ಮುಂಬೈ: ಸೆಲೆಬ್ರಿಟಿಗಳು ಎಂದ ಮೇಲೆ ಮಾಧ್ಯಮದವರು ಅವರ ಸುತ್ತ ಮುಗಿಬೀಳುವುದು ಸಹಜ. ಅದರಲ್ಲೂ ಬಾಲಿವುಡ್ನ ಮಾಧ್ಯಮ ಫೋಟೋಗ್ರಾಫರ್ಗಳು ಸೆಲೆಬ್ರಿಟಿಗಳು ಎಲ್ಲೇ ಕಂಡರೂ ಬಿಡದೆ ಅವರ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಆ ರೀತಿಯ ಮಾಧ್ಯಮ ಫೋಟೋಗ್ರಾಫರ್ಗಳನ್ನು ನಿರ್ವಹಿಸುವುದರಲ್ಲಿ ನನಗಿಂತ ನನ್ನ ಮಗಳೇ ಬೆಸ್ಟ್ ಎಂದಿದ್ದಾರೆ ಬಾಲಿವುಡ್ ನಟಿ ಕಾಜೊಲ್(Actress Kajol).
ಸಾಮಾನ್ಯವಾಗಿ ಸ್ಟಾರ್ ಮಕ್ಕಳ ಮೇಲೆ ಮಾಧ್ಯಮದವರ ಕಣ್ಣು ಇದ್ದೇ ಇರುತ್ತದೆ. ಅವರು ಎಲ್ಲೇ ಇದ್ದರೂ ಅವರನ್ನು ಮಾತನಾಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಅದರಂತೆ ಕಾಜೊಲ್ ಅವರ ಮಗಳು ನಿಸಾ ದೇವಗನ್ ಅವರ ಮೇಲೂ ಮಾಧ್ಯಮದವರ ಕಣ್ಣಿದೆ. ಆದರೆ ನಿಸಾ ಮಾಧ್ಯಮ ಫೋಟೋಗ್ರಾಫರ್ಗಳನ್ನು ಅತ್ಯಂತ ಉತ್ತಮ ರೀತಿಯಲ್ಲಿ ಮತ್ತು ಘನತೆಯಿಂದ ನಿರ್ವಹಿಸುತ್ತಾಳೆ ಎಂದು ಕಾಜೋಲ್ ಹೇಳಿದ್ದಾರೆ. ತಮಗೆ ಅಷ್ಟೊಂದು ತಾಳ್ಮೆ ಇಲ್ಲವೆಂದೂ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral News : ಮಳೆಯಲ್ಲಿ ಜೊಮೆಟೊ ಡೆಲಿವರಿ ಏಜೆಂಟ್ ಡ್ಯಾನ್ಸ್! ಈ ಫೋಟೋ ಹಿಂದಿನ ರಹಸ್ಯ ಏನು?
ಕಾಜೊಲ್ ಮತ್ತು ನಟ ಅಜಯ್ ದೇವಗನ್ ಅವರು 1999ರಲ್ಲಿ ವಿವಾಹವಾದರು. ಅವರಿಗೆ ನಿಸಾ 2003ರಲ್ಲಿ ಜನಿಸಿದರೆ ಮಗ ಯುಗ್ 2010ರಲ್ಲಿ ಜನಿಸಿದರು. ಕಾಜೊಲ್ ಅವರು ನೈಸಾ ಅವರೊಂದಿಗೆ ಮೊದಲ ಬಾರಿಗೆ ಮಾಧ್ಯಮ ಫೋಟೋಗ್ರಾಫರ್ ಮುಂದೆ ಕಾಣಿಸಿಕೊಂಡಿದ್ದು ಜೈಪುರದಲ್ಲಂತೆ. ಅಲ್ಲಿ ಒಮ್ಮೆಲೆ ಫೋಟೋಗ್ರಾಫರ್ಗಳ ದಂಡನ್ನು ನೋಡಿದ್ದ ನಿಸಾ ಜೋರಾಗಿ ಅಳಲಾರಂಭಿಸಿದ್ದರಂತೆ. ಆದರೆ ಅವರನ್ನು ಕಾರಿನೊಳಗೆ ಕರೆದುಕೊಂಡು ಬಂದ ಕಾಜೋಲ್, “ಅವರು ನಮಗೆ ತೊಂದರೆ ಮಾಡಲು ಬಂದವರಲ್ಲ. ಅದು ಅವರ ಕೆಲಸ” ಎಂದು ತಿಳಿಹೇಳಿದ್ದರಂತೆ.
ಮಾಧ್ಯಮ ಪೋಟೋಗ್ರಾಫರ್ಗಳ ಜತೆ ಹೇಗೆ ವ್ಯವಹರಿಸಬೇಕು ಎಂದು ನಾನು ನನ್ನ ಮಗಳಿಗೆ ಹೇಳಿಕೊಡಲಿಲ್ಲ. ಅವಳಾಗಿ ಅವಳೇ ಅನುಭವಗಳ ಮೂಲಕ ಕಲಿತುಕೊಂಡಿದ್ದಾಳೆ. ಹೆಚ್ಚಾಗಿ ನಾನು ನನ್ನ ಮಕ್ಕಳನ್ನು ಮಾಧ್ಯಮದೆದುರು ತರುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral News : ಮಂಡ್ಯದಲ್ಲಿ ಬೈಕ್ ರೈಡಿಂಗ್ ವೇಳೆ ಎದ್ದುಬಂದ ಹಾವು; ಗಾಬರಿಯಾಗಿ ಜಿಗಿದೇ ಬಿಟ್ಟ ಸವಾರ
ನಿಸಾ ಅವರು ಸಿಂಗಾಪುರದ ಗ್ಲಿಯನ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇದೀಗ ಅವರು ಸ್ವಿಝರ್ಲ್ಯಾಂಡ್ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅವರು ಮುಂದೆ ಸಿನಿಮಾ ಕ್ಷೇತ್ರಕ್ಕೆ ಬರಲಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.