Site icon Vistara News

Actress Meena: ಈ ಹೀರೊ ಮದುವೆ ದಿನ ದುಃಖಿಸಿದ್ದರಂತೆ ನಟಿ ಮೀನಾ; ಯಾರು ಆ ಹೀರೊ?

#image_title

ಚೆನ್ನೈ: ದಕ್ಷಿಣ ಭಾರತದ ಪ್ರಸಿದ್ಧ ನಟಿ ಮೀನಾ (Actress Meena) ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 40 ವರ್ಷಗಳು ಕಳೆದಿವೆ. 1982ರಲ್ಲಿ ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದ ಅವರ ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದ ಹಾಗೆ ಈ ನಟಿಗೆ ಸಿನಿಮಾ ಕ್ಷೇತ್ರದಲ್ಲಿ ಒಬ್ಬರ ಮೇಲೆ ಕ್ರಷ್‌ ಇತ್ತಂತೆ. ಅವರ ಮದುವೆ ದಿನ ನಟಿ ಅತ್ಯಂತ ದುಃಖ ಪಟ್ಟಿದ್ದರಂತೆ!

ಇದನ್ನೂ ಓದಿ: Bigg Boss Kannada | ಮನೆಯಲ್ಲಿ ಜೋರಾಗಿತ್ತು ಮಿಣ ಮಿಣ ಮೀನಾಕ್ಷಿ ಮದುವೆ!
ಮೀನಾ ಅವರು ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅದರಲ್ಲಿ ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಮೇಲೆ ಕ್ರಷ್‌ ಇತ್ತಂತೆ. ಅವರಂಥವರನ್ನೇ ಮದುವೆಯಾಗುತ್ತೇನೆ ಎಂದು ಯಾವಾಗಲೂ ತಾಯಿಯ ಬಳಿ ಹೇಳುತ್ತಿರುತ್ತಿದ್ದರಂತೆ. ಆದರೆ ಹೃತಿಕ್‌ ಮದುವೆಯಾದ ದಿನ ಮೀನಾಗೆ ಅತ್ಯಂತ ದುಃಖವಾಗಿತ್ತಂತೆ. ಈ ವಿಚಾರವನ್ನು ಅವರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಹಾಗೆಯೇ ನಟಿ ತನಗೆ ಬಂದ ಕೆಲವು ಅವಕಾಶಗಳನ್ನು ಮಿಸ್‌ ಮಾಡಿಕೊಂಡ ಬಗ್ಗೆಯೂ ಮಾತನಾಡಿದ್ದಾರೆ. ರಜನಿಕಾಂತ್‌ ಅವರ ʼಪಡೆಯಪ್ಪ ʼಸಿನಿಮಾದಲ್ಲಿ ನೆಗೆಟಿವ್‌ ರೋಲ್‌ನಲ್ಲಿ ನಟಿಸಲು ಅವಕಾಶ ಬಂದಿತ್ತು. ಆದರೆ ನಾಯಕ ನಟಿಯಾಗಬೇಕು ಎಂದುಕೊಂಡಿರುವವಳು ನೆಗೆಟಿವ್‌ ರೋಲ್‌ನಲ್ಲಿ ನಟಿಸಿದರೆ ಅವಕಾಶ ಕಡಿಮೆಯಾಗುತ್ತದೆ ಎಂದು ತಾಯಿ ಹೇಳಿದರು ಎನ್ನುವ ಕಾರಣಕ್ಕೆ ಅವರು ಆ ಸಿನಿಮಾದಲ್ಲಿ ನಟಿಸಲಿಲ್ಲವಂತೆ. ಮುಂದೆ ಆ ಪಾತ್ರದಲ್ಲಿ ರಮ್ಯ ಕೃಷ್ಣ ನಟಿಸಿದರು ಎಂದು ಮೀನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Queen 2 Web Series : ಶೂಟಿಂಗ್‌ ಫೋಟೊ ಹಂಚಿಕೊಂಡ ರಮ್ಯಾ ಕೃಷ್ಣನ್ 
ಮೀನಾ ಅವರು ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದಿರುವ ನಟಿ. ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರ ಅಭಿನಯದ ದೃಶ್ಯಂ ಸಿನಿಮಾ ಹಿಟ್‌ ಆಗಿತ್ತು.

Exit mobile version