Site icon Vistara News

Actress Samantha: ಪುಷ್ಪಾ 2 ಸಿನಿಮಾದಲ್ಲಿ ಸಮಂತಾ ನಟಿಸಲ್ಲ ಎನ್ನುವರಿಗೆ ಚಿತ್ರತಂಡ ನೀಡಿದ ಸ್ಪಷ್ಟನೆ ಏನು?

Actress Samantha

ಬೆಂಗಳೂರು : ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ- ದಿ ರೈಸ್’ ಸಿನಿಮಾದಲ್ಲಿ ನಟಿ ಸಮಂತಾ (Actress Samantha) ಒಂದೇ ಹಾಡಿನ ಮೂಲಕ ಫೇಮಸ್ ಆದವರು. ‘ಉ ಅಂಟಾವಾ ಮಾವ ಉಹೂಂ ಅಂಟಾವಾ’ ಎನ್ನುತ್ತಾ ಹೆಜ್ಜೆ ಹಾಕಿದ ಅವರ ನೃತ್ಯ ಸಿನಿಮಾ ಬಿಡುಗಡೆಗೂ ಮೊದಲೇ ಟ್ರೆಂಡ್ ಆಗಿತ್ತು. ಹಾಗಾಗಿ ಸಮಂತಾ ಪುಷ್ಪಾ 2 ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ನಟಿ ಪುಷ್ಪಾ 2 ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಚಿತ್ರತಂಡ ಸ್ಪಷ್ಟನೆ ನೀಡಿದೆ.

ಈ ಎಲ್ಲ ವದಂತಿಗಳಿಗೆ ತಂಡ ʻʻಇವೆಲ್ಲವೂ ರೂಮರ್ಸ್‌ʼʼಎಂದು ಪಿಂಕ್ವಿಲ್ಲಾಗೆ ತಿಳಿಸಿದ್ದಾರೆ. ‘ಪುಷ್ಪಾ 2’ ನಿರ್ದೇಶಕ ಸುಕುಮಾರ್ ಅವರು ಫ್ರ್ಯಾಂಚೈಸ್‌ಗಾಗಿ ಸಮಂತಾ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ಸಮಂತಾ ಸಿದ್ಧರಿಲ್ಲದ ಕಾರಣ ಅವರು ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ವರದಿಗಳು ಹೇಳಿಕೊಂಡಿವೆ. ಸಮಂತಾ ಅವರನ್ನು ಮನವೊಲಿಸಲು ಚಲನಚಿತ್ರ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾಗಾಗಿ ಸಣ್ಣ ಪಾತ್ರವನ್ನು ಸೃಷ್ಟಿಸಿದ್ದಾರೆ. ಆದರೆ ಅವರು ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಆದರೆ ಪಟ್ಟು ಬಿಡದ ಚಿತ್ರತಂಡ ನಟಿಯನ್ನು ಒಪ್ಪಿಸುವುದಕ್ಕೆ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Actress Samantha: ಪುಷ್ಪಾ 2 ಸಿನಿಮಾದಲ್ಲಿ ಸಮಂತಾ ನಟಿಸಲ್ವಂತೆ! ಚಿತ್ರತಂಡ ಮಾಡಿದ್ದೇನು?

ಇದನ್ನೂ ಓದಿ: Actress Samantha : ಪತಿಯಿಂದ ದೂರವಾಗಿರುವ ಸಮಂತಾಗೆ ಬಂತು ಪ್ರೇಮಿಗಳ ದಿನದ ಗಿಫ್ಟ್! ಯಾರು ಕಳುಹಿಸಿದ್ದು?

ಪುಷ್ಪಾ ಸಿನಿಮಾದಲ್ಲಿ ನಟಿಸುವುದಕ್ಕೆ ಸಮಂತಾರನ್ನು ಅಲ್ಲು ಅರ್ಜುನ್ ಒಪ್ಪಿಸಿದ್ದರು. ಕೇವಲ 3 ನಿಮಿಷಗಳ ಹಾಡಿಗಾಗಿ ಸಮಂತಾ 5 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದರು ಎನ್ನುವ ವರದಿಯಿದೆ. ಸಿನಿಮಾದ ಯಶಸ್ಸಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, “ಈ ಹಾಡು ಇಷ್ಟೊಂದು ಹಿಟ್ ಆಗುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ” ಎಂದು ತಮ್ಮ ಸಂತೋಷವನ್ನು ಹೊರಹಾಕಿದ್ದರು.

Exit mobile version