Site icon Vistara News

Actress Haripriya | ʻಸಿಂಹಪ್ರಿಯಾʼ ಎಂಗೇಜ್‌ಮೆಂಟ್ ರಿಂಗ್ ಹಿಂದಿರುವ ಸೀಕ್ರೆಟ್ ರಿವೀಲ್‌!

Actress Haripriya

ಬೆಂಗಳೂರು : ನಟ ವಸಿಷ್ಠ ಸಿಂಹ -ನಟಿ ಹರಿಪ್ರಿಯಾ (Actress Haripriya) ಡಿಸೆಂಬರ್‌ ೨ರ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ʻಸಿಂಹಪ್ರಿಯ’ ಜೋಡಿ ಹಸೆಮಣೆ ಏರಲು ರೆಡಿಯಾಗಿದೆ. ಇದೀಗ ತಮ್ಮ ಎಂಗೇಜ್‌ಮೆಂಟ್ ರಿಂಗ್ ಹಿಂದಿರುವ ಸೀಕ್ರೆಟ್ ಅನ್ನು ನಟಿ ಹರಿಪ್ರಿಯಾ ಸೋಷಿಯಲ್‌ ಮೀಡಿಯಾ ಮೂಲಕ ರಿವೀಲ್‌ ಮಾಡಿದ್ದಾರೆ.

ಇತ್ತೀಚೆಗಷ್ಟೇ ದುಬೈನಲ್ಲಿ ಕೈ ಕೈ ಹಿಡಿದು ಓಡಾಡಿದ್ದ ಈ ಜೋಡಿಯ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ನಂತರ ಆಪ್ತರ ಸಮ್ಮುಖದಲ್ಲಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ತಮ್ಮ ಎಂಗೇಜ್‌ಮೆಂಟ್ ರಿಂಗ್ ಕುರಿತು ಸೀಕ್ರೆಟ್ ಹಂಚಿಕೊಂಡಿದ್ದಾರೆ ನಟಿ ಹರಿಪ್ರಿಯಾ.

ಇದನ್ನೂ ಓದಿ |Actress Haripriya | ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೊಗಳು ವೈರಲ್‌!

”ಸಾಮಾನ್ಯಕ್ಕಿಂತ ವಿಭಿನ್ನವಾಗಿರುವುದು ನನ್ನ ಆಯ್ಕೆ ಆಗಿರುತ್ತದೆ. ಸಿಂಹದ ಚಿಹ್ನೆ ನನ್ನ ಎಂಗೇಜ್‌ಮೆಂಟ್‌ ರಿಂಗ್ ಮೇಲೆ ಇರಬೇಕು ಎಂಬುದು ನನ್ನ ಆಯ್ಕೆ ಆಗಿತ್ತು. ಜೀವನ ಪೂರ್ತಿ ನಮ್ಮ ಜತೆಯಿರುವ ಉಂಗುರ ಇದಾಗಲಿದೆ. ಡಿಸೈನರ್‌ಗಳ ಜತೆ ಸೇರಿಕೊಂಡು ನಾವು ಈ ವಿಶಿಷ್ಟ ವಿನ್ಯಾಸ ಮಾಡಿಸಿದ್ದೇವೆ. ಅಷ್ಟಭುಜಾಕೃತಿಯಿಂದ ಕೂಡಿದೆ ಈ ಉಂಗುರ. ಈ ರೀತಿ ಮೂಡಿ ಬಂದಿರುವುದಕ್ಕೆ ತುಂಬಾನೇ ಖುಷಿಯಿದೆʼʼ ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.

ಮುಂದಿನ ವರ್ಷ ಈ ಜೋಡಿ ಹಸೆಮಣೆ ಏರಲಿದೆ. ನಟಿ ಹರಿಪ್ರಿಯಾ ಅವರು 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ತಾವು ನಟಿಸಿದ ಸಿನಿಮಾಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಹರಿಪ್ರಿಯಾ ನಟನೆಯ ʻಪೆಟ್ರೋಮ್ಯಾಕ್ಸ್ʼ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಈ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. 

ಇದನ್ನೂ ಓದಿ | Actress Haripriya | ಶೂಟಿಂಗ್‌ ಸೆಟ್‌ನಲ್ಲಿ ಒಟ್ಟಿಗೆ ಕೈ ಕೈ ಹಿಡಿದುಕೊಂಡು ಕಾಣಿಸಿಕೊಂಡ ʻಸಿಂಹಪ್ರಿಯಾʼ!

Exit mobile version