Site icon Vistara News

Poonam Pandey: ʻಪೂನಂʼ ಬ್ಯಾಕ್‌ ಲೆಸ್‌, ʻಬ್ರಾʼ ಲೆಸ್‌ ಆದ್ರೂ ಸಖತ್‌ ಹಾಟ್‌ ಅಂದ್ರು ನೆಟ್ಟಿಗರು!

Actress Poonam Pandey

ಬೆಂಗಳೂರು: ನಟಿ ಪೂನಂ ಪಾಂಡೆ (Poonam Pandey) ಹಾಟ್‌ ಅವತಾರದಲ್ಲಿ ಕಾಣುವುದು ಇದೇನೂ ಮೊದಲೇನಲ್ಲ. ಇಂಟರ್ನೆಟ್ ಸೆನ್ಸೇಷನ್ ನಟಿ ಎಂತಲೇ ಖ್ಯಾತಿ ಪಡೆದ ಪೂನಂ ಇದೀಗ ಮತ್ತೆ ಅವರ ಫ್ಯಾನ್ಸ್‌ ನಿದ್ದೆಗೆಡಿಸಿದ್ದಾರೆ. ತನ್ನ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದ ಪೂನಂ ಇದೀಗ ಸಾರ್ವಜನಿಕವಾಗಿ ಹಾಟ್‌ ಅವತಾರದಲ್ಲಿ ಪೋಸ್‌ ನೀಡಿದ್ದಾರೆ. ಡೀಪ್‌ ನೆಕ್‌ಲೈನ್‌ ಜತೆ ಉದ್ದವಾದ ಫ್ಲೋಯಿ ಡ್ರೆಸ್ ಧರಿಸಿ ಪೂನಂ ಕಾಣಿಸಿಕೊಂಡಿದ್ದಾರೆ. ಬಿಳಿ-ನೀಲಿ ಮಿಶ್ರಿತ ಉಡುಪಿನಲ್ಲಿ ಸೆಕ್ಸಿಯಾಗಿ ಕಂಡಿದ್ದಾರೆ.

ಕಾರಿನಲ್ಲಿ ಹೋಗುವಾಗ ಅವರ ಫ್ಯಾನ್ಸ್‌ ಸುತ್ತುವರಿದಿದ್ದಾರೆ. ಇದೀಗ ಈ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ. ಅನೇಕರು ಪೂನಂ ಅವರ ಸೌಂದರ್ಯವನ್ನು ಹೊಗಳಿದರೆ ಕೆಲವರು ಟ್ರೋಲ್‌ ಮಾಡಿದ್ದಾರೆ. ʻʻನಿಮ್ಮನ್ನು ಹೀಗೆ ನೋಡುತ್ತ ಇದ್ದರೆ ಸಿಸ್ಟಮ್ ಹ್ಯಾಂಗ್ ಆಗೋದು ಗ್ಯಾರಂಟಿʼʼ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಮತ್ತೊಬ್ಬರು ʻʻಬ್ರಾ ಧರಿಸಲಿಲ್ಲವೇʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಶೇಪ್‌ನಲ್ಲಿ ಬೇರೆ ನಟಿಯರಿಗಿಂತ ಚೆನ್ನಾಗಿದ್ದಾರೆʼʼಎಂದು ಕಮೆಂಟ್‌ ಮಾಡಿದ್ದಾರೆ.

ಕರಣ್ವೀರ್ ಬೋಹ್ರಾ ಅವರ ಮ್ಯೂಸಿಕ್‌ ವಿಡಿಯೊದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಪೂನಂ ಪಾಂಡೆ ತನ್ನ ವಿಭಿನ್ನ ಸ್ಟೈಲ್‌ನಿಂದಲೇ ಜನಪ್ರಿಯರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಪೂನಂ ತನ್ನ ಫೋಟೊಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಅಭಿಮಾನಿಗಳ ಜತೆ ಟಚ್​ನಲ್ಲಿ ಇದ್ದಾರೆ. ಪೂನಂ ಅವರು ಕಂಗನಾ ರಣಾವತ್ ಅವರ OTT ಶೋ ‘ಲಾಕ್ ಅಪ್’ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದರು. ಪೂನಂ ಕಂಗನಾ ರಣಾವತ್ ಅವರ ರಿಯಾಲಿಟಿ ಶೋ ಲಾಕ್ ಅಪ್ ಸೀಸನ್ 1 ರಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Bajrang Punia: ಬಜರಂಗ್​ ಪೂನಿಯಗೆ ಸಮನ್ಸ್ ನೀಡಿದ ದೆಹಲಿ ಕೋರ್ಟ್

ಶೋನಲ್ಲಿದ್ದಾಗ, ಅವರು ಒಮ್ಮೆ ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿರುವುದನ್ನು ಪ್ರಸ್ತಾಪಿಸಿದರು. ಕಾರ್ಯಕ್ರಮದ ವೇಳೆ ಪೂನಂ ತನ್ನ ಪತಿ ಸ್ಯಾಮ್ ಬಾಂಬೆ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತಾಡಿದ ಪೂನಂ ಪಾಂಡೆ ತನ್ನ ಜೀವನದ ಕರಾಳ ರಹಸ್ಯಗಳನ್ನು ಹಂಚಿಕೊಂಡಿದ್ದರು. ಮ್ಮೆ ಸ್ಯಾಮ್ ನನ್ನನ್ನು ತುಂಬಾ ಹೊಡೆದಿದ್ದರು. ಅದು ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. 4 ಮಹಡಿಗಳ ಮನೆ ಇತ್ತು, ಆದರೆ ನನ್ನ ಇಷ್ಟದಂತೆ ಉಳಿಯಲು ಅಥವಾ ಯಾವುದೇ ಕೋಣೆಗೆ ಹೋಗಲು ನನಗೆ ಅವಕಾಶವಿರಲಿಲ್ಲ ಎಂದು ಹೇಳಿದ್ದರು.

ಪೂನಂ ಪಾಂಡೆ ತನ್ನ ಪ್ರೇಮಿ ಸ್ಯಾಮ್ ಬಾಂಬೆಯನ್ನು 2020ರಲ್ಲಿ ವಿವಾಹ ಆಗಿದ್ದರು. ಮದುವೆಯಾದ ಕೇವಲ 12 ದಿನಗಳ ನಂತರ, ಪೂನಂ ಅವರ ಪತಿಯನ್ನು ಗೋವಾ ಪೊಲೀಸರು ಹಲ್ಲೆ ಮತ್ತು ಕಿರುಕುಳದ ಆರೋಪದ ಮೇಲೆ ಬಂಧಿಸಿದ್ದರು. ಈ ಘಟನೆ ದಕ್ಷಿಣ ಗೋವಾದ ಕಾನಕೋನ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

Exit mobile version