Site icon Vistara News

Actress Ramya | ಗೋಡೆಯಲ್ಲಿ ಅರಳಿದ ಸ್ಯಾಂಡಲ್‌ವುಡ್‌ ಪದ್ಮಾವತಿ : ಬಾದಲ್ ಕೈ ಚಳಕದ ವಿಡಿಯೊ ಇಲ್ಲಿದೆ!

Actress Ramya (painting for birthday)

ಬೆಂಗಳೂರು : ಸ್ಯಾಂಡಲ್‌ವುಡ್‌ ಮೋಹಕ ತಾರೆ (Actress Ramya) ರಮ್ಯಾ ತಮ್ಮ ಹುಟ್ಟುಹಬ್ಬವನ್ನು ನವೆಂಬರ್‌ 29 ಮಂಗಳವಾರ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಈ ಬಾರಿ ರಮ್ಯಾ ಅವರು ತಮ್ಮ ಜನುಮದಿನವನ್ನು ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ. ಇದರ ನಡುವೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಕುಂಚದಲ್ಲಿ ಅರಳಿದ ರಮ್ಯಾ ಅವರ ಕಲಾಕೃತಿ ಸಖತ್‌ ಸದ್ದು ಮಾಡಿದೆ.

ಖ್ಯಾತ ಯುವ ಚಿತ್ರಕಲಾವಿದ ಬಾದಲ್ ನಂಜುಂಡ ಸ್ವಾಮಿ ಅವರು ತಮ್ಮ ವಿಶೇಷ ಕಲಾಕೃತಿಗಳಿಂದ ಹೆಸರುವಾಸಿ. ಇದೀಗ ರಮ್ಯಾ ಅಭಿಮಾನಿಗಳಿಗೆ ತಮ್ಮ ಕಲಾಕೃತಿಯಿಂದ ಭರ್ಜರಿ ಗಿಫ್ಟ್‌ ನೀಡಿದ್ದಾರೆ. ಯಲಹಂಕ ಸಮೀಪದ ಗೋಡೆಯ ಮೇಲೆ 35 ಅಡಿ ಎತ್ತರ, 15 ಅಗಲದ ಪೇಂಟಿಂಗ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ಇದನ್ನೂ ಓದಿ | Actress Ramya | ನಿಮ್ಮ ಮದುವೆ ಯಾವಾಗ ಮೇಡಂ ಎಂದ ಕಾಲೇಜು ವಿದ್ಯಾರ್ಥಿ; ಇದಕ್ಕೆ ರಮ್ಯಾ ನೀಡಿದ ಉತ್ತರ ಕುತೂಹಲಕರ!

ರಮ್ಯಾ ಅವರ ಜನುಮದಿನಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಶುಭಾಶಯ ತಿಳಿಸಿದ್ದಾರೆ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ʻಉತ್ತರ ಕಾಂಡʼ ಚಿತ್ರ ಶೂಟಿಂಗ್ ಆಗಬೇಕಿದೆ. ಈ ಬಾರಿ ಜಪಾನ್‌ನಲ್ಲಿ ವಿಶೇಷವಾಗಿ ಜನುಮದಿನ ಆಚರಿಸಿದ್ದಾರೆ ನಟಿ.

ಇದನ್ನೂ ಓದಿ | Actress Ramya | ನಟಿ ರಮ್ಯಾಗಾಗಿ ಹಾಸ್ಟೆಲ್‌ ಹುಡುಗರ ಪ್ರತಿಭಟನೆ: ವೈರಲ್‌ ಆಯ್ತು ವಿಡಿಯೊ!

Exit mobile version