Site icon Vistara News

Actress Samantha | ಡಿವೋರ್ಸ್ ನಂತರವೂ ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರಂತೆ ಸಮಂತಾ-ನಾಗಚೈತನ್ಯ!

Actress Samantha

ಬೆಂಗಳೂರು : ʻಮೈಯೋಸಿಟಿಸ್ʼ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ (Actress Samantha) ತಮಗೆ ಇರುವ ಕಾಯಿಲೆ ಬಗ್ಗೆ ಈ ಹಿಂದೆ ನೋವನ್ನು ಹಂಚಿಕೊಂಡಿದ್ದರು. ‘ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ‘ ಎಂದು ಸಮಂತಾ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದರು. ಸಮಂತಾ ಅವರ ಮಾಜಿ ಮಾವ, ಖ್ಯಾತ ನಟ ನಾಗಾರ್ಜುನ್ ಅವರು ಸಮಂತಾ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಾಗಚೈತನ್ಯ ಮತ್ತು ಸಮಂತಾ ಹಲವು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದರು. ‘ಮಜಿಲಿ‘, ‘ಓ ಬೇಬಿ‘ ಮತ್ತು ‘ಯೇ ಮಾಯಾ ಚೇಸಾವೆ‘ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಹಾಗೇ ಡೇಟಿಂಗ್‌ ಮಾಡುತ್ತಾ, ಮದುವೆಯೂ ಆದರು.

Actress Samantha

ಇದನ್ನೂ ಓದಿ | Myositis | ಸಮಂತಾಗೆ ಮೈಯೋಸಿಟಿಸ್! ಏನಿದು ಕಾಯಿಲೆ, ಚಿಕಿತ್ಸೆ ಇದೆಯಾ?

ಡಿವೋರ್ಸ್‌ ಪಡೆದ ನಂತರ ದಂಪತಿ ಮತ್ತೆ ಸಿನಿಮಾ ಮಾಡಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಇಬ್ಬರೂ ಬೇರೆ ಆಗಿದ್ದರೂ ಸಿನಿಮಾ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ ಎಂದು ಹೇಳಲಾಗುತ್ತಿದೆ.

2021ರಲ್ಲಿ ಜೋಡಿ ಬೇರೆಯಾಗಿದ್ದು, ʻಕಾಫಿ ವಿತ್‌ ಕರಣ್‌ʼ ಶೋನಲ್ಲಿ ನೋವನ್ನು ಹೊರಹಾಕಿದ್ದರು. ಸದ್ಯ ಸಮಂತಾ ನವೆಂಬರ್11 ರಿಲೀಸ್​ ಆದ ‘ಯಶೋದಾ‘ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. 

ಇದನ್ನೂ ಓದಿ | Samantha | ಸಮಂತಾ ಆರೋಗ್ಯ ವಿಚಾರಿಸಲು ಭೇಟಿ ಆಗಲಿದ್ದಾರಾ ಮಾಜಿ ಪತಿ ನಾಗಚೈತನ್ಯ?

Exit mobile version