರಿಪ್ರಿಯಾ-ವಸಿಷ್ಠ ಸಿಂಹ?