Site icon Vistara News

Shamna Kasim: ಗಂಡು ಮಗುವಿಗೆ ಜನ್ಮ ನೀಡಿದ ʻಜೋಶ್‌ʼ ನಟಿ

Actress Shamna Kasim blessed with a baby boy

ಬೆಂಗಳೂರು: 2004ರಲ್ಲಿ ʻಜೋಶ್ʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಲಿವುಡ್‌ ನಟಿ ಶಾಮ್ನಾ ಕಾಸೀಮ್ (Shamna Kasim) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಈ ಸುದ್ದಿಯನ್ನು ಸೋಷಿಯಲ್‌ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. 2022 ಜೂನ್‌ ತಿಂಗಳಿನಲ್ಲಿ ಉದ್ಯಮಿ ಶಾನಿದ್ ಆಸಿಫ್ ಅಲಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.ʻ

ʻಗಂಡು ಮಗು ಆಗಮಿಸಿದ್ದಾನೆ. ಆಶೀರ್ವಾದ ಮಾಡಿದ ಎಲ್ಲರಿಗೂ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಫೋಟೊಗಳನ್ನು ನಟಿ ಹಂಚಿಕೊಂಡಿದ್ದು ಮಗನ ಮುಖ ರಿವೀಲ್ ಮಾಡಿಲ್ಲ. ಫೆಬ್ರವರಿ ತಿಂಗಳಲ್ಲಿ ನಟಿ ಪೂರ್ಣ ಅಲಿಯಾಸ್‌ ಶಾಮ್ನಾ ಸೀಮಂತ ಸಂಭ್ರಮದ ಫೋಟೊಗಳನ್ನು ಶೇರ್ ಮಾಡಿದ್ದರು. ದುಬೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಲಯಾಳಂನ ʻಮಂಜು ಪೋಲೂರು ಪೆಂಕುಟ್ಟಿʼ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. ಈ ಸಿನಿಮಾದಲ್ಲಿ ಧನ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲಿ ಪೂರ್ಣ ನಟಿಸಿದ್ದರು.

ಶಾಮ್ನಾ ಕಾಸೀಮ್ ಇನ್‌ಸ್ಟಾ ಪೋಸ್ಟ್‌

ಈ ಸಿನಿಮಾ ಮೂಲಕ ಶಮ್ನಾ ಅನೇಕ ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ ಮಿಂಚಿದರು. ಕೊನೆಯದಾಗಿ ನಟಿ ಪೂರ್ಣ ದಸರಾ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಾನಿ ನಟನೆಯ ದಸರಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ

 

Exit mobile version