ಹೈದರಾಬಾದ್: ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ (Actress Samantha) ಅವರು ಮಯೋಸಿಟಿಸ್ ಹೆಸರಿನ ಅಪರೂಪದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅನಾರೋಗ್ಯದಿಂದಾಗಿ ದೈಹಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿರುವ ನಟಿ ಇದೀಗ ಮತ್ತೆ ಶಕ್ತಿಶಾಲಿಯಾಗುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತಹ ವಿಡಿಯೊಗಳನ್ನೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Actress Samantha: ಪುಷ್ಪಾ 2 ಸಿನಿಮಾದಲ್ಲಿ ಸಮಂತಾ ನಟಿಸಲ್ಲ ಎನ್ನುವರಿಗೆ ಚಿತ್ರತಂಡ ನೀಡಿದ ಸ್ಪಷ್ಟನೆ ಏನು?
ಸಮಂತಾ ಇತ್ತೀಚಿನ ದಿನಗಳಲ್ಲಿ ತಾವು ಜಿಮ್ ಅಲ್ಲಿ ವರ್ಕ್ ಔಟ್ ಮಾಡುವ ವಿಡಿಯೊ ಹಾಗೂ ಫೋಟೋಗಳನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಗುರುವಾರವೂ ಸಹ ವಿಶೇಷ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಜಿಮ್ನಲ್ಲಿ ವರ್ಕ್ ಔಟ್ ಮಾಡುವ ವಿಡಿಯೊ ಅದಾಗಿದೆ. “ಇದು ತಮಾಷೆಯಂತೆ ಕಾಣುತ್ತದೆ. ಆದರೆ ತಮಾಷೆ ಅಲ್ಲ. ನೀವು ಇದನ್ನು ಪ್ರಯತ್ನಿಸುತ್ತೀರಾ?” ಎಂದು ಪ್ರಶ್ನೆಯನ್ನೂ ಕೇಳಿದ್ದಾರೆ.
ಹಾಗೆಯೇ ನಟಿ “2023 ನಾವು ಗಟ್ಟಿಯಾಗುವ ವರ್ಷ ಎಂದೂ ಬರೆದುಕೊಂಡಿದ್ದಾರೆ. ನಟಿಯ ಈ ವಿಡಿಯೊ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದು, ವೈರಲ್ ಆಗಿದೆ. “ನಮ್ಮ ಸಮಂತಾ ಮತ್ತೆ ಸ್ಟ್ರಾಂಗ್ ಆಗುತ್ತಿದ್ದಾರೆ”, “ಸಮಂತಾ ಸ್ಟ್ರಾಂಗ್ ಆಗಿ ಮರಳಲಿದ್ದಾರೆ” ಎನ್ನುವಂತಹ ಹಲವು ಕಾಮೆಂಟ್ ವಿಡಿಯೊಗೆ ಬಂದಿವೆ.
ಸಮಂತಾ ಅವರು ಪ್ರೇಮಿಗಳ ದಿನದಂದು ಕೂಡ ತಾವು ಜಿಲ್ ಅಲ್ಲಿರುವ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭ ಹಾರೈಸಿದ್ದರು.