Site icon Vistara News

Actress Priyamani | ʻ56ʼ ಟ್ರೈಲರ್‌ ಔಟ್‌: ಸಿಬಿಐ ಅಧಿಕಾರಿಯಾಗಿ ನಟಿ ಪ್ರಿಯಾಮಣಿ

Actress Priyamani (56 trailer out)

ಬೆಂಗಳೂರು: ನಟಿ ಪ್ರಿಯಾಮಣಿ ಅಭಿನಯದ ʻ56ʼ ಚಿತ್ರದ (Actress Priyamani) ಟ್ರೈಲರ್‌ ಬಿಡುಗಡೆಗೊಂಡಿದೆ. ಪ್ರಿಯಾಮಣಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ರೆಡ್ಡಿ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕರಾಗಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ‌ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ಮೆಡಿಕಲ್‌ ಮಾಫಿಯಾ ಸುತ್ತ ನಡೆದಿರುವ ಕಥೆ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದರಲ್ಲಿ ಪ್ರಿಯಾಮಣಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ದೀಪಕ್ ಶೆಟ್ಟಿ, ರಮೇಶ್ ಭಟ್ ಮತ್ತು ವೀಣಾ ಪೊನ್ನಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ರಾಜೇಶ್ ಅನಂತಲೀಲಾ ನಿರ್ದೇಶಿಸಿದ್ದಾರೆ. ಕೊನೆಯದಾಗಿ ʻವಿರಾಟ ಪರ್ವಂʼನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಮಣಿ, ವೆಂಕಟ್ ಪ್ರಭು ನಿರ್ದೇಶನದ ಎನ್‌ಸಿ 22 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ | Priyamani Birthday : ಬಹುಭಾಷಾ ನಟಿಯ ಫಿಟ್‌ನೆಸ್‌ ರಹಸ್ಯ ಇಲ್ಲಿದೆ

ಸಂಚಿತ್ ಫಿಲ್ಮ್ಸ್‌ ವೆಂಕಟ್ ಗೌಡ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Stars Festive Fashion | ಟ್ರೆಡಿಷನಲ್‌ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

Exit mobile version