Actress Haripriya | ಸ್ಯಾಂಡಲ್ವುಡ್ ತಾರೆಯರಿಗೆ ಮದುವೆಯ ಕರೆಯೋಲೆ ನೀಡಿದ ʻಸಿಂಹಪ್ರಿಯಾʼ: ಫೋಟೊಗಳು ಇಲ್ಲಿವೆ! Yashaswi Devadiga 2 ವರ್ಷಗಳು ago ಸ್ಯಾಂಡಲ್ವುಡ್ ತಾರೆಯರಾದ ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆಗೆ ಆಹ್ವಾನ ಕೊಡುತ್ತಿದ್ದಾರೆ. ಜತೆಯಾಗಿಯೆ ಹೋಗಿ ಎಲ್ಲರನ್ನೂ ಆತ್ಮೀಯವಾಗಿಯೇ ಆಹ್ವಾನಿಸುತ್ತಿದ್ದಾರೆ.ಜನವರಿ 26ರಂದು ಅದ್ಧೂರಿ ಕಲ್ಯಾಣಕ್ಕೆ ರೆಡಿಯಾಗಿದೆ ಜೋಡಿ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯಾ ವಿವಾಹ ಆಗುತ್ತಿದ್ದಾರೆ.ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ,ಗಣ್ಯರಿಗೆ ಆಹ್ವಾನ ನೀಡುತ್ತಿದೆ ಜೋಡಿ. ಜನವರಿ 28 ರಂದು (ಶನಿವಾರ) ಸಂಜೆ 7 ಗಂಟೆಯಿಂದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರತಕ್ಷತೆ ತುಮಕೂರು ರಸ್ತೆಯ ಗೋಲ್ಡನ್ ಪಾಮ್ಸ್ ರೆಸಾರ್ಟ್ನಲ್ಲಿ ಜರುಗಲಿದೆ. ಮದುವೆಯ ಆಮಂತ್ರಣ (Wedding Card) ಕಾರ್ಡ್ನಲ್ಲಿ ಸಿಂಹಪ್ರಿಯಾ (Simhapriya) ಎಂಬ ಟ್ಯಾಗ್ಲೈನ್ ಇದೆ. ಅಭಿಮಾನಿಗಳು ಪ್ರೀತಿಯಿಂದ ಈ ಜೋಡಿಗೆ ಕೊಟ್ಟಿರುವ ಸಿಂಹ ಪ್ರಿಯಾ ಟ್ಯಾಗ್ ಅನ್ನೇ ಪತ್ರಿಕೆಯಲ್ಲೂ ಮುದ್ರಿಸಲಾಗಿದೆ. ಪತ್ರಿಕೆಯ ಜತೆ ಮೇಣದ ಬತ್ತಿ ಮತ್ತು ವಿಶೇಷವಾಗಿರುವ ಗಿಡವೊಂದನ್ನು ನೀಡಲಾಗಿದೆ.ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ, ತಾವು ಹೋದ ಕಡೆಯೆಲ್ಲಾ ಮ್ಯಾಚಿಂಗ್ ಬಣ್ಣದ ಬಟ್ಟೆ ಧರಿಸಿ ಗಮನ ಸೆಳೆದಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ತ್ಯಾಗರಾಜ್ ನಗರದ ಮನೆಗೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತೆರಳಿದ್ದರು. ಹಿರಿಯ ನಟ ಅನಂತ್ನಾಗ್, ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಅನೇಕ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಮನೆಗೆ ತೆರಳಿ, ತಮ್ಮ ಮದುವೆಗೆ ಬರುವಂತೆ ಆಹ್ವಾನಿಸಿದ್ದಾರೆ. ಕಿಚ್ಚ ಸುದೀಪ್ಗೆ ಆಹ್ವಾನ ನೀಡಿದ ವಸಿಷ್ಠ ಸಿಂಹ, ಹರಿಪ್ರಿಯಾ