Site icon Vistara News

Rukhsar Rehman: 13 ವರ್ಷಗಳ ಬಳಿಕ ಎರಡನೇ ಪತಿಗೂ ಡಿವೋರ್ಸ್‌ ಕೊಟ್ಟ ನಟಿ ರುಖ್ಸಾರ್ ರೆಹಮಾನ್!

Actress Rukhsar

ಬೆಂಗಳೂರು: ಬಾಲಿವುಡ್‌ ನಟಿ ರುಖ್ಸಾರ್ ರೆಹಮಾನ್ (Rukhsar Rehman) ಹಾಗೂ ನಿರ್ದೇಶಕ ಫಾರೂಕ್ ಕಬೀರ್ (Faruk Kabir) ಅವರು ಡಿವೋರ್ಸ್‌ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಫೆಬ್ರವರಿಯಿಂದಲೇ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿತ್ತು. ಇಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂಬ ಊಹಾಪೋಹಗಳು ಹಬ್ಬಿದ್ದವು. ಇತ್ತೀಚಿನ ಸಂದರ್ಶನದಲ್ಲಿ ನಟಿ ಈ ಬಗ್ಗೆ ಖಚಿತಪಡಿಸಿದ್ದಾರೆ. 13 ವರ್ಷಗಳ ದಾಂಪತ್ಯದ ನಂತರ ರುಖ್ಸಾರ್ ಮತ್ತು ಫಾರೂಕ್ ವಿಚ್ಛೇದನವನ್ನು ಸಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನನಗೆ ಇದು “ಸುಲಭವಾದ ನಿರ್ಧಾರ” ಅಲ್ಲ ಎಂದು ರುಖ್ಸಾರ್ ಹೇಳಿಕೊಂಡಿದ್ದಾರೆ.

ಅಸದ್ ಅಹ್ಮದ್ ಅವರನ್ನು ನಟಿ ರುಖ್ಸಾರ್ ರೆಹಮಾನ್ ಅವರು ಮೊದಲು ಮದುವೆ ಆದರು. ಇಬ್ಬರೂ ಬಳಿಕ ಬೇರೆ ಆದರು. 2010ರಲ್ಲಿ ಖ್ಯಾತ ನಿರ್ದೇಶಕ ಫಾರೂಕ್ ಕಬೀರ್ ಅವರನ್ನು ರುಕ್ಸಾರ್ ಮದುವೆ ಆಗಿದ್ದರು. ಸಂದರ್ಶನದಲ್ಲಿ ನಟಿ ಈ ಬಗ್ಗೆ ಮಾತನಾಡಿ ʻʻಹೌದು, ನಾವು ಬೇರೆಯಾಗಿದ್ದೇವೆ. ನಾವು ಈ ವರ್ಷ ಫೆಬ್ರವರಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವು. ವಿಚ್ಛೇದನಕ್ಕೆ ಮುಂದಾಗಿದ್ದೇವೆ. ಇದು ಸಂಪೂರ್ಣವಾಗಿ ನನ್ನ ವೈಯಕ್ತಿಕ ವಿಚಾರ. ಈ ಬಗ್ಗೆ ಈಗಲೇ ಮಾತನಾಡಲು ಬಯಸುವುದಿಲ್ಲ’’ ಎಂದು ರುಖ್ಸಾರ್ ರೆಹಮಾನ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Ghajini Actress Asin: ನಟಿ ಆಸಿನ್‌ ಡಿವೋರ್ಸ್‌ ವದಂತಿ; ʻಛೇʼ ನನ್ನ 5 ನಿಮಿಷ ಹಾಳಾಯ್ತು ಎಂದ ನಟಿ!

ಕೇವಲ 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರುಖ್ಸಾರ್ ರೆಹಮಾನ್ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 1992ರಲ್ಲಿ ‘ಯಾದ್ ರಕೇಗಿ ದುನಿಯಾ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ದೀರ್ಘ ಬ್ರೇಕ್ ಪಡೆದು, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಸರ್ಕಾರ್’ (1995) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ಎಂಟ್ರಿ ಕೊಟ್ಟರು. ಹಲವು ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ಗಾಡ್ ತುಸ್ಸಿ ಗ್ರೇಟ್ ಹೋ, ಉರಿ, ಪಿಕೆ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫರೂಕ್ ನಿರ್ದೇಶಿಸಿದ ಖುದಾ ಹಾಫಿಜ್‌ನಲ್ಲಿಯೂ ಕಾಣಿಸಿಕೊಂಡಿದ್ದರು.

Exit mobile version