Site icon Vistara News

Actress Samantha : ಪತಿಯಿಂದ ದೂರವಾಗಿರುವ ಸಮಂತಾಗೆ ಬಂತು ಪ್ರೇಮಿಗಳ ದಿನದ ಗಿಫ್ಟ್! ಯಾರು ಕಳುಹಿಸಿದ್ದು?

#image_title

ಹೈದರಾಬಾದ್: ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ (Actress Samantha) ಪತಿಯಿಂದ ನಾಗಚೈತನ್ಯ ಅವರಿಂದ ದೂರವಾಗಿರುವುದು ಹಳೆಯ ವಿಚಾರ. ಆದರೆ ಇದೀಗ ಅವರ ಬಳಿ ಪ್ರೇಮಿಗಳ ದಿನದ ವಿಶೇಷ ಉಡುಗೊರೆಯೊಂದು ಬಂದು ತಲುಪಿದೆ. ಈ ರೀತಿ ಬಂದಿರುವ ಉಡುಗೊರೆಯ ಫೋಟೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಕೂಡ.

ಇದನ್ನೂ ಓದಿ: Samantha Ruth Prabhu: 600 ಮೆಟ್ಟಿಲು ಹತ್ತಿ ದೇವರ ಆಶೀರ್ವಾದ ಪಡೆದ ನಟಿ ಸಮಂತಾ
ನಟಿ ಇತ್ತೀಚೆಗೆ “ನಾನು ನನ್ನ ಹೂವುಗಳನ್ನು ಖರೀದಿಸಬಲ್ಲೆ” ಎಂದು ಹೇಳಿಕೊಂಡಿದ್ದರು. ಆದರೆ ಪ್ರೇಮಿಗಳ ದಿನದಂದು ಕೆಂಪು ಮತ್ತು ಬಿಳಿ ಬಣ್ಣದ ಹೂವುಗಳಿರುವ ಬೊಕ್ಕೆಯನ್ನು ವ್ಯಕ್ತಿಯೊಬ್ಬರು ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಅದರ ಜತೆಗೆ “ನೀನು ನಿನ್ನ ಹೂವುಗಳನ್ನು ಖರೀದಿಸಬಹುದು. ಆದರೆ ಈಗ ನಾನು ಅದನ್ನು ನಿನಗಾಗಿ ತಂದಿದ್ದೇನೆ. ಪ್ರೇಮಿಗಳ ದಿನದ ಶುಭಾಶಯಗಳು” ಎಂದು ಬರೆಯಲಾಗಿದೆ. ಈ ವಿಶೇಷವಾದ ಉಡುಗೊರೆಯನ್ನು ಅವರ ಸ್ನೇಹಿತೆ ಪ್ರಿಯಾಂಕಾ ಅವರೇ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಬೊಕ್ಕೆಯ ಫೋಟೋವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ನಟಿ, ಅದರಲ್ಲಿ ಸ್ನೇಹಿತೆ ಪ್ರಿಯಾಂಕಾ ಅವರನ್ನೂ ಮೆನ್ಶನ್ ಮಾಡಿದ್ದಾರೆ.


ಇನ್ನು ಸಮಂತಾ ಪ್ರೇಮಿಗಳ ದಿನವನ್ನು ಎಲ್ಲರಂತೆ ಸುತ್ತಾಡುವಲ್ಲಿ, ಪಾರ್ಟಿ ಮಾಡುವಲ್ಲಿ ಕಳೆದಿಲ್ಲ. ಈ ದಿನದಂದು ಜಿಮ್ ಅಲ್ಲಿ ವರ್ಕ್ ಔಟ್ ಮಾಡಿ ಕಳೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಬಾಕ್ಸಿಂಗ್ ಗ್ಲೌಸ್ ತೊಟ್ಟು, ಜಿಮ್ ಕೋಚ್ ಜತೆ ವರ್ಕ್ಔಟ್ ಮಾಡುವ ಫೋಟೋವನ್ನು ಹಂಚಿಕೊಂಡಿರುವ ಅವರು, “ಪ್ರೇಮಿಗಳ ದಿನದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Samantha: ಸಮಂತಾ ಅಭಿನಯದ ಪೌರಾಣಿಕ ಚಿತ್ರ ʻಶಾಕುಂತಲಂʼ ಬಿಡುಗಡೆ ದಿನಾಂಕ ಬದಲಾವಣೆ
ಸಮಂತಾ ನಟಿಸಿರುವ ‘ಶಾಕುಂತಲಂ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದಲ್ಲದೆ ನಟಿ ‘ಸಿಟಾಡೆಲ್’ ವೆಬ್ ಸೀರಿಸ್ ಅಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ವಿಜಯ್ ದೇವರಕೊಂಡ ಅವರೊಂದಿಗೆ ‘ಖುಷಿ’ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

Exit mobile version