ಬೆಂಗಳೂರು: ಕಿರುತೆರೆ ನಟಿ ನಿರೂಪಕಿ ಮಹಾಲಕ್ಷ್ಮಿ (Actress Mahalakshmi) ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಮಹಾಲಕ್ಷ್ಮಿ ಅವರ ಪತಿ ರವೀಂದರ್ ಚಂದ್ರಶೇಖರನ್ (Ravinder Chandrasekharan ) ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿ ಸುದ್ದಿಯಾಗಿದ್ದರು. ಚೆನ್ನೈ ಮೂಲದ ಉದ್ಯಮಿ ಬಾಲಾಜಿ ಎಂಬುವರ ಬಳಿ 15 ಕೋಟಿ ಪಡೆದು ವಂಚಿಸಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದರಿಂದ ಮಹಾಲಕ್ಷ್ಮಿ ಆಘಾತಕ್ಕೊಳಗಾಗಿದ್ದರು. ನ್ಯಾಯಾಲಯ ಜಾಮೀನು ಕೂಡ ತಿರಸ್ಕರಿಸಿದ್ದು, ರವೀಂದರ್ ಕಸ್ಟಡಿಯಲ್ಲಿ ಉಳಿಯಲಿದ್ದಾರೆ. ಇದೀಗ ಮಹಾಲಕ್ಷ್ಮಿ ಅವರು ರವೀಂದರ್ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ರವೀಂದರ್ ತನಗೆ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ಮಹಾಲಕ್ಷ್ಮಿ ತನ್ನ ಸ್ನೇಹಿತರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ರವೀಂದರ್ ತನಗೆ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ಮಹಾಲಕ್ಷ್ಮಿ ತನ್ನ ಸ್ನೇಹಿತರಿಗೆ ತಿಳಿಸಿದ್ದಾರೆ. ರವೀಂದರ್ ವಂಚನೆ ಪ್ರಕರಣದ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ. ಮದುವೆಗೂ ಮುನ್ನ ಈ ಎಲ್ಲ ವಿಷಯಗಳನ್ನು ಆಕೆಗೆ ತಿಳಿಯದಂತೆ ರಹಸ್ಯವಾಗಿಟ್ಟಿದ್ದ. ಸದ್ಯ ಮಹಾಲಕ್ಷ್ಮಿ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಒತ್ತಡದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ ಎಂದು ನಕಲಿ ದಾಖಲೆಗಳನ್ನು ಸಿದ್ಧಪಡಿಸಿ 16 ಕೋಟಿ ರೂ.ವರೆಗೆ ವಂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚೆನ್ನೈನ ಬಾಲಾಜಿ ಎಂಬವರು ನೀಡಿದ ದೂರಿನ ಮೇರೆಗೆ ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: Actress Mahalakshmi: ಮತ್ತೆ ಸಿನಿರಂಗಕ್ಕೆ ಮಹಾಲಕ್ಷ್ಮೀ; ʻTRP ರಾಮʼ ಟ್ರೈಲರ್ ಔಟ್!
ಇದನ್ನೂ ಓದಿ: Actress Mahalakshmi: ಮತ್ತೆ ಸಿನಿರಂಗಕ್ಕೆ ಮಹಾಲಕ್ಷ್ಮೀ; ʻTRP ರಾಮʼ ಟ್ರೈಲರ್ ಔಟ್!
ಮದುವೆಯ ವಿಚಾರದಲ್ಲಿ ಮಹಾಲಕ್ಷ್ಮೀ-ರವೀಂದರ್ ಫೇಮಸ್
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಿವಾಹವಾಗಿದ್ದ ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ (Actress Mahalakshmi) ಮತ್ತು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟೆಂಬರ್ 1ರಂದು ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡರು.
ಅಂದಹಾಗೆ, ಮಹಾಲಕ್ಷ್ಮಿ ಮತ್ತು ರವಿಚಂದ್ರಶೇಖರ್ ಅವರಿಬ್ಬರಿಗೂ ಇದು ಎರಡನೇ ಮದುವೆ. ವಯಸ್ಸಿನಲ್ಲೂ ತುಂಬ ಅಂತರವಿದೆ. ರವೀಂದರ್ ಚಂದ್ರಶೇಖರ್ ಅವರು ದಪ್ಪ ಇರುವ ವಿಷಯಕ್ಕೂ ಟ್ರೋಲ್ ಆಗಿದ್ದರು. ಮಹಾಲಕ್ಷ್ಮಿ ಅವರು ರವಿಚಂದ್ರಶೇಖರ್ ಬಳಿ ಇರುವ ಹಣ ನೋಡಿ ಮರುಳಾಗಿ ಮದುವೆಯಾಗಿದ್ದಾರೆ ಎಂದೂ ಅನೇಕರು ವ್ಯಂಗ್ಯವಾಡಿದ್ದರು. ಈ ಜೋಡಿಯ ಮಧ್ಯೆಯ ಪ್ರೀತಿಯೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಮಡದಿ ಮಹಾಲಕ್ಷ್ಮಿ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದ ರವಿಚಂದ್ರಶೇಖರ್, ‘ಈಕೆ ನನ್ನ ಜೀವನದ 8ನೇ ಅಚ್ಚರಿ’ ಎಂದು ಹೇಳಿದ್ದರು.