ಬೆಂಗಳೂರು: ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರಿಚ್ಚಿ’ ಚಿತ್ರ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿರುವ ರಮೋಲಾ (Actress Ramola) ಈ ಸಿನಿಮಾ ನಾಯಕಿ. ಇದೀಗ ಈ ಚಿತ್ರದ ಕಾಲ್ಶೀಟ್ ವಿಚಾರಕ್ಕೆ ಕಿತ್ತಾಟ ಆಗಿದೆ. ಇದೀಗ ರಿಚ್ಚಿ ಅವರು ನಟಿ ಕಾಲ್ಶೀಟ್ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈಗ ನಟಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಾರುತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಿಚ್ಚಿ ಸಿನಿಮಾ ತಯಾರಾಗಿದೆ. ಹಾಡುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ನಟಿ ವಿರುದ್ಧ ನಟ, ನಿರ್ದೇಶಕ, ನಿರ್ಮಾಪಕ ರಿಚ್ಚಿ ಆರೋಪಿಸಿದ್ದಾರೆ. ʻʻ2022ರಲ್ಲಿ ಅಗ್ರಿಮೆಂಟ್ ಆಗಿತ್ತು. ಈಗ ಇನ್ನೂ ಎರಡು ದಿನ ಕಾಲ್ ಶೀಟ್ ಬೇಕಿತ್ತು. ಪಿಜಿ ಬ್ಯುಸಿನೆಸ್ಗೆ ಪಾರ್ಟನರ್ ಆಗಿಲ್ಲ ಎಂದು ಕಾಲ್ ಶೀಟ್ ನಟಿ ಕೊಟ್ಟಿಲ್ಲ. 10 ರಿಂದ 12 ದಿನ ಶೂಟಿಂಗ್ ಕೂಡ ಮಾಡಲಾಗಿದೆ. ಇನ್ನೂ ಎರಡು ದಿನ ಕಾಲ್ ಶೀಟ್ ಬೇಕಿದೆ. ಸಂಭಾವನೆ ಕ್ಲಿಯರ್ ಮಾಡಿದರೂ ಅವರು ಶೂಟಿಂಗ್ಗೆ ಬರುತ್ತಿಲ್ಲ. ಗಾಂಧಿನಗರದ ಕನಿಷ್ಕ ಹೊಟೇಲ್ ಬಳಿ ಇರುವ ವಕೀಲರ ಕಚೇರಿಯಲ್ಲಿ ಅ.17ರ,ದು ಮಾತು ಕತೆ ಕೂಡ ನಡೆದಿತ್ತುʼʼಎಂದಿದ್ದಾರೆ. ಈ ಮಧ್ಯೆ ನಟ ಹಾನೂ ನಟಿ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ನಟಿ ರಮೋಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ʻʻಅಗ್ರಿಮೆಂಟ್ ಮುಗಿದು ಒಂದು ವರ್ಷವಾಗಿದೆ. ಕಳೆದ ಮೂರು ವರ್ಷದಿಂದ ಸಿನಿಮಾ ಚಿತ್ರೀಕರಣ ಮಾಡುತ್ತಲೇ ಇದ್ದಾರೆ. 6 ತಿಂಗಳಿಗೆ ಒಮ್ಮೆ ಶೂಟ್ ಮಾಡುತ್ತಾರೆ. ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಸಿನಿಮಾದಲ್ಲಿ ಕೂಡ ಕನ್ನಡದ ಆರ್ಟಿಸ್ಟ್ಗಳಿಗೆ ತಿರುಗೇಟು ಕೊಡುವಂತಹ ಡೈಲಾಗ್ಗಳನ್ನು ಇಟ್ಟಿದ್ದಾರೆʼʼಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Priyanka Upendra: ಪ್ರಿಯಾಂಕಾ ನಟನೆಯ ‘ಕ್ಯಾಪ್ಚರ್’ ಸಿನಿಮಾ; 60 ಅಡಿ ಎತ್ತರದ ಟೈಟಲ್ ಪೋಸ್ಟರ್ ರಿಲೀಸ್!
ಇತ್ತೀಚೆಗೆ ‘ರಿಚ್ಚಿ’ ಚಿತ್ರಕ್ಕಾಗಿ ಕುನಾಲ್ ಗಾಂಜಾವಾಲ ಅವರು ಬಹಳ ವರ್ಷಗಳ ನಂತರ ಹಾಡಿರುವ ಹಾಡೊಂದು ಬಿಡುಗಡೆಯಾಗಿ, ಎಲ್ಲರ ಮೆಚ್ಚುಗೆ ಪಡೆದುಕೊಂಡಿತ್ತು. ರಿಚ್ಚಿ, ತಮ್ಮ ಹೆಸರನ್ನೇ ಚಿತ್ರದ ಟೈಟಲ್ ಆಗಿ ಆಯ್ಕೆ ಮಾಡಿದ್ದಾರೆ. ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಕೂಡಾ ಇವರೇ. ರಾಕೇಶ್ ರಾವ್ ಹಾಗೂ ವೆಂಕಟಾಚಲಯ್ಯ ‘ರಿಚ್ಚಿ’ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಅಜಿತ್ ಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿಪ್ರಕಾಶ್, ಧನಂಜಯ ಹಾಗೂ ಭೂಷಣ್ ನೃತ್ಯ ನಿರ್ದೇಶನ ಹಾಗೂ ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ‘ರಿಚ್ಚಿ’ ಚಿತ್ರಕ್ಕಿದೆ. ಮನೋಜ್, ಮಿಮಿಕ್ರಿ ಗೋಪಿ, ಮಜಾಭಾರತ ಖ್ಯಾತಿಯ ಚಂದ್ರಪ್ರಭ, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ.