Site icon Vistara News

Actress Jayasudha | 64ನೇ ವಯಸ್ಸಿಗೆ ಉದ್ಯಮಿ ಜತೆ ಮದುವೆಯಾದ ನಟಿ ಜಯಸುಧಾ?

Actress Jayasudha

ಬೆಂಗಳೂರು : ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ತಮ್ಮ ಹೇಳಿಕೆಗೆ ಸಾಕಷ್ಟು ಸುದ್ದಿಯಲ್ಲಿರುವ ಬಹುಭಾಷಾ ನಟಿ ಜಯಸುಧಾ (Actress Jayasudha) ಅವರು ಮದುವೆ ಆಗಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಉದ್ಯಮಿ ಜತೆ ಮದುವೆಯಾಗಿದ್ದಾರೆ ಎನ್ನಲಾಗಿದೆ.

ನಿರ್ಮಾಪಕ ವಡ್ಡೆ ರಮೇಶ್ ಜತೆ ಮದುವೆಯಾಗಿದ್ದರು. ಇದು ತಮಿಳು ಚಿತ್ರೋದ್ಯಮದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ರಮೇಶ್ ಅವರಿಂದ ವಿಚ್ಚೇದನ ಪಡೆದುಕೊಂಡ ನಂತರ ಬಾಲಿವುಡ್ ನಟ ಜಿತೇಂದ್ರ ಕಪೂರ್ ಸಹೋದರ ಸಂಬಂಧಿ ನಿತಿನ್ ಕಪೂರ್ ಜತೆ ಸಪ್ತಪದಿ ತುಳಿದಿದ್ದರು. ನಿತಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡರು. ಮಕ್ಕಳೊಂದಿಗೆ ಒಂಟಿಯಾಗಿ ಜೀವನ ನಡೆಸುತ್ತಿದ್ದ ಜಯಸುಧಾ ಅವರು ಉದ್ಯಮಿ ಜತೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Thala-Thalapathy Fans War | ತುನಿವು- ವಾರಿಸು ಸಿನಿಮಾಗಳ ಮೊದಲ ದಿನದ ಕಲೆಕ್ಷನ್‌ ಎಷ್ಟು?

Actress Jayasudha

ಇತ್ತೀಚೆಗಷ್ಟೇ ನಡೆದ ಆಲಿ ಮಗಳ ಮದುವೆ ಮತ್ತು ವಾರಿಸು ಸಿನಿಮಾದ ಈವೆಂಟ್‌ಗೂ ಕೂಡ ಉದ್ಯಮಿಯನ್ನು ಜಯಸುಧಾ ಕರೆತಂದಿದ್ದರು.

ಕೆಲವು ದಿನಗಳ ಹಿಂದೆ ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ʻಅನ್‌ಸ್ಟಾಪೆಬಲ್‌ʼ ಒಟಿಟಿ ಕಾರ್ಯಕ್ರಮದಲ್ಲಿ ಕಂಗನಾ ರಣಾವತ್ (Kangana Ranaut) ಅವರ ಹೆಸರನ್ನೇ ಪ್ರಸ್ತಾಪಿಸಿ ತಾರತಮ್ಯದ ಕುರಿತು ನಟಿ ಜಯಸುಧಾ ಮಾತನಾಡಿದ್ದಾರೆ. ‘ಕಂಗನಾ ಅವರು ಹತ್ತು ಸಿನಿಮಾಗಳಲ್ಲಿಯೂ ನಟಿಸಿಲ್ಲ. ಅವರ ಯಾವ ಸಾಧನೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ದಕ್ಷಿಣದ ಕಲಾವಿದರಿಗೆ ಯಾಕೆ ಪದ್ಮಶ್ರಿ ಪ್ರಶಸ್ತಿ ಇಲ್ಲವೆಂದು ಹೇಳಿಕೆ ನೀಡಿದ್ದರು. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳಾಗಿತ್ತು.

ಇದನ್ನೂ ಓದಿ | Kangana Ranaut | 10 ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಕಂಗನಾಗೆ ಪದ್ಮಶ್ರೀ ಪ್ರಶಸ್ತಿ, ನಮಗೇಕಿಲ್ಲ: ನಟಿ ಜಯಸುಧಾ

Exit mobile version