ಮುಂಬೈ: ಎಷ್ಟೇ ಕಾಲ ಉರುಳಲಿ, ದಿಲ್‌ವಾಲ್ ದುಲ್ಹನಿಯಾ ಲೇ ಜಾಯೇಂಗೆ (dilwale dulhania le jayenge) ಸಿನಿಮಾ ಎಂದೆಂದಿಗೂ ಎಲ್ಲೆಲ್ಲರ ಮನಸ್ಸಲ್ಲೂ ಉಳಿದುಕೊಳ್ಳುವಂತದ್ದು. ಅದೇ ಕಾರಣಕ್ಕೆ ಮುಂಬೈನ ಮರಾಠಾ ಮಂದಿರದಲ್ಲಿ ಈ ಸಿನಿಮಾ 27 ವರ್ಷಗಳಿಂದಲೂ ತೆರೆಯಲ್ಲಿದೆ. ಈ ಅದ್ಭುತ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಮಾಡಬೇಕು ಎನ್ನುವ ಚರ್ಚೆಗಳೂ ಸಹ ಹಲವಾರು ಬಾರಿ ನಡೆದಿವೆ. ಆದರೆ ಈ ಬಗ್ಗೆ ಚಿತ್ರದ ನಟಿ ಕಾಜೋಲ್ (Actress Kajol) ಮಾತ್ರ ಬೇಡವೇ ಬೇಡ ಎಂದಿದ್ದಾರೆ.
ಇದನ್ನೂ ಓದಿ: South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!
ಸಂದರ್ಶನವೊಂದರಲ್ಲಿ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾ ರಿಮೇಕ್ ಮಾಡುವ ಬಗ್ಗೆ ಮಾತನಾಡಿರುವ ಕಾಜೋಲ್, “ಈ ಸಿನಿಮಾವನ್ನು ರಿಮೇಕ್ ಮಾಡಬೇಕು ಎಂದು ಎಂದಿಗೂ ನಾನು ಯೋಚಿಸುವುದಿಲ್ಲ. ಹಾಗೆಯೇ ಕಭಿ ಖುಷಿ ಕಭಿ ಗಮ್ ಸಿನಿಮಾವನ್ನೂ ಕೂಡ. ಮ್ಯಾಜಿಕ್ ಅನ್ನು ಒಮ್ಮೆ ಮಾತ್ರ ರಚಿಸಬಹುದು ಎಂದು ನಾನು ಭಾವಿಸುತ್ತೇನೆ. ನೀವು ಅದನ್ನು ಮರುಸೃಷ್ಟಿಸಿದರೆ, ಅದು ಕೇವಲ ಛಿದ್ರಗೊಳ್ಳುತ್ತದೆ ಮತ್ತು ಅದು ಅದೇ ಭಾವನೆಯನ್ನು ಹೊಂದಿರುವುದಿಲ್ಲ. ಅದು ಅಭಿಮಾನಿಗಳಿಗೆ ನಿರಾಸೆ ಉಂಟುಮಾಡುತ್ತದೆ ಅಷ್ಟೇ” ಎಂದು ಹೇಳಿದ್ದಾರೆ.
“ನೀವು ಸಿನಿಮಾವನ್ನು ಮೊದಲ ಬಾರಿಗೆ ನೋಡಿದಾಗ ಅದರ ಭಾವನೆಯನ್ನು ಅನುಭವಿಸುತ್ತೀರಿ. ಮತ್ತೆ ನೋಡಿದಾಗ ಅದನ್ನು ಪುನರಾವರ್ತಿಸಲು ಸಾಧ್ಯವಿಲ್ಲ” ಎಂದು ನಟಿ ಹೇಳಿದ್ದಾರೆ.
ಇದನ್ನೂ ಓದಿ: Star Fashion | ಫ್ರಿಂಝ್ ಮಿರರ್ ಡಿಸೈನರ್‌ವೇರ್‌ನಲ್ಲಿ ಮಿಂಚಿದ ನಟಿ ಕಾಜಲ್ ಅಗರ್‌ವಾಲ್
ಹಾಗೆಯೇ ಸಿನಿ ಕ್ಷೇತ್ರದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿರುವ ಬಗ್ಗೆಯೂ ಮಾತನಾಡಿರುವ ಅವರು, “ಸಿನಿ ಕ್ಷೇತ್ರದಲ್ಲಿ ಲಿಂಗ ಸಮತೋಲನೆ ನೋಡಲು ಖುಷಿಯಾಗುತ್ತದೆ. ಪ್ರಾಯೋಗಿಕ ಕಾರಣಗಳಿಂದಾಗಿ ಚಲನಚಿತ್ರೋದ್ಯಮವು ಯಾವಾಗಲೂ ಪುರುಷ ಪ್ರಧಾನವಾಗಿದೆ. DoP ಗಳಿಂದ ಹಿಡಿದು ಧ್ವನಿ ರೆಕಾರ್ಡಿಸ್ಟ್‌ಗಳವರೆಗೆ ಎಲ್ಲೆಡೆ ಈಗ ಮಹಿಳೆಯರು ಬರುತ್ತಿದ್ದಾರೆ. ಅದನ್ನು ನೋಡಲು ಸಂತೋಷವಾಗುತ್ತದೆ” ಎಂದು ಹೇಳಿದ್ದಾರೆ.