Site icon Vistara News

Hema Chaudhary: ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು; ಚಿಕಿತ್ಸೆಗೆ ಸ್ಪಂದಿಸದ ನಟಿ

Actress Hema Chaudhary

ಬೆಂಗಳೂರು: ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ನಟಿ ಹೇಮಾ ಚೌಧರಿ (Hema Chaudhary) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳಿಂದ ಬ್ರೈನ್ ಹೆಮರೇಜ್‌ನಿಂದ (brain hemorrhage) ಬಳಲುತ್ತಿದ್ದರು ಎನ್ನಲಾಗಿದೆ. ತೀವ್ರ ನಿಗಾ ಘಟಕದಲ್ಲಿ ನಟಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೇ ವಿದೇಶದಲ್ಲಿರುವ ಮಗನ ಆಗಮನಕ್ಕೆ ಕಾಯುತ್ತಿದ್ದಾರೆ. ಮೊನ್ನೆಯಷ್ಟೇ (ಡಿ.18)ನಟಿ ಲೀಲಾವತಿ ಅವರ ಪುಣ್ಯತಿಥಿಯಲ್ಲಿ ನಟಿ ಆಗಮಿಸಿ, ವಿನೋದ್ ರಾಜ್ ಅವರಿಗೆ ಸಾಂತ್ವನ ಹೇಳಿದರು.

ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್‌, ಕಮಲ್ ಹಾಸನ್, ಚಿರಂಜೀವಿ, ಮೋಹನ್ ಬಾಬು, ಮಲಯಾಳಂ ಸೂಪರ್ ಸ್ಟಾರ್ ಪ್ರೇಮ್ ನಜೀರ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಹೀಗೆ ಅನೇಕ ನಟರ ಜತೆ ಹೇಮಾ ಚೌಧರಿ ತೆರೆ ಹಂಚಿಕೊಂಡಿದ್ದರು.

ಜಯಪ್ರಧಾ, ಜಯಸುಧಾ, ಶ್ರೀದೇವಿ, ಜಯಮಾಲ, ಆರತಿ, ಮಂಜುಳಾ, ಪದ್ಮಪ್ರಿಯ, ಲಕ್ಷ್ಮೀ ಮೊದಲಾದವರ ಜತೆ ತೆರೆಹಂಚಿಕೊಂಡಿದ್ದಾರೆ. ಶುಭಾಶಯ (ಚಲನಚಿತ್ರ) (1977), ಗಾಳಿಮಾತು(1981) ಮತ್ತು ವೀರಪ್ಪನಾಯ್ಕ(1997) ಚಿತ್ರಗಳಲ್ಲಿಯ ಅಮೋಘ ಅಭಿನಯದಿಂದ ಜನಮನ್ನಣೆ ಗಳಿಸಿದ್ದರು.

ಇದನ್ನೂ ಓದಿ: Actress Leelavathi: ಇಂದು ಹಿರಿಯ ನಟಿ ಲೀಲಾವತಿ ವೈಕುಂಠ ಸಮಾರಾಧನೆ

ಸುವರ್ಣ ವಾಹಿನಿಯ ʻಅಮೃತವರ್ಷಿಣಿʼ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿಯೂ ಜನಪ್ರಿಯರಾಗಿದ್ದಾರೆ. ಅತ್ತೆ ಶಕುಂತಲಾ ದೇವಿಯಾಗಿ ಪಾತ್ರ ನಿಭಾಯಿಸಿದ್ದರು. ಹೇಮಾ ಚೌಧರಿ ಚಲನಚಿತ್ರಕ್ಕೆ ಸಂಬಂಧಿಸಿದ ಅನೇಕ ಸಂಸ್ಥೆಗಳಲ್ಲಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿ, ಮೂರು ಬಾರಿ ಸೇವೆ ಸಲ್ಲಿಸಿರುವ ಹೇಮಾ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿಯೂ ಮೂರು ಬಾರಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ

ಸುವರ್ಣ ರತ್ನ ಪಶಸ್ತಿ, ಸುವರ್ಣ ಪರಿವಾರದ ಜನ ಮೆಚ್ಚಿದ ತಾರೆ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳು ಹೇಮಾ ಚೌಧರಿ ಅವರಿಗೆ ಲಭಿಸಿವೆ.

Exit mobile version