ಬೆಂಗಳೂರು: ಕೃತಿ ಶೆಟ್ಟಿ ಅಭಿನಯದ ಇತ್ತೀಚಿನ ಬಹುತೇಕ ತೆಲುಗು ಚಿತ್ರಗಳು ಸೋತು ಮಕಾಡೆ ಮಲಗಿವೆ. ನಾಗ ಚೈತನ್ಯ ಚಿತ್ರ ʻಕಸ್ಟಡಿʼ ಸಿನಿಮಾ ಮೇಲೆ ಸಿನಿರಸಿಕರಿಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ಕೂಡ ಸೋತಿತು. ಕೃತಿ ಶೆಟ್ಟಿ ಈಗ ತಮ್ಮ ಮುಂಬರುವ ತಮಿಳು ಚಿತ್ರ ಜಿನೀ, ಕಾರ್ತಿ 26 ಮತ್ತು ಹೆಸರಿಡದ ಶರ್ವಾ 35 ಎಂಬ ತೆಲುಗು ಚಲನಚಿತ್ರದ ಮೇಲೆ ಕೇಂದ್ರೀಕರಿಸಿದ್ದಾರೆ. ಇನ್ನಾದರೂ ನಟಿ ಸಿನಿಮಾಗಳ ಮೂಲಕ ಗೆಲ್ಲುತ್ತಾರಾ? ಎಂಬುದು ನೋಡಬೇಕಿದೆ. ಆದರೆ ಈಗ ನಟಿ ಸುದ್ದಿಯಲ್ಲಿರುವುದು ವೈಯಕ್ತಿಕ ವಿಚಾರವಾಗಿ. ನಟಿಗೆ (Krithi Shetty) ಕೇವಲ 12 ವರ್ಷ ಇರುವಾಗಲೇ ಅವರ ಕೈಯಲ್ಲಿ ಉದ್ಯೋಗವಿತ್ತು ಎಂಬುದು. ಈ ಬಗ್ಗೆ ಸಂದರ್ಶನವೊಂದರಲ್ಲಿ ನಟಿಯೇ ಮಾಹಿತಿ ಹಂಚಿಕೊಂಡಿದ್ದಾರೆ.
ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು. ಬಳಿಕ ತೆಲುಗು ಚಲನಚಿತ್ರ ʻಉಪ್ಪೇನಾʼದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಕೃತಿ ಕೇವಲ 12 ವರ್ಷ ವಯಸ್ಸಿನವರಾಗಿದ್ದಾಗ ತನಗೆ ಉದ್ಯೋಗವಿತ್ತು ಎಂದು ಬಹಿರಂಗಪಡಿಸಿದ್ದಾರೆ. ಹಾಗಾದರೆ ಯಾವ ಕೆಲಸ ಅದು?
ಕೃತಿ ಅವರು ಸಂಸದರ್ಶನಲ್ಲಿ ಈ ಬಗ್ಗೆ ತಮಾಷೆಯಾಗಿ ಮಾತನಾಡಿ ʻʻನಾನು ಮಗುವಾಗಿದ್ದಾಗ, ನನ್ನ ಅಮ್ಮ ದಿನಸಿ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಕಳುಹಿಸುತ್ತಿದ್ದರು. ಅದು ನನ್ನ ಮೊದಲ ಕೆಲಸವಾಗಿತ್ತು. ಏಕೆಂದರೆ ಪ್ರತಿ ಬಾರಿ ಅಂಗಡಿಗೆ ಹೋದಾಗ ನನಗೆ ಅಮ್ಮ 100-150 ರೂ. ಕೊಡುತ್ತಿದ್ದರು. ಇದು ನನ್ನ ಜೀವನದ ಮೊದಲ ಗಳಿಕೆಯಾಗಿತ್ತುʼʼ ಎಂದು ಹೇಳಿಕೊಂಡಿದ್ದಾರೆ.
ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ, ತೆಲುಗು, ತಮಿಳಿನಲ್ಲಿ ಗಮನ ಸೆಳೆಯುತ್ತಿದ್ದಾರೆ. ಮಲಯಾಳಂನ ಜನಪ್ರಿಯ ನಟ ಟೊವಿನೋ ಥಾಮಸ್ರ ಹೊಸ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.’ಅಜಯಂತೆ ರಂಧಂ ಮೋಷನಂ’ ಹೆಸರಿನ ಮಲಯಾಳಂ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.’ಅಜಯಂತೆ ರಂಧಂ ಮೋಷನಂ’ ಸಿನಿಮಾದಲ್ಲಿ ಲಕ್ಷ್ಮಿ ಹೆಸರಿನ ಪಾತ್ರದಲ್ಲಿ ಕೃತಿ ನಟಿಸುತ್ತಿದ್ದಾರೆ. ತೆಲುಗಿನ ಉಪ್ಪೇನಾ ಚಿತ್ರದಲ್ಲಿ ಕೃತಿಯ ತಂದೆಯಾಗಿ ವಿಜಯ್ ಸೇತುಪತಿ ನಟಿಸಿದ್ದರು. ಇದಾದ ಬಳಿಕ ನಟ ತಾನು ನಟಿಯ ಜತೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲು ಸಾದ್ಯವಿಲ್ಲ ಎಂದು ಹೇಳಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು.
ಇದನ್ನೂ ಓದಿ: Vijay Sethupathi: ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದ ವಿಜಯ್ ಸೇತುಪತಿ!
ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದಿದ್ದ ವಿಜಯ್ ಸೇತುಪತಿ!
2021ರಲ್ಲಿ ಬಿಡುಗಡೆಯಾದ ʻಉಪ್ಪೆನ’ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜತೆಯಾಗಿ ನಟಿಸಿದ್ದರು. ‘ಉಪ್ಪೆನ’ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಹೀಗಾಗಿ ಒಂದು ಸಿನಿಮಾದಲ್ಲಿ ಮಗಳಂತೆ ನೋಡಿದ ನಟಿಯ ಜತೆ ಮತ್ತೊಂದು ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡುವುದಿಲ್ಲ ಎಂಬುದಾಗಿ ಸೇತುಪತಿ ಹೇಳಿದ್ದರು. ತಮ್ಮಿಬ್ಬರನ್ನು ನಾಯಕ-ನಾಯಕಿಯನ್ನಾಗಿಸಿ ತಮಿಳು ಸಿನಿಮಾವೊಂದನ್ನು ಮಾಡುವುದಕ್ಕೆ ಆಫರ್ ಬಂದರೂ ವಿಜಯ್ ನಿರಾಕರಿಸಿದ್ದರು.
ಇದನ್ನೂ ಓದಿ: ‘Merry Christmas’Movie: ಕೊನೆಗೂ ʻಮೆರ‍್ರಿ ಕ್ರಿಸ್‌ಮಸ್ʼ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್
ಈ ಬಗ್ಗೆ ವಿಜಯ್ ಸೇತುಪತಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ʻಒಮ್ಮೆ ಮಗಳೆಂದು ಕಲ್ಪಿಸಿಕೊಂಡ ನಟಿಯ ಜತೆಗೆ ನಾನು ಹೇಗೆ ರೊಮ್ಯಾನ್ಸ್ ಮಾಡಲಿ? ಉಪ್ಪೆನ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುವಾಗ, ನನ್ನನ್ನು ನಿನ್ನ ತಂದೆ ಎಂದು ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ. ಆ ಸಿನಿಮಾ ಮಾಡುವಾಗ ನನ್ನ ಮಗನಷ್ಟೇ ಕೃತಿಗೂ ವಯಸ್ಸು. ನಾನು ಕೂಡ ಕೃತಿಯನ್ನು ಮಗಳಂತೆ ಭಾವಿಸಿದ್ದೇನೆ. ಹೀಗಿರುವಾಗ ಕೃತಿ ಜತೆಗೆ ರೊಮ್ಯಾನ್ಸ್ ಮಾಡುವುದಿಲ್ಲ’ ಎಂದು ಹೇಳಿದ್ದರು.