Site icon Vistara News

Actress Kushi Ravi : ಕೆ.ಆರ್.ಮಾರ್ಕೆಟ್‌ನಲ್ಲಿ ಹೂವುಗಳ ಮಧ್ಯೆ ‘ಫೋಕಸ್’ ಆದ ದಿಯಾ ಬ್ಯೂಟಿ

#image_title

ಬೆಂಗಳೂರು: ಕನ್ನಡದ ʼದಿಯಾʼ ಎಲ್ಲರ ಮನ ಗೆದ್ದ ಸಿನಿಮಾ. ಅದರಲ್ಲೂ ದಿಯಾ ಆಗಿ ಮಿಂಚಿದ ನಟಿ ಖುಷಿ (Actress Kushi Ravi) ಅಂತೂ ಅನೇಕ ಹುಡುಗರ ಮನಸ್ಸನ್ನು ಕದ್ದವರು ಎಂದೇ ಹೇಳಬಹುದು. ಸರಳ, ಸುಂದರ ನಟಿಯಾದ ಖುಷಿ ರವಿ ಇದೀಗ ಹೊಸ ಲುಕ್‌ನಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ.

ಇದನ್ನೂ ಓದಿ: Dasara Movie: ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ದಲ್ಲಿ ಮಿಂಚಲಿದ್ದಾರೆ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ


ಬೆಂಗಳೂರಿನ ಕೆ.ಆರ್‌.ಮಾರ್ಕೆಟ್‌ನಲ್ಲಿ ಬೆಳ್ಳಂಬೆಳಗ್ಗೆ ಹೂವುಗಳ ಮಧ್ಯೆ ಖುಷಿ ಕ್ಯಾಮೆರಾಗೆ ಫೋಸ್‌ ಕೊಟ್ಟಿದ್ದಾರೆ. ತಿಳಿನೀಲಿ ಬಣ್ಣದ ಸೀರೆಯುಟ್ಟು ಹೋಮ್ಲಿ ಲುಕ್‌ನಲ್ಲಿ ಕಂಗೊಳಿಸಿದ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.


ಫೋಟೋ ನೋಡುತ್ತಿರುವ ಅಭಿಮಾನಿಗಳು ಹೂವುಗಳ ಮಧ್ಯೆ ಮತ್ತೊಂದು ಚಂದದ ಹೂವು ಕಂಗೊಳಿಸುತ್ತಿದೆ ಎಂದು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.


ವಿಂಟೇಜ್ ಲುಕ್‌ನಲ್ಲಿ ಬಹಳ ಸೊಗಸಾಗಿ ಮೂಡಿಬಂದಿರುವ ಫೋಟೋಶೂಟ್ ಹಿಂದಿನ ಶಕ್ತಿ ನಿರ್ಮಾಪಕ ನಾಗರಾಜ್ ಸೋಮಯಾಜಿ. ಈ ಸ್ಪೆಷಲ್ ಫೋಟೋಶೂಟ್ ಐಡಿಯಾ ಹಾಗೂ ಫೋಟೋಗ್ರಫಿ ಕೈಚಳಕ ಇವರದ್ದೆ. ತಮ್ಮದೇ ಫೋಕಸ್ ಸ್ಟುಡಿಯೋನಡಿ ಬ್ಯೂಟಿಫುಲ್ ಫೋಟೋಶೂಟ್ ಮಾಡಿದ್ದಾರೆ.


ನಾಗರಾಜ್‌ ಅವರ ಫೋಕಸ್‌ ಫೋಟೋಗ್ರಫಿ ಸ್ಟುಡಿಯೊ ಸ್ಯಾಂಡಲ್‌ವುಡ್‌ ತಾರೆಗಳ ಅಚ್ಚುಮೆಚ್ಚಿನ ಸ್ಟುಡಿಯೋ ಎಂದೇ ಹೇಳಬಹುದು. ಈವರೆಗೆ ಹಲವಾರು ತಾರೆಯರು ನಾಗರಾಜ್‌ ಅವರ ಕ್ಯಾಮೆರಾಗೆ ಫೋಸ್‌ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಕಾರ್ಯಕ್ರಮಗಳನ್ನೂ ಸೆರೆಹಿಡಿಯುವುದು ಇದೇ ಫೋಕಸ್‌ ಫೋಟೋಗ್ರಫಿಯೇ.


ಸೆಲೆಬ್ರಿಟಿಗಳ ಫೋಟೋ ಮಾತ್ರವಲ್ಲದೆ ಮದುವೆ ಕಾರ್ಯಕ್ರಮಗಳ ಸೇರಿದಂತೆ ಇನ್ನಿತರ ಶುಭ ಸಂದರ್ಭದ ಚೆಂದದ ಫೋಟೋಗಳನ್ನು ಸೆರೆಹಿಡಿಯುವಲ್ಲಿ ಈ ಸ್ಟುಡಿಯೋ ಹೆಸರುವಾಸಿ.

Exit mobile version