ಕಿರುತೆರೆ ನಟಿ ನಿರೂಪಕಿ ಮಹಾಲಕ್ಷ್ಮೀ (Actress Mahalakshmi) ಮತ್ತು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟೆಂಬರ್ 1ರಂದು ವಿವಾಹ ವಾರ್ಷಿಕೋತ್ಸವನ್ನು ಅದ್ಧೂರಿಯಾಗಿ ((Tamil TV actress Mahalakshmi) ಆಚರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ರವೀಂದರ್ ಚಂದ್ರಶೇಖರ್ (Ravindar Chandrasekar) ಅವರನ್ನು ಏಕಾಏಕಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ವಂಚನೆ ಪ್ರಕರಣದಲ್ಲಿ ರವೀಂದರ್ ಬಂಧನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ರವೀಂದರ್ ಚಂದ್ರಶೇಖರ್ ಅವರು ಲಿಬ್ರಾ ಪ್ರೊಡಕ್ಷನ್ಸ್ ಹೆಸರಿನಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ರವೀಂದರ್ ಚಂದ್ರಶೇಖರ್ ಹಾಗೂ ಮಹಾಲಕ್ಷ್ಮೀ ಆಗಾಗ ವಿವಾದಕ್ಕೆ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. ಇದೀಗ ವಂಚನೆ ಪ್ರಕರಣದಲ್ಲಿ ರವೀಂದರ್ ಚಂದ್ರಶೇಖರ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ ಎಂದು ನಕಲಿ ದಾಖಲೆಗಳನ್ನು ಸಿದ್ಧಪಡಿಸಿ 16 ಕೋಟಿ ರೂ.ವರೆಗೆ ವಂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚೆನ್ನೈನ ಬಾಲಾಜಿ ಎಂಬವರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
16 ಕೋಟಿ ರೂ. ವಂಚಿಸಿದ್ರಾ ರವೀಂದರ್?
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಕುರಿತು ರವೀಂದರ್ ಚಂದ್ರಶೇಖರನ್ ಅವರು ಬಾಲಾಜಿ ಅವರಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಹೆಚ್ಚು ಬಂಡವಾಳ ಹೂಡಿದರೆ ಪಾಲುದಾರನಾಗಿ ಸೇರಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ. ಇದನ್ನು ನಂಬಿದ ಬಾಲಾಜಿ ರವೀಂದರ್ ಚಂದ್ರಶೇಖರ್ ಅವರಿಗೆ 16 ಕೋಟಿ ರೂ. ಕೊಟ್ಟಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ರವೀಂದರ್ ಚಂದ್ರಶೇಖರ್ ನನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. 2021ರಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದೆ. ಅದೇ ರೀತಿ ರವೀಂದರ್ 2 ಜನರಿಗೆ 8 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವೀಂದರ್ ವಿರುದ್ಧ ಮತ್ತೊಂದು ರೀತಿಯ ದೂರು ಕೂಡ ದಾಖಲಾಗಿದೆ. ವಿಜಯ್ ಎಂಬುವವರ ಬಳಿ ಅವರು 15 ಲಕ್ಷ ರೂಪಾಯಿ ಪಡೆದಿದ್ದರು. ಈ ಹಣವನ್ನು ಸಿನಿಮಾ ಒಂದಕ್ಕೆ ಹೂಡಿಕೆ ಮಾಡಿದ್ದರು. ಬಂದ ಲಾಭದಲ್ಲಿ ಪಾಲು ನೀಡುವುದಾಗಿ ಭರವಸೆ ನೀಡಿ. ಆದರೆ, ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆದರೂ ರವೀಂದರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ವಿಜಯ್ ಅವರು ದೂರು ಕೊಟ್ಟಿದ್ದರು.
ಇದನ್ನೂ ಓದಿ: Actress Mahalakshmi: ಮಹಾಲಕ್ಷ್ಮೀ ಸ್ವಲ್ಪ ದುರಂಹಕಾರಿ, ಟಿವಿಯಲ್ಲಿ ಕಾಣುವಂತೆ ಆಕೆ ಇಲ್ಲ ಎಂದ ರವೀಂದರ್!
ಮದುವೆಯ ವಿಚಾರದಲ್ಲಿ ಮಹಾಲಕ್ಷ್ಮೀ-ರವೀಂದರ್ ಫೇಮಸ್
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಿವಾಹವಾಗಿದ್ದ ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮೀ (Actress Mahalakshmi) ಮತ್ತು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟೆಂಬರ್ 1ರಂದು ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡರು.
ಅಂದಹಾಗೆ, ಮಹಾಲಕ್ಷ್ಮೀ ಮತ್ತು ರವಿಚಂದ್ರಶೇಖರ್ ಅವರಿಬ್ಬರಿಗೂ ಇದು ಎರಡನೇ ಮದುವೆ. ವಯಸ್ಸಿನಲ್ಲೂ ತುಂಬ ಅಂತರವಿದೆ. ರವಿಚಂದ್ರಶೇಖರ್ ಅವರು ಗಾತ್ರದ ವಿಷಯಕ್ಕೂ ಟ್ರೋಲ್ ಆಗಿದ್ದರು. ಮಹಾಲಕ್ಷ್ಮೀ ಅವರು ರವಿಚಂದ್ರಶೇಖರ್ ಬಳಿ ಇರುವ ಹಣ ನೋಡಿ ಮರುಳಾಗಿ ಮದುವೆಯಾಗಿದ್ದಾರೆ ಎಂದೂ ಅನೇಕರು ವ್ಯಂಗ್ಯವಾಡಿದ್ದರು. ಈ ಜೋಡಿಯ ಮಧ್ಯೆಯ ಪ್ರೀತಿಯೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಮಡದಿ ಮಹಾಲಕ್ಷ್ಮೀ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದ ರವಿಚಂದ್ರಶೇಖರ್, ‘ಈಕೆ ನನ್ನ ಜೀವನದ 8ನೇ ಅಚ್ಚರಿ’ ಎಂದು ಹೇಳಿದ್ದರು.