ಮುಂಬೈ: ಮೃಣಾಲ್ ಠಾಕೂರ್ (Actress Mrunal Thakur) ಅಭಿಮಾನಿಗಳ ನಿದ್ದೆ ಕೆಡಿಸಿರುವ ನಟಿ. ಆಗಾಗ ಮುದ್ದಾದ ವಿಡಿಯೊ ಮತ್ತು ಫೋಟೋಗಳ ಮೂಲಕ ನೆಟ್ಟಿಗರ ಮನಸ್ಸನ್ನೂ ಕದಿಯುತ್ತಲೇ ಇರುತ್ತಾರೆ. ಇದೀಗ ಆ ನಟಿ ಮತ್ತೊಂದು ವಿಡಿಯೊ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಒಬ್ಬ ಅಭಿಮಾನಿಯಂತೂ ನಾನು ಮದುವೆಗೇ ಸಿದ್ಧ ಎಂದಿದ್ದು, ನಟಿ ಅದಕ್ಕೆ ಮುದ್ದಾದ ಉತ್ತರವನ್ನೂ ಕೊಟ್ಟಿದ್ದಾರೆ.
ಇದನ್ನೂ ಓದಿ: Viral Video : “ಓಂ ಎಲಾನ್ ಮಸ್ಕಾಯ ನಮಃ” ಎನ್ನಲಾರಂಭಿಸಿದ ಬೆಂಗಳೂರಿಗರು! ಏನಿದು ವಿಶೇಷ ಪೂಜೆ?
ನಟಿ ತಮಿಳಿನಿ ಪಚಿಕಿಲಿ ಮುಥುಚರಂ ಸಿನಿಮಾದ ಉನ್ನುಕುಲ್ ನಾನೆ ಹಾಡಿಗೆ ವಿಡಿಯೊ ಮಾಡಿದ್ದಾರೆ. ಕೂದಲು ಸರಿಸಿಕೊಳ್ಳುವುದು, ಕಿವಿಯ ಓಲೆ ತೋರಿಸುವ ದೃಶ್ಯಗಳುಳ್ಳ ವಿಡಿಯೊ ಅದಾಗಿದೆ. ಆ ವಿಡಿಯೊ ಹಂಚಿಕೊಂಡಿರುವ ನಟಿ, “ಕ್ಯೂಟ್ ಎನಿಸಿತು. ಬಹುಶಃ ಆಮೇಲೆ ಡಿಲೀಟ್ ಮಾಡಬಹುದು” ಎಂದು ಬರೆದಿದ್ದಾರೆ.
ಈ ವಿಡಿಯೊವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಹಲವಾರು ಮಂದಿ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ಅಭಿಮಾನಿಯೊಬ್ಬರು, “ನನ್ನ ಕಡೆಯಿಂದ ಸಂಬಂಧ ಪಕ್ಕಾ” ಎಂದು ಬರೆದಿದ್ದಾರೆ. ಅದನ್ನು ನೋಡಿ ನಕ್ಕಿರುವ ನಟಿ “ನನ್ನ ಕಡೆಯಿಂದ ಒಪ್ಪಿಗೆಯಿಲ್ಲ” ಎಂದು ಬರೆದಿದ್ದಾರೆ. ಅಭಿಮಾನಿಗೆ ಪ್ರತಿಕ್ರಿಯಿಸಿರುವ ನಟಿಯ ಗುಣದ ಬಗ್ಗೆಯೂ ಜನರು ಕಾಮೆಂಟ್‌ಗಳಲ್ಲಿ ಚರ್ಚೆ ಮಾಡಿದ್ದಾರೆ.