Site icon Vistara News

Actress Ramya | ರಮ್ಯಾ‌ ಹುಟ್ಟು ಹಬ್ಬಕ್ಕೆ ಸ್ಟಾರ್‌ಗಳ ದಂಡು: ವೈರಲ್‌ ಆಯ್ತು ಫೋಟೊ!

Actress Ramya

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಮೋಹಕ ತಾರೆ ರಮ್ಯಾ‌ (Actress Ramya) ಇತ್ತೀಚೆಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಚಂದನವನದ ಹಲವು ಸ್ಟಾರ್ಸ್‌ಗಳು ತಮ್ಮ ಜನುಮದಿನದಲ್ಲಿ ಭಾಗಿಯಾಗಿ ಸಂಭ್ರಮಿಸಿರುವ ಕೆಲವು ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಶೇರ್ ಮಾಡಿಕೊಂಡಿದ್ದಾರೆ.

ಡಾಲಿ ಧನಂಜಯ್, ವಿನಯ್ ರಾಜ್‌ಕುಮಾರ್, ಧನ್ಯ ರಾಮ್‌ ಕುಮಾರ್‌,ಕೃಷಿ ತಾಪಂಡ, ವಾಸುಕಿ ವೈಭವ್‌ ಸೇರಿದಂತೆ ಹಲವು ಸ್ಟಾರ್‌ಗಳು ಭಾಗಿಯಾಗಿ ಕೇಕ್ ಕತ್ತರಿಸಿ ಎಂಜಾಯ್ ಮಾಡಿರುವುದು ಚಿತ್ರದಲ್ಲಿದೆ.

Actress Ramya

ಇದನ್ನೂ ಓದಿ | Kannada New Movie | ಡಿಸೆಂಬರ್ 14ಕ್ಕೆ ಸೆಟ್ಟೇರಲಿದೆ `ಜಸ್ಟ್‌ ಪಾಸ್‌ʼ ಸಿನಿಮಾ: ನಾಯಕಿ ರಿವೀಲ್‌!

ರಮ್ಯಾ ಮತ್ತೆ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದ್ದು, ಈಗಾಗಲೇ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Actress Ramya) ಸಿನಿಮಾಗೆ ನಿರ್ಮಾಪಕಿಯೂ ಆಗಿದ್ದಾರೆ. ನಿರ್ಮಾಣದ ಜತೆಗೆ ನಾಯಕಿಯೂ ಆಗಿ ಈ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಳಿಕ, ಈ ಸಿನಿಮಾದಲ್ಲಿ ಸಿರಿ ರವಿಕುಮಾರ್ ಲೀಡ್ ಪಾತ್ರದಲ್ಲಿ ಮಾಡಲಿದ್ದಾರೆ ಎಂದು ಸ್ವತಃ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ತಿಳಿಸಿತ್ತು.

ಆ್ಯಪಲ್ ಬಾಕ್ಸ್ ಅಧಿಕೃತ ಪೇಜ್‌ನಲ್ಲಿ ‘ಸಿರಿ ರವಿಕುಮಾರ್ ನಮ್ಮ ನಿರ್ಮಾಣದ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಆದರೆ, ರಮ್ಯಾ ಬೆಳ್ಳಿಪರದೆಯ ಮೇಲೆ ಆದಷ್ಟು ಬೇಗ ಮರಳಲಿದ್ದಾರೆ’ ಎಂದು ಬರೆಯಲಾಗಿತ್ತು.

ಇದನ್ನೂ ಓದಿ | Divya Spandana | 40 ವರ್ಷಕ್ಕೆ ಕಾಲಿಟ್ಟ ಮೋಹಕ ತಾರೆ ರಮ್ಯಾ

Exit mobile version