Site icon Vistara News

Actress Haripriya: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟ ಸಿಂಹಪ್ರಿಯಾ

Simhapriya visited Kukke Subrahmanya Kshetra

ಸುಬ್ರಹ್ಮಣ್ಯ: ನಟಿ ಹರಿಪ್ರಿಯಾ (Actress Haripriya) ಮತ್ತು ನಟ ವಸಿಷ್ಠ ಸಿಂಹ ಜನವರಿ 26ರಂದು (Actress Haripriya) ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದಾಗಿನಿಂದ ಜೋಡಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ಜೋಡಿ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದೆ. ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ದಂಪತಿ ಬಳಿಕ ತುಲಾಭಾರ ಸೇವೆ ಮಾಡಿಸಿದ್ದಾರೆ.

ವಸಿಷ್ಠ ಸಿಂಹ ಇನ್‌ಸ್ಟಾ ಸ್ಟೋರಿಯಲ್ಲಿ ಅವರ ಅಭಿಮಾನಿಯೊಬ್ಬರು ಜೋಡಿ ನೋಡಿ ಸಂತಸ ಪಟ್ಟು ವ್ಯಕ್ತಪಡಿಸಿದ್ದನ್ನು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಸಿಂಹಪ್ರಿಯಾ ಅಭಿಮಾನಿಯೊಬ್ಬರು ʻʻಧರ್ಮಸ್ಥಳದಲ್ಲಿ ನಿಮ್ಮಿಬ್ಬರನ್ನು ನೋಡಿದೆ. ತುಂಬ ಖುಷಿ ಆಯಿತು. ನಿಮ್ಮ ವೈವಾಹಿಕ ಜೀವನಕ್ಕೆ ಹಾರೈಸಿದ್ದು ಖುಷಿ ಆಯ್ತು. ಅಷ್ಟಾದರೂ ನನಗೆ ಅವಕಾಶ ಸಿಕ್ಕಿತುʼʼಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಅಷ್ಟೇ ಹರಿಪ್ರಿಯಾ ಅವರು ವಸಿಷ್ಠ ಸಿಂಹ ಅವರಿಗೆ ಸರ್​ಪ್ರೈಸ್ ನೀಡಿದ್ದರು. ಮದುವೆ ಬಳಿಕ ಹರಿಪ್ರಿಯಾ ಅವರು ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ವಸಿಷ್ಠ ಸಿಂಹ ಕೂಡ ಶೂಟಿಂಗ್‌ಗೆಂದು ತೆಲಂಗಾಣಕ್ಕೆ ತೆರಳಿದ್ದರು. ಪತ್ನಿ ಹರಿಪ್ರಿಯಾ ಅವರು ಅಲ್ಲಿಗೆ ಸರ್​ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ಈ ಮೂಲಕ ಪತಿಗೆ ಅಚ್ಚರಿ ಮೂಡಿಸಿದ್ದಾರೆ. ಅದಕ್ಕೆ ನಟ ಫೋಟೊಗಳನ್ನು ಶೇರ್ ಮಾಡಿ ಪತ್ನಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಇದನ್ನೂ ಓದಿ: Actress Haripriya: ತೆಲಂಗಾಣದಲ್ಲಿ ವಸಿಷ್ಠ ಸಿಂಹಗೆ ಹರಿಪ್ರಿಯಾ ನೀಡಿದ ಸರ್‌ಪ್ರೈಸ್‌ ಏನು?

ಸರ್‌ಪ್ರೈಸ್‌ ವಿಸಿಟ್‌ ಬಗ್ಗೆ ವಸಿಷ್ಠ ಸಿಂಹ ಪೋಸ್ಟ್‌ ಹಂಚಿಕೊಂಡಿದ್ದು, ಸಂತಸ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ವಸಿಷ್ಠ ಸಿಂಹ ಹಾಗೂ ಅವರ ಸಿಬ್ಬಂದಿಗೆ ವಿಶೇಷ ಅಡುಗೆ ಮಾಡಿ ಹರಿಪ್ರಿಯಾ ಉಣಬಡಿಸಿದ್ದಾರೆ. ಈ ಫೋಟೊಗಳನ್ನು ಹಂಚಿಕೊಂಡು ವಸಿಷ್ಠ ಸಿಂಹ ಧನ್ಯವಾದ ಅರ್ಪಿಸಿದ್ದಾರೆ.ಇತ್ತೀಚೆಗೆ ದಂಪತಿ ಅವರು ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಫೋಟೊಗಳನ್ನೂ ಹಂಚಿಕೊಂಡಿದ್ದರು.

Exit mobile version