ಬೆಂಗಳೂರು: ಖ್ಯಾತ ಹಿರಿಯ ನಟಿ, ಮಲಯಾಳಂ ನಟಿ ಥಾರಾ ಕಲ್ಯಾಣ್ ಅವರ ತಾಯಿ ಆರ್ ಸುಬ್ಬಲಕ್ಷ್ಮಿ (R Subbalakshmi) ನವೆಂಬರ್ 30ರಂದು ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. ಆರ್ ಸುಬ್ಬಲಕ್ಷ್ಮಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ನಿಧನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಂತ್ಯಕ್ರಿಯೆಯ ಬಗ್ಗೆ ಕುಟುಂಬ ಇನ್ನಷ್ಟೇ ಮಾಹಿತಿ ಹಂಚಿಕೊಳ್ಳಬೇಕಿದೆ. ‘ದಿಲ್ ಬೆಚಾರ’ದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಅಜ್ಜಿಯಾಗಿ ನಟಿಸಿದ್ದರು.
ವಿವಿಧ ಭಾಷೆಯ ಸಿನಿಮಾಗಳಲ್ಲಿ ಅಜ್ಜಿ ಪಾತ್ರಗಳನ್ನು ನಿರ್ವಹಿಸಿ ಹೆಸರುವಾಸಿಯಾಗಿದ್ದರು. ಸುಬ್ಬಲಕ್ಷ್ಮಿ ಕೇವಲ ನಟಿಯಾಗಿರಲಿಲ್ಲ. ಅವರು ಸಂಗೀತದಲ್ಲಿ ತೊಡಗಿಸಿಕೊಂಡಿದ್ದರು. ಮತ್ತು ಚಿತ್ರಕಲಾವಿದರಾಗಿದ್ದರು. ಮಲಯಾಳಂನಲ್ಲಿ ಅವರ ಕೆಲವು ಪ್ರಸಿದ್ಧ ಅಭಿನಯಗಳಲ್ಲಿ ‘ಕಲ್ಯಾಣರಾಮನ್, ‘ಪಾಂಡಿಪ್ಪಾ’ ಮತ್ತು ‘ನಂದನಂ’ ಸೇರಿವೆ.
ಮಲಯಾಳಂ ಮಾತ್ರವಲ್ಲದೆ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಸಂಸ್ಕೃತ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ‘ಇನ್ ದಿ ನೇಮ್ ಆಫ್ ಗಾಡ್’ ಎಂಬ ಇಂಗ್ಲಿಷ್ ಚಿತ್ರದಲ್ಲೂ ಅವರು ಪಾತ್ರ ನಿರ್ವಹಿಸಿದ್ದಾರೆ. ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: Armaan Kohli: ಬಾತ್‌ರೂಮ್‌ನಲ್ಲಿ ಕುಸಿದು ಬಿಗ್ ಬಾಸ್ ಮಾಜಿ ಸ್ಪರ್ಧಿ ತಂದೆ ನಿಧನ!
Malayalam cinema’s ‘beloved grandma’ R Subbalakshmi passes away at 87https://t.co/uBTTKLhUik
— Dhanya Rajendran (@dhanyarajendran) December 1, 2023
Video: Actress R Subbalakshmi passed away https://t.co/WvbGWSca9W
— Kerala9.com News & Gallery (@kerala9) November 30, 2023
ತಮಿಳಿನಲ್ಲಿ, ದಳಪತಿ ವಿಜಯ್ ಅವರ ‘ಬೀಸ್ಟ್’ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಹಿಂದಿಯಲ್ಲಿ ‘ದಿಲ್ ಬೆಚಾರ’ದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಅಜ್ಜಿಯಾಗಿ ನಟಿಸಿದ್ದರು. ಸುಬ್ಬಲಕ್ಷ್ಮಿ ಅವರು ದಕ್ಷಿಣ ಭಾರತದಲ್ಲಿ ಆಕಾಶವಾಣಿಯ ಮೊದಲ ಮಹಿಳಾ ಸಂಯೋಜಕಿ ಆಗಿದ್ದರು. ಡಬ್ಬಿಂಗ್ ಕಲಾವಿದೆಯಾಗಿಯೂ ಕೆಲಸ ಮಾಡಿದ್ದರು. 65 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.