Site icon Vistara News

Actress Priyamani : ಸಿನಿಮಾದಲ್ಲಿನ್ನು ಕಿಸ್‌ ಕೊಡೋದಿಲ್ಲ; ಪ್ರಿಯಾಮಣಿಗೆ ಗಂಡ ಮುಸ್ತಫಾನ ಭಯ!

Actress Priyamani

ನಟಿ ಪ್ರಿಯಾಮಣಿ (Actress Priyamani) ದಕ್ಷಿಣ ಭಾರತದ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಸಿನಿಮಾ ಕ್ಷೇತ್ರಕ್ಕೆ ಬಂದು 20 ವರ್ಷಗಳನ್ನು ಪೂರ್ಣಗೊಳಿಸಿರುವ ಪ್ರಿಯಾಮಣಿ ಇದೀಗ ತಮ್ಮ ವೃತ್ತಿ ಜೀವನದ ಬಗ್ಗೆ ದೊಡ್ಡದೊಂದು ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಅದೇನೆಂದರೆ, ತೆರೆ ಮೇಲೆ ಮುತ್ತನ್ನು ಕೊಡುವ ಸೀನ್‌ನಲ್ಲಿ ಭಾಗವಹಿಸುವುದಿಲ್ಲ ಎನ್ನುವುದು.

ಖಾಸಗಿ ವಾಹಿನಿಯೊಂದರ ಜತೆ ಸಂದರ್ಶನದಲ್ಲಿ ಮಾತನಾಡಿರುವ ನಟಿ ಈ ಸಂಗತಿ ತಿಳಿಸಿದ್ದಾರೆ. “ಇನ್ನು ಮುಂದೆ ನಾನು ಕಿಸ್‌ ಕೊಡುವ ದೃಶ್ಯಗಳಲ್ಲಿ ನಟಿಸುವುದಿಲ್ಲ. ಇದು ಕೇವಲ ನನ್ನ ನಟನಾ ವೃತ್ತಿಯ ಭಾಗ ಎನ್ನುವುದು ನನಗೆ ಗೊತ್ತು. ಆದರೆ ಮದುವೆ ಆದ ಮೇಲೆ ಇನೊಬ್ಬ ಗಂಡಸಿಗೆ ಮುತ್ತಿಡುವುದು ನನಗೆ ಸರಿಕಾಣುವುದಿಲ್ಲ. ಹಾಗೆ ಮಾಡಿದರೆ ನಾನು ನನ್ನ ಪತಿಗೆ ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ಅಂತಹ ದೃಶ್ಯಗಳಲ್ಲಿ ಇನ್ನು ಮುಂದೆ ನಾನು ನಟಿಸುವುದಿಲ್ಲ” ಎಂದು ಹೇಳಿದ್ದಾರೆ ಪ್ರಿಯಾ ಮಣಿ.

ಇದನ್ನೂ ಓದಿ: Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್​ ಫ್ಯಾಕ್ಟರಿ
“ಹೆಚ್ಚೆಂದರೆ ಕೆನ್ನೆಗೆ ಮುತ್ತು ಕೊಡಲು ಒಪ್ಪುತ್ತೀನಿ. ಆದರೆ ಅದಕ್ಕಿಂತ ಹೆಚ್ಚಿನ ದೃಶ್ಯಗಳಲ್ಲಿ ನಾನು ನಟಿಸುವುದಿಲ್ಲ. ಅಂತಹ ಪಾತ್ರಗಳು ಬಂದರೆ ಅವುಗಳನ್ನು ಒಪ್ಪಿಕೊಳ್ಳುವುದಿಲ್ಲ. ನನ್ನ ಯಾವುದೇ ಸಿನಿಮಾ ಅಥವಾ ವೆಬ್‌ ಸೀರಿಸ್‌ ಬಿಡುಗಡೆಯಾದರೆ ಅದನ್ನು ನನ್ನ ಮತ್ತು ನನ್ನ ಪತಿಯ ಕುಟುಂಬ ನೋಡುತ್ತದೆ. ಹಾಗೆ ನೋಡುವಾಗ ಅವರಿಗೆ ʼನನ್ನ ಸೊಸೆ ಏಕೆ ಮದುವೆ ಆದ ಮೇಲೂ ಈ ರೀತಿ ದೃಶ್ಯಗಳಲ್ಲಿ ನಟಿಸುತ್ತಿದ್ದಾಳೆʼ ಎಂದು ಅವರ ಮನಸ್ಸಿಗೆ ಅನಿಸುವುದು ನನಗೆ ಇಷ್ಟವಿಲ್ಲ. ಅವರೇನು ಆ ವಿಚಾರದಲ್ಲಿ ನನ್ನನ್ನು ಪ್ರಶ್ನಿಸುವುದಿಲ್ಲವಾದರೂ ನನಗೇ ಆ ರೀತಿಯಲ್ಲಿ ಕಾಣಿಸಿಕೊಳ್ಳುವುದು ಇಷ್ಟವಿಲ್ಲ” ಎಂದು ನಟಿ ಹೇಳಿದ್ದಾರೆ.

ಸದ್ಯ ನಟಿ ಜವಾನ್‌ ಅಂಡ್‌ ಮೈದಾನ್‌ ವೆಬ್‌ ಸೀರಿಸ್‌ನಲ್ಲಿ ನಟಿಸುತ್ತಿದ್ದು, ಅದರಲ್ಲಿನ ಸಂಚಿಕೆಯಲ್ಲಿ ಈ ರೀತಿಯ ದೃಶ್ಯ ಎದುರಾದುದರ ಬಗ್ಗೆಯೂ ಮಾತನಾಡಿದ್ದಾರೆ. ” ಈ ಸೀರಿಸ್‌ನಲ್ಲಿ ನನ್ನ ಪತಿ ಸಲಿಂಗಕಾಮಿ ಆಗಿರುತ್ತಾನೆ. ಅದರಲ್ಲಿ ಸ್ವಲ್ಪ ವಯಸ್ಕರ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಅದರಲ್ಲಿ ಕಿಸ್‌ ಸೀನ್‌ ಇಲ್ಲವೆಂದು ಖಚಿತವಾದ ಮೇಲೆಯೇ ನಾನು ಆ ಸೀರಿಸ್‌ನಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದು” ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಹಿಂದುಗಳ ಮೆಡಿಕಲ್‌ ಶಾಪ್‌ಗಳಿಂದ ಔಷಧ ಖರೀದಿಸದಿರಿ; ಮುಸ್ಲಿಮರಿಗೆ ಬೆಂಗಳೂರು ಮೌಲ್ವಿ ಕರೆ
ಪ್ರಿಯಾ ಮಣಿ ಅವರು 2003ರಲ್ಲಿ ʼಎವರೆ ಆತಗಾಡುʼ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಕಾಲಿಟ್ಟವರು. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿರುವ ಅವರು ಹಿಂದಿಯ ಚೆನ್ನೈ ಎಕ್ಸ್‌ಪ್ರೆಸ್‌ ಸಿನಿಮಾದಲ್ಲಿ ʼ1 2 3 4 ಗೆಟ್‌ ಆನ್‌ ಡಿ ಡ್ಯಾನ್ಸ್‌ ಫ್ಲೋರ್‌ʼ ಹಾಡಿಗೆ ಹೆಜ್ಜೆ ಹಾಕಿದ್ದರು. 2017ರಲ್ಲಿ ನಟಿ ಮುಸ್ತಫಾ ರಾಜ್‌ ಎಂಬ ಮುಸ್ಲಿಂ ವ್ಯಕ್ತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Exit mobile version