Actress Ramya: ಗುಲಾಬಿಗಳ ಜತೆ ಮೋಹಕ ತಾರೆ; ಚೆಂದದ ಕವನ ಪೋಸ್ಟ್ ಮಾಡಿದ ರಮ್ಯಾ Yashaswi Devadiga 1 ವರ್ಷ ago ಮೋಹಕತಾರೆ ರಮ್ಯಾ (Actress Ramya) ಅವರು ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಗುಲಾಬಿ ಬಣ್ಣದ ಗುಲಾಬಿಗಳ ಸೌಂದರ್ಯವನ್ನು ಸವಿಯುವುದು ಕಾಣಬಹುದು. ಇದನ್ನೂ ಓದಿ: Actress Ramya: ಮೋಹಕ ತಾರೆ ರಮ್ಯಾ ಪ್ರೀತಿಯ ಶ್ವಾನ ಕೆಲವೇ ಗಂಟೆಗಳಲ್ಲಿ ನಿಧನ ʻʻ2 ದಶಕ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಈಗಲೂ ತನ್ನ ಜೀವನದ ಸಾಮ್ರಾಜ್ಯಕ್ಕೆ ತಾನೆ ರಾಣಿ , ಲವ್ ಯೂ ರಾಣಿʼʼ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಫೋಟೊ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. See more ಫೋಟೊಗಳ ಜತೆ ರಮ್ಯಾ ಅವರು ಒಂದು ಚಂದದ ಕವನ ಹಂಚಿಕೊಂಡಿದ್ದಾರೆ. ಈ ಕವನದಲ್ಲಿ ದೇವರು ಮತ್ತು ಜೀವನದ ಬಗ್ಗೆ ಹೇಳಲಾಗಿದೆ. ಗಾರ್ಡನ್ ಏರಿಯಾದಲ್ಲಿ ವೈಟ್ ಶರ್ಟ್ ಧರಿಸಿ ನಿಂತಿದ್ದ ನಟಿ ಗುಲಾಬಿಗಳಿಗೆ ದೂರದಿಂದಲೇ ಕಿಸ್ ಮಾಡಿದ್ದಾರೆ.