ಹೈದರಾಬಾದ್: ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾ ಭರ್ಜರಿ ಹಿಟ್ ಆದ ಬೆನ್ನಲ್ಲೇ ಸಿನಿ ತಂಡ ಪುಷ್ಪಾ 2 ಸಿನಿಮಾದ ಚಿತ್ರೀಕರಣ ಆರಂಭಿಸಿದೆ. ಪುಷ್ಪಾ ಸಿನಿಮಾದಲ್ಲಿ ʼಉ ಅಂಟಾವಾ ಮಾವ ಉಹೂಂ ಅಂಟಾವಾʼ ಎಂದು ಹೆಜ್ಜೆ ಹಾಕಿದ್ದ ನಟಿ ಸಮಂತಾ (Actress Samantha) ಇದೀಗ ಸಿನಿಮಾದ ಎರಡನೇ ಭಾಗದಲ್ಲೂ ಕಾಣಿಸಿಕೊಳ್ಳಬಹುದು ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ ನಟಿ ಈ ಸಿನಿಮಾದಲ್ಲಿ ನಟಿಸುತ್ತಾರೆಯೋ ಇಲ್ಲವೋ ಎನ್ನುವ ಬಗ್ಗೆ ಅವರೇ ಉತ್ತರ ಕೊಟ್ಟಿದ್ದು, ಎಲ್ಲ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: Samantha Ruth Prabhu: ಕ್ಯಾಮೆರಾಗಳ ಫ್ಲ್ಯಾಷ್‌ನಿಂದ ತೊಂದರೆಗೊಳಗಾದ ಸಮಂತಾ; ಆಗಿದ್ದೇನು?
ಸದ್ಯ ಶಾಂಕುಂತಲಂ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಮಂತಾ ಬಿಜಿ ಇದ್ದಾರೆ. ಅದೇ ನಿಟ್ಟಿನಲ್ಲಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಭಾಗವಹಿಸಿದ್ದರು. ಆಗ ಕಾರ್ಯಕ್ರಮದ ನಿರೂಪಕರು ʼಪುಷ್ಪಾ2 ಅಲ್ಲಿ ನಿಮ್ಮಿಂದ ಮತ್ತೊಂದು ಉ ಅಂಟಾವಾ ಅನ್ನು ನೋಡಬಹುದೇ?ʼ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ನಟಿ, “ಇಲ್ಲ. ಅದರಲ್ಲಿ ನಾನಿರುವುದಿಲ್ಲ” ಎಂದು ಸ್ಪಷ್ಟವಾದ ಉತ್ತರವನ್ನು ಕೊಟ್ಟಿದ್ದಾರೆ.
ಈ ಹಿಂದೆ ನಟಿ ಪುಷ್ಪಾ ಸಿನಿಮಾದಲ್ಲಿ ನೃತ್ಯ ಮಾಡಿದ್ದರ ಬಗ್ಗೆಯೂ ಅನುಭವ ಹಂಚಿಕೊಂಡಿದ್ದರು. ನನ್ನ ಮತ್ತು ನಾಗಚೈತನ್ಯ ಅವರ ವಿಚ್ಛೇದನ ವಿಚಾರ ಹೊರ ಬೀಳುವ ಸಮಯದಲ್ಲಿಯೇ ಈ ನೃತ್ಯದ ಅವಕಾಶ ಸಿಕ್ಕಿತು. ಇದಕ್ಕೆ ನನ್ನ ಕುಟುಂಬವಾಗಲೀ ಅಥವಾ ಸ್ನೇಹಿತರಾಗಲೀ ಯಾರೊಬ್ಬರೂ ಬೆಂಬಲಿಸಿರಲಿಲ್ಲ. ಆದರೆ ನಾನು ಎಲ್ಲರ ಮಾತನ್ನು ಮೀರಿ ಉ ಅಂಟಾವಾ ಹಾಡಿಗೆ ಹೆಜ್ಜೆ ಹಾಕಿದೆ ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: Samantha Ruth Prabhu: ರಾಕಿಂಗ್ ಸ್ಟಾರ್ ಯಶ್‌ರಂತೆ ʻರೈಸ್ ಅಪ್ ಬೇಬಿʼ ಎಂದು ಹೇಳಿದ್ಯಾಕೆ ಸಮಂತಾ?
ಪುಷ್ಪಾ 2 ಸಿನಿಮಾ ಸದ್ಯ ಚಿತ್ರೀಕರಣ ಹಂತದಲ್ಲಿದೆ. ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಹಾಗೆಯೇ ಮಲಯಾಳಂನ ಫಹಾದ್ ಫಾಸಿಲ್ ಅವರು ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪೋಸ್ಟರ್ ಅನ್ನು ಸಿನಿತಂಡ ಕಳೆದ ವಾರ ಬಿಡುಗಡೆ ಮಾಡಿತ್ತು. ಪೋಸ್ಟರ್ ಭಾರೀ ವೈರಲ್ ಆಗಿತ್ತು.