ಬೆಂಗಳೂರು: ನಟಿ ಕಾಜೋಲ್ (Actress Kajol) ಸದ್ಯ ಸೋಷಿಯಲ್ ಮೀಡಿಯಾಗಳಿಗೆ ಬೈಬೈ ಹೇಳಿದ್ದಾರೆ. ಇದೀಗ ಅವರ ಫ್ಯಾನ್ಸ್ ನಟಿಯ ನಿರ್ಧಾರಕ್ಕೆ ಅಚ್ಚರಿಗೆ ಒಳಗಾಗಿದ್ದಾರೆ. ಈ ಸುದ್ದಿಯನ್ನು ಕಾಜೋಲ್ ತನ್ನ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
“ನನ್ನ ಜೀವನದ ಅತ್ಯಂತ ಕಠಿಣ ಪ್ರಯೋಗಗಳಲ್ಲಿ ಇದೂ ಒಂದುʼʼ ಎಂದು ಕಾಜೋಲ್ ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ. “ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ” ಎಂದು ಶೀರ್ಷಿಕೆ ನೀಡಿದ್ದಾರೆ. ಈ ನಿರ್ಧಾರದ ಹಿಂದಿನ ಕಾರಣವನ್ನು ಕಾಜೋಲ್ ಉಲ್ಲೇಖಿಸದಿದ್ದರೂ, ಇದು ಅವರ ಮುಂಬರುವ ವೆಬ್ ಶೋ ʻದಿ ಗುಡ್ ವೈಫ್ʼ ಪ್ರಚಾರದ ಗಿಮಿಕ್ ಎಂತಲೂ ಕೇಳವರು ಕಮೆಂಟ್ ಮಾಡಿದ್ದಾರೆ.
ಕಾಜೋಲ್ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಮೆಂಟ್ ಮಾಡಲು ಆರಂಭಿಸಿದರು. ಯಾಕೆ ಇಂಥ ನಿರ್ಧಾರ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಶುಭವಾಗಲಿ ಎಂದು ಹೇಳಿದ್ದಾರೆ. ‘ಕೆಲವೊಮ್ಮೆ ಇದು ಒಳ್ಳೆಯದು. ಉತ್ತಮ ಆರೋಗ್ಯ ಬಯಸುತ್ತೇನೆ’ ಎಂದು ಹೇಳಿದ್ದಾರೆ. ನಿಮ್ಮ ಸಮಯ ನೀವು ತೆಗೆದುಕೊಳ್ಳಿ, ನಿಮ್ಮ ಜತೆ ಸದಾ ಇರುತ್ತೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Actress Kajol : ʼಕಪ್ಪಗಿದ್ದೆ, ದಪ್ಪಗಿದ್ದೆ ಎಂದು ಆಡಿಕೊಳ್ಳುತ್ತಿದ್ದರು…ʼ ಕಹಿ ನೆನಪುಗಳನ್ನು ಮೆಲಕು ಹಾಕಿದ ನಟಿ ಕಾಜೋಲ್
ಸಾಮಾಜಿಕ ಜಾಲತಾಣದಲ್ಲಿ ಕಾಜೋಲ್ ಆಗಾಗ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದರು. ಇತ್ತೀಚೆಗಷ್ಟೆ ಮಗಳ ವಿಚಾರಕ್ಕೆ ಕಾಜೋಲ್ ಟ್ರೋಲ್‌ಗಳಿಗೆ ಗುರಿಯಾಗಿದ್ದರು. ಕೆಲಸದ ಮುಂಭಾಗದಲ್ಲಿ, ಕಾಜೋಲ್ ಅಭಿನಯದ ʻಲಸ್ಟ್ ಸ್ಟೋರೀಸ್ 2ʼರ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಇದನ್ನು ಅಮಿತ್ ರವೀಂದ್ರನಾಥ್ ಶರ್ಮಾ, ಕೊಂಕಣ ಸೆಂಶರ್ಮಾ, ಆರ್ ಬಾಲ್ಕಿ ಮತ್ತು ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ. ನೀನಾ ಗುಪ್ತಾ, ವಿಜಯ್ ವರ್ಮಾ, ತಮನ್ನಾ ಭಾಟಿಯಾ ಮತ್ತು ಮೃಣಾಲ್ ಠಾಕೂರ್ ಸೇರಿದಂತೆ ಇತರರು ನಟಿಸಿದ್ದಾರೆ.