Site icon Vistara News

ಪ್ರಣೀತಾ ಸುಭಾಷ್‌ಗೆ ಹೆಣ್ಣು ಮಗು ಜನನ; ಫೋಟೋಗಳನ್ನು ಶೇರ್‌ ಮಾಡಿದ ನಟಿ

Actress Pranitha Subhash Blessed With Daughter

ಸ್ಯಾಂಡಲ್‌ವುಡ್‌ ನಟಿ ಪ್ರಣೀತಾ ಸುಭಾಷ್‌ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. ʼನಾನು ಹೆಣ್ಣು ಮಗುವಿನ ತಾಯಿಯಾಗಿದ್ದೇನೆ. ಈ ಕ್ಷಣಗಳನ್ನು ನನಗೇ ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ತಾಯಿಯೇ ಸ್ತ್ರೀರೋಗ ತಜ್ಞೆಯಾಗಿದ್ದು ನನ್ನ ಅದೃಷ್ಟ. ಆದರೆ ಆಕೆಗೆ ಇದು ತುಂಬ ಭಾವನಾತ್ಮಕವಾದ ಕ್ಷಣವಾಗಿತ್ತು. ಆಸ್ಟರ್‌ ಆರ್‌ವಿ ಆಸ್ಪತ್ರೆಯ ಡಾ. ಸುನೀಲ್‌ ಈಶ್ವರ್‌ ಮತ್ತು ಅವರ ತಂಡದವರು ನನಗೆ ಸರಾಗ ಹೆರಿಗೆಯಾಗುವಂತೆ ನೋಡಿಕೊಂಡರು. ಹಾಗೇ, ಅನಸ್ತೇಶಿಯಾವನ್ನು ನೀಡಿ, ನನಗೆ ನೋವೆಂಬುದು ಸ್ವಲ್ಪವೂ ಅನುಭವಕ್ಕೆ ಬಾರದಂತೆ ನೋಡಿಕೊಂಡ ಡಾ. ಸುಬ್ಬು ಅವರಿಗೂ ಕೃತಜ್ಞತೆʼ ಎಂದು ಹೇಳಿದ್ದಾರೆ. ಹಾಗೇ, ನನ್ನ ಮಗುವಿನ ಜನನದ ಕತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ ಎಂದೂ ತಿಳಿಸಿದ್ದಾರೆ.

ನಟಿ ಪ್ರಣೀತಾ ಸುಭಾಷ್‌ 2021ರ ಮೇ ತಿಂಗಳಲ್ಲಿ ತಮ್ಮ ಬಹುಕಾಲದ ಸ್ನೇಹಿತ ನಿತಿನ್‌ ರಾಜು ಅವರೊಂದಿಗೆ ಸರಳವಾಗಿ ಮದುವೆಯಾಗಿದ್ದರು. ಕೊವಿಡ್‌ 19 ಹಿನ್ನೆಲೆಯಲ್ಲಿ ಇವರ ಆಪ್ತರು ಮಾತ್ರ ವಿವಾಹದಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗಷ್ಟೇ ಅವರ ಸೀಮಂತ ಸಮಾರಂಭ ಭರ್ಜರಿಯಾಗಿ ನಡೆದಿತ್ತು. ಕನ್ನಡದಲ್ಲಿ ಪೊರ್ಕಿ ಸಿನಿಮಾದಲ್ಲಿ ನಟಿಸಿದ್ದ ಅವರು ಬಳಿಕ ಬಹುಭಾಷಾ ಚಿತ್ರಗಳಲ್ಲೂ ತೊಡಗಿಸಿಕೊಂಡಿದ್ದರು. 2019ರಲ್ಲಿ ಕೊನೇ ಬಾರಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಗೋದ್ರಾʼ ಸಿನಿಮಾ ಟೈಟಲ್‌ ಚೇಂಜ್‌ ಆಯ್ತು ಡಿಯರ್‌ !

Exit mobile version