ಬೆಂಗಳೂರು : ಸೆಲೆಬ್ರಿಟಿಗಳು ಟ್ಯಾಟೂ ಹಾಕಿಸಿಕೊಳ್ಳುವುದು ಟ್ರೆಂಡ್ ಆಗಿ ಬಿಟ್ಟಿದೆ. ತಮ್ಮ ನೆಚ್ಚಿನ ಕಾನ್ಸೆಪ್ಟ್ ನೋಡಿಕೊಂಡು ಅದಕ್ಕೆ ಹೊಂದಿಕೆಯಾಗುವಂತಹ ಸ್ಪೆಷಲ್ ಆಗಿರುವ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ. ಇದೀಗ ಸ್ಯಾಂಡಲ್ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಟಿಯ ಕುತ್ತಿಗೆ ಮೇಲೆ ಕಾಜಲ್ನಿಂದ ಅ, ಆ, ಇ, ಈ ಎಂದು ಕಾಜಲ್ನಲ್ಲಿ ಸುಂದರವಾಗಿ ಬರೆಯಲಾಗಿದೆ.
ಐಲೈನರ್ ಬ್ರಶ್ನಿಂದ ಅಕ್ಷರಗಳನ್ನು ಬರೆಯಲಾಗಿದ್ದು ಇದು ಸುಂದರವಾಗಿ ಕಂಡುಬಂದಿದೆ. ʻʻಕಾಜಲ್ ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ನಿರ್ಧರಿಸಿದೆ, ಹೇಗಿದೆ ಇದುʼʼ ಎಂದು ನಟಿ ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ. ನಟಿಯ ವಿಡಿಯೊವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಮಾನ್ವಿತಾ ಅವರು ಪೋಸ್ಟ್ ಮಾಡಿದ ಈ ವಿಡಿಯೊಗೆ ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ʻಶಿವ 143′ ಸಿನಿಮಾದಲ್ಲಿ ನಟಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ | Actress Meghana Raj | ಥಾಯ್ಲೆಂಡ್‌ನಲ್ಲಿ ನಟಿ ಮೇಘನಾ ರಾಜ್: ಫೋಟೊ ವೈರಲ್!
ಮಾನ್ವಿತಾ ಅವರ ವಿಡಿಯೊವನ್ನು ನೋಡಿದ ನಿರ್ದೇಶಕ ಕೆ. ಎಂ. ಚೈತನ್ಯ ಅವರು ಕಮೆಂಟ್ ಮಾಡಿದ್ದಾರೆ. ʻʻಕನ್ನಡ ಅಕ್ಷರ, ಹಿಂದಿ ಹಾಡು, ನೆಕ್ ಬೋರ್ಡುʼʼ ಎಂದು ಹೇಳಿದ್ದಾರೆ. ಈ ವಿಡಿಯೊ ಮಾನ್ವಿತಾ ಅವರು ಹಿಂದಿ ಹಾಡನ್ನು ಹಾಕಿದ್ದಾರೆ. ಇನ್ನೊಬ್ಬರು ಹಾಡು ಕನ್ನಡದಲ್ಲಿ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ | Vaishnavi Gowda | ವೈಯಕ್ತಿಕ ಜಂಜಾಟ ಮರೆತು ಟ್ಯಾಟೂ ಹಾಕಿಸಿಕೊಂಡ ವೈಷ್ಣವಿ ಗೌಡ: ಏನಿದರ ಅರ್ಥ?