Site icon Vistara News

Actress Jyothika : 25 ವರ್ಷಗಳ ನಂತರ ಬಾಲಿವುಡ್‌ಗೆ ಜ್ಯೋತಿಕಾ ವಾಪಸ್‌!

#image_title

ಮುಂಬೈ: ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಜ್ಯೋತಿಕಾ (Actress Jyothika) ಕೂಡ ಒಬ್ಬರು. ಕಳೆದ 25 ವರ್ಷಗಳಿಂದ ಸಿನಿ ರಂಗದಿಂದ ದೂರವಿದ್ದ ನಟಿ ಇದೀಗ ಮತ್ತೆ ಬಣ್ಣ ಹಚ್ಚಲಾರಂಭಿಸಿದ್ದಾರೆ. ನಟ ಅಜಯ್‌ ದೇವಗನ್‌ ಹಾಗೂ ಆರ್‌. ಮಾಧವನ್‌ ನಟನೆಯ ಸಿನಿಮಾದಲ್ಲಿ ಜ್ಯೋತಿಕಾ ನಟಿಸುತ್ತಿದ್ದಾರೆ. ಈ ವಿಚಾರದಲ್ಲಿ ಸಿನಿ ತಂಡ ಅಧಿಕೃತ ಮಾಹಿತಿ ನೀಡಿದೆ.

ವಿಕಾಸ್‌ ಬೆಹಲ್‌ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಒಂದು ಥ್ರಿಲ್ಲರ್‌ ಸಿನಿಮಾ ಆಗಿರಲಿದೆ. ಜ್ಯೋತಿಕಾ ಅವರು ಈ ಹಿಂದೆ ಅಜಯ್‌ ದೇವಗನ್‌ ಅವರ ಜತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿ ಅಜಯ್‌ಗೆ ಜತೆಯಾಗಲಿದ್ದಾರೆಯೋ ಅಥವಾ ಮಾಧವನ್‌ಗೆ ಜತೆಯಾಗಲಿದ್ದಾರೋ ಅಥವಾ ಬೇರೊಂದು ಪ್ರಮುಖ ಪಾತ್ರ ವಹಿಸಿಕೊಳ್ಳಲಿದ್ದಾರೋ ಎನ್ನುವ ಬಗ್ಗೆ ಸಿನಿಮಾ ತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: Suriya | ಸೂರರೈ ಪೊಟ್ರುಗೆ ರಾಷ್ಟ್ರೀಯ ಪ್ರಶಸ್ತಿ; ಸಂತಸ ಹಂಚಿಕೊಂಡ ಸೂರ್ಯ-ಜ್ಯೋತಿಕಾ
ಅಂದ ಹಾಗೆ ನಟಿ ಜ್ಯೋತಿಕಾ ಅವರು ಈಗಾಗಲೇ ಮತ್ತೊಂದು ಬಾಲಿವುಡ್‌ ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ರಾಜ್‌ಕುಮಾರ್‌ ಅವರ ಜತೆ “ಶ್ರೀ” ಸಿನಿಮಾದಲ್ಲಿ ನಟಿ ನಟಿಸಿದ್ದು, ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿದ್ದಾಗಿ ಜನವರಿ ತಿಂಗಳಲ್ಲೇ ಹೇಳಿಕೊಂಡಿದ್ದರು. ಈ ಚಿತ್ರಕ್ಕೆ ವಿಕಾಸ್ ಬೆಹಲ್‌ ಅವರ ನಿರ್ದೇಶನವಿದೆ.
ಜ್ಯೋತಿಕಾ ಮಲಯಾಳಂನ ʼಕಾತಲ್: ದಿ ಕೋರ್‌ʼ ಸಿನಿಮಾದಲ್ಲಿ ಮಮ್ಮುಟ್ಟಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಿಚನ್ ಖ್ಯಾತಿಯ ಜಿಯೋ ಬೇಬಿ ಅವರು ನಿರ್ದೇಶಿಸಿರುವ ಈ ಚಿತ್ರ ಕೌಟುಂಬಿಕ ಕಥೆಯಿರುವುದು ಎಂದು ಹೇಳಲಾಗಿದೆ. ಚಿತ್ರವು ಮೇ 11, 2023 ರಂದು ಥಿಯೇಟರ್‌ಗಳಿಗೆ ಬರಲಿದೆ.

Exit mobile version