ಬೆಂಗಳೂರು: ಕಾಜೋಲ್ ಲಸ್ಟ್ ಸ್ಟೋರೀಸ್ 2 (Lust Stories 2) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಸ್ಟ್ ಸ್ಟೋರೀಸ್ 2 ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಪ್ರಚಾರದ ಸಂದರ್ಭದಲ್ಲಿ ನಟ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೆಣ್ಣಿನ ಕಾಮ ಸಂತೃಪ್ತಿ ಪರಿಕಲ್ಪನೆಯನ್ನು ಸಮಾಜವು ತಿನ್ನುವುದು ಮತ್ತು ಕುಡಿಯುವುದನ್ನು ಸಾಮಾನ್ಯವಾಗಿ ಕಾಣುವ ರೀತಿಯಲ್ಲಿಯೇ ಕಾಣಬೇಕು ಎಂದು ಹೇಳಿದರು.
ಬಧಾಯಿ ಹೋ ಮೇಕರ್ ಅಮಿತ್ ಆರ್. ಶರ್ಮಾ ನಿರ್ದೇಶನದ ಲಸ್ಟ್ ಸ್ಟೋರೀಸ್ 2 ರಲ್ಲಿ, ಒಂದು ವಿಭಾಗದಲ್ಲಿ ಕಾಜೋಲ್ ನಟಿಸಿದ್ದಾರೆ. ಈ ವಿಭಾಗದಲ್ಲಿ ಕಾಜೋಲ್ ಪತಿಯಾಗಿ ನಟ ಕುಮುದ್ ಮಿಶ್ರಾ ನಟಿಸಿದ್ದಾರೆ. ಹೆಣ್ಣಿನ ಕಾಮ ಸಂತೃಪ್ತಿ ಪರಿಕಲ್ಪನೆಯನ್ನು ಕುರಿತು ಕಾಜೋಲ್ ಹೇಳಿದ ಬೋಲ್ಡ್ ಹೇಳಿಕೆ ವೈರಲ್ ಆಗುತ್ತಿದೆ.
ಕಾಜೋಲ್ ಹೇಳಿದ್ದೇನು?
ಒಂದು ಸಮಯದಲ್ಲಿ ಸಾಮಾಜಿಕವಾಗಿ ನಾವು ಅದರ ಬಗ್ಗೆ ತುಂಬಾ ಮುಕ್ತವಾಗಿದ್ದೆವು. ಅದು ನಮ್ಮ ಪ್ರಾಚೀನ ಭಾಗವಾಗಿತ್ತು. ಪಠ್ಯಗಳು ಮತ್ತು ನಮ್ಮ ಶಿಕ್ಷಣದಿಂದಾಗಿ ಯಾವುದನ್ನೂ ಮುಕ್ತವಾಗಿ ಹೇಳುತ್ತಿರಲಿಲ್ಲ. ಆದರೆ ಹೆಣ್ಣಿನ ʻಕಾಮ ಸಂತೃಪ್ತಿʼ ಪರಿಕಲ್ಪನೆ ಜೀವನದ ಅತ್ಯಂತ ಸಾಮಾನ್ಯ ಭಾಗವಾಗಿದೆ. ಕಾಮ ಸಂತೃಪ್ತಿ ಪರಿಕಲ್ಪನೆಯನ್ನು ಸಮಾಜವು ತಿನ್ನುವುದು ಮತ್ತು ಕುಡಿಯುವುದನ್ನು ಸಾಮಾನ್ಯವಾಗಿ ಕಾಣುವ ರೀತಿಯಲ್ಲಿಯೇ ಕಾಣಬೇಕುʼʼಎಂದರು.
ಸಿನಿಮಾದಲ್ಲಿ ಕಾಮ ವಿಕಾಸದ ಬಗ್ಗೆ ನಟಿ ಹೇಳಿದ್ದೇನು?
ಈ ಹಿಂದೆ ಪರದೆಯ ಮೇಲೆ ಒಂದು ಹಂತದಲ್ಲಿ ಕಾಮದ ಪರಿಕಲ್ಪನೆ ತೋರಿಸಲು ಎರಡು ಹೂವುಗಳು ಒಟ್ಟಿಗೆ ಸೇರುತ್ತಿದ್ದವು. ಎರಡು ಕೆಂಪು ಗುಲಾಬಿಗಳು ಒಟ್ಟಿಗೆ ಬರುತ್ತಿದ್ದವು. ಮುಂದೆ, ಅವಳು ಗರ್ಭಿಣಿಯಾಗಿದ್ದಾಳೆ ಎಂದು ತೋರಿಸುತ್ತಿದ್ದರು. ಆದರೆ ಈಗ ನಾವು ಒಂದು ಹೆಜ್ಜೆ ಮುಂದೆ ವಿಕಸನಗೊಂಡಿದ್ದೇವೆ ಮತ್ತು ಲಸ್ಟ್ ಸ್ಟೋರಿ 2 ಗಳಂತಹ ಬೋಲ್ಡ್ ವೆಬ್‌ಸಿರೀಸ್ ಮಾಡಲು ನಿರ್ಧರಿಸಿದ್ದೇವೆ. ಸಿನಿಮಾ ಸಮಾಜವನ್ನು ಪ್ರತಿಬಿಂಬಿಸುತ್ತದೆ ಎಂದು ನಾನು ನಂಬುತ್ತೇನೆ. ಇದೀಗ, ಚಲನಚಿತ್ರಗಳು ಇಂದು ಪ್ರೀತಿಯನ್ನು ವ್ಯಾಖ್ಯಾನಿಸಿರುವ ಭಾಷೆಯಲ್ಲಿ ಮಾತನಾಡುತ್ತಿವೆ” ಎಂದರು.
ಇದನ್ನೂ ಓದಿ: Tamannaah Bhatia: ಮೊದಲ ಡೇಟಿಂಗ್‌ನಲ್ಲಿ ಸೆಕ್ಸ್ ಮಾಡಿದ್ರಾ? ವಿಜಯ್ ವರ್ಮಾ ಉತ್ತರ ಹೀಗಿತ್ತು!
ʻʻಶಾಶ್ವತ ಪ್ರೇಮ ಕಥೆಗಳಿಗೆ ಸಂಬಂಧಿಸಿದಂತೆ, ಇಂದು ಯಾರೂ ಅದನ್ನು ನಂಬುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಯಾರೂ ಸಾಯಲು ಬಯಸುವುದಿಲ್ಲ .ಕೆಲವೊಂದು ಪ್ರೇಮಕಥೆಗಳಲ್ಲಿ ಜನರಿಗೆ ನಂಬಿಕೆ ಇಲ್ಲ, ನೀವಲ್ಲದಿದ್ದರೆ, ಇನ್ನೊಬ್ಬರು ಇರುತ್ತಾರೆ ಎಂದು ಬೇರೆ ಸಂಗಾತಿಯನ್ನು ಹುಡುಕಿಕೊಳ್ಳುತ್ತಾರೆʼ ಎಂದರು.
ಲಸ್ಟ್ ಸ್ಟೋರೀಸ್ 2 ರೋನಿ ಸ್ಕ್ರೂವಾಲಾ ಅವರ ಆರ್‌ಎಸ್‌ವಿಪಿ ಫಿಲ್ಮ್ಸ್ ಮತ್ತು ಆಶಿ ದುವಾ ಅವರ ಫ್ಲೈಯಿಂಗ್ ಯುನಿಕಾರ್ನ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ. ತಮನ್ನಾ ಭಾಟಿಯಾ, ವಿಜಯ್ ವರ್ಮಾ, ಅಮೃತಾ ಸುಭಾಷ್, ನೀನಾ ಗುಪ್ತಾ, ಅಂಗದ್ ಬೇಡಿ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸಿದ್ದಾರೆ. ಲಸ್ಟ್ ಸ್ಟೋರೀಸ್ 2 ಜೂನ್ 29 ರಂದು ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ.