Site icon Vistara News

Actress Meghana Raj | ಕ್ರಿಸ್ಮಸ್ ದಿನ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಮೇಘನಾ ರಾಜ್‌: ಏನದು?

Actress Meghana Raj

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ (Actress Meghana Raj) ಕ್ರಿಸ್ಮಸ್‌ಗೆ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಮೇಘನಾ ಅವರು ಹೊಸ ಯುಟ್ಯೂಬ್‌ ಚಾನೆಲ್ ಶುರು ಮಾಡಿದ್ದಾರೆ. ತಮ್ಮದೇ ಆದ ಯುಟ್ಯೂಬ್‌ ಚಾನೆಲ್ ಮೂಲಕ ಜನರಿಗೆ ಇನ್ನಷ್ಟು ಹತ್ತಿರ ಆಗುವ ಪ್ರಯತ್ನ ಮಾಡುತ್ತಿದ್ದಾರೆ.

ಪುತ್ರ ರಾಯನ್ ರಾಜ್ ಸರ್ಜಾ, ಪ್ರಮೀಳಾ ಜೋಶಾಯ್ ಹಾಗೂ ಸುಂದರ್ ರಾಜ್ ಜತೆ ಇರುವ ವಿಡಿಯೊ ತುಣುಕನ್ನು ಮೇಘನಾ ರಾಜ್ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಯನ್ ಸರ್ಜಾ ಕುರಿತ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿರುತ್ತಾರೆ. ಈ ಹಿಂದೆಯಷ್ಟೇ ಚಿರಂಜೀವಿ ಸರ್ಜಾ ಮತ್ತು ರಾಯನ್ ರಾಜ್ ಸರ್ಜಾ ಹೆಸರುಗಳನ್ನು ತಮ್ಮ ಕೈಮೇಲೆ ಶಾಶ್ವತವಾಗಿ ಇರಲಿ ಎಂದು ಮೇಘನಾ ರಾಜ್ ಅವರು ಟ್ಯಾಟೂ ಹಾಕಿಸಿಕೊಂಡಿದ್ದರು.

ಇದನ್ನೂ ಓದಿ | Actress Meghana Raj | ಥಾಯ್ಲೆಂಡ್‌ನಲ್ಲಿ ನಟಿ ಮೇಘನಾ ರಾಜ್‌: ಫೋಟೊ ವೈರಲ್‌!

ಥಾಯ್ಲೆಂಡ್‌ನಲ್ಲಿ ನಟಿ ಮೇಘನಾ ರಾಜ್‌
ಮೇಘನಾ ರಾಜ್‌ ತಮ್ಮ ಸ್ನೇಹಿತರ ಜತೆ ಥಾಯ್ಲೆಂಡ್‌ಗೆ ಹೋಗಿರುವ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದರು. ಬೀಚ್‌ನಲ್ಲಿ ಫ್ರೆಂಡ್ಸ್‌ ಜತೆ ಇರುವ ಫೋಟೊಗಳನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಹಲವಾರು ಪ್ರಾಜೆಕ್ಟ್‌ನಲ್ಲಿಯೂ ಬ್ಯುಸಿಯಾಗಿರುವ ಮೇಘನಾ ರಾಜ್‌ ಕೆಲ ದಿನಗಳ ಹಿಂದೆ ಕಲರ್ಸ್ ಕನ್ನಡದಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದರು.

ಇದನ್ನೂ ಓದಿ | Meghana Raj | ರಾಯನ್‌ ರಾಜ್‌ ಸರ್ಜಾಗೆ ಜನುಮದಿನ ಸಂಭ್ರಮ: ಸ್ಪೆಷಲ್‌ ವಿಡಿಯೊ ಹಂಚಿಕೊಂಡ ಮೇಘನಾ ರಾಜ್‌!

Exit mobile version