ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಮೋಹಕ ತಾರೆ ರಮ್ಯಾ (Actress Ramya) ಅವರ ಪ್ರೀತಿಯ ಶ್ವಾನ ಚಾಂಪ್ ಕಾಣೆಯಾದ ಬೆನ್ನಲ್ಲೇ ಮೃತಪಟ್ಟಿರುವುದಾಗಿ ಸ್ವತಃ ನಟಿಯೇ ತಿಳಿಸಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ಹೋಟೆಲ್‌ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ನಟಿ ಟ್ವೀಟ್ ಮಾಡಿ ʻʻಚಾಂಪ್ (Champ) ಮೃತಪಟ್ಟಿದೆ. ಹಾಗೆಯೇ ಹುಡುಕಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದʼʼ ಎಂದು ಹೇಳಿದ್ದಾರೆ.
ರಮ್ಯಾ ಟ್ವೀಟ್ ಮೂಲಕ ʻʻಮೇ 6ರಿಂದ ನನ್ನ ನೆಚ್ಚಿನ ನಾಯಿ ಚಾಂಪ್ ಕಾಣೆಯಾಗಿದೆ. ಕಪ್ಪು ಬಣ್ಣದ ಪರ್ಟೈಲಿ ತಳಿಯ ನಾಯಿ ಅದಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು. ಯಾರಿಗಾದರೂ ನಾಯಿ ಕಂಡರೆ 7012708137 ಈ ನಂಬರ್‌ಗೆ ಕರೆ ಮಾಡಿʼʼ ಎಂದು ಬರೆದುಕೊಂಡಿದ್ದರು. ನಾಯಿ ಎಲ್ಲಿಯಾದರೂ ಕಂಡರೆ ಕೂಡಲೇ ಸೇಫ್ ಆಗಿ ಮರಳಿಸಿಬಿಡಿ ಎಂದು ಸಾರ್ವಜನಕರಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ: Actress Ramya : ನಾನು ಮಂಡ್ಯದ ಗೌಡ್ತಿ, ನೀವೇ ನಂಗೊಬ್ಬ ಒಳ್ಳೆ ಗೌಡ್ರ ಹುಡುಗನ್ನ ಹುಡುಕಿ ಕೊಡಿ ಪ್ಲೀಸ್ ಅಂದ್ರು ರಮ್ಯಾ
ರಮ್ಯಾ ಟ್ವೀಟ್
ರಮ್ಯಾ ಅವರಿಗೆ ನಾಯಿ ಅಂದರೆ ತುಂಬ ಪ್ರೀತಿ. ನಾಯಿಯ ಕಥಾ ಹಂದರ ಹೊಂದಿರುವ ಸಿನಿಮಾ ಕೂಡ ನಟಿ ರಮ್ಯಾ ಮಾಡಿದ್ದಾರೆ. ನಾನು ಏನ್ ಮಾಡ್ಲಿ ಸ್ವಾಮಿ.. ನನ್ನ ಹುಡುಗಿ ನಾಯಿ ಪ್ರೇಮಿ’ ಎನ್ನುವ ಹಾಡು ಕೂಡ ಸಖತ್ ಫೇಮಸ್ ಆಗಿತ್ತು. ಇದೀಗ ಅವರ ಮೆಚ್ಚಿನ ನಾಯಿ ಚಾಂಪ್ ಇಲ್ಲವಾಗಿದೆ.