Site icon Vistara News

Kantara Movie | ʻಇದು ಸಿನಿಮಾದ ಪವರ್‌, ಅದ್ಭುತ ನಿರೂಪಣೆʼ: ಕಾಂತಾರ ಸಿನಿಮಾ ಹೊಗಳಿದ ನಟಿ ಶಿಲ್ಪಾ ಶೆಟ್ಟಿ

Kantara Movie

ಬೆಂಗಳೂರು: ಕಾಂತಾರ ಸಿನಿಮಾ ಭಾರತದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ (Kantara Movie) ವೀಕ್ಷಿಸಿದ ಬಳಿಕ ದಕ್ಷಿಣ ಭಾರತದ ಸ್ಟಾರ್‌ ನಟರು ಸೋಷಿಯಲ್‌ ಮೀಡಿಯಾ ಮೂಲಕ ಹಾಡಿ ಹೊಗಳಿದ್ದಾರೆ. ಈ ಸಾಲಿಗೆ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಅಕ್ಟೋಬರ್‌ 16ರಂದು ಕಾಂತಾರ ಸಿನಿಮಾವನ್ನು ವೀಕ್ಷಿಸಿದ ಬಳಿಕ ಕ್ಲೈಮ್ಯಾಕ್ಸ್‌ ದೃಶ್ಯದ ಫೋಟೊವೊಂದನ್ನು ತಮ್ಮ ಅಧಿಕೃತ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

”ನಾನು ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದೆ. OMG! ಎಂತಹ ನಿರೂಪಣೆ, ಭಾವನೆ, ವೈಬ್ ಮತ್ತು ಪ್ರಪಂಚ. ಕ್ಲೈಮ್ಯಾಕ್ಸ್ ರೋಮಾಂಚನಗೊಳಿಸಿತ್ತು. ಇದು ಸಿನಿಮಾದ ಪವರ್. ಪ್ರೇಕ್ಷಕನನ್ನು ಬೇರೊಂದು ಜಗತ್ತಿಗೆ ಕೊಂಡೊಯ್ಯುತ್ತದೆ. ನಾನು ಹುಟ್ಟಿ ಬೆಳೆದಂತಹ ಪ್ರಪಂಚಕ್ಕೆ (ಕರಾವಳಿ)ಗೆ ಕೊಂಡೊಯ್ಯುವ ಸಿನಿಮಾʼʼ ಎಂದು ಹೊಗಳಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಹೊಗಳಿದ ತಮಿಳು ನಟ ಕಾರ್ತಿ: ರಿಷಬ್‌ ಮೇಲೆ ಕನ್ನಡಿಗರು ಗರಂ ಆಗಿದ್ಯಾಕೆ?

ನಟ ಪ್ರಭಾಸ್‌ ಎರಡು ಬಾರಿ ಸಿನಿಮಾ ನೋಡಿ ಹೊಗಳಿ, ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದರು. ಕರಾವಳಿ ಬೆಡಗಿ, ಟಾಲಿವುಡ್‌ ನಟಿ ಅನುಷ್ಕಾ ಶೆಟ್ಟಿ ಕೂಡ ಸಿನಿಮಾ ನೋಡಿ ಸೋಷಿಯಲ್‌ ಮೀಡಿಯಾ ಮೂಲಕ ಖುಷಿ ಹಂಚಿಕೊಂಡಿದ್ದರು.

ʻಕಾಂತಾರ ವೀಕ್ಷಿಸಿದೆ. ಸಂಪೂರ್ಣವಾಗಿ ಸಿನಿಮಾ ಇಷ್ಟವಾಯಿತು, ಪ್ರತಿಯೊಬ್ಬ ನಟ, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. ಕಾಂತಾರ ತಂಡ ನೀವೆಲ್ಲರೂ ಅದ್ಭುತ. ತೆರೆ ಮೇಲೆ ಇಂತಹ ಅನುಭವ ನೀಡಿದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ನಿಜಕ್ಕೂ ಅದ್ಭುತ. ದಯವಿಟ್ಟು ಚಿತ್ರಮಂದಿರದಲ್ಲಿ ಸಿನಿಮಾವನ್ನು ನೋಡಿ, ಮಿಸ್‌ ಮಾಡಲೇಬೇಡಿʼʼ ಎಂದು ಬರೆದುಕೊಂಡಿದ್ದರು. ರಾಣಾ ದಗ್ಗುಬಾಟಿ, ಧನುಷ್, ಪ್ರಭಾಸ್‌, ಪೃಥ್ವಿರಾಜ್‌ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಜನ ಸ್ಟಾರ್‌ಗಳು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ| Kantara Movie | ʻರಿಷಬ್‌ ಶೆಟ್ಟಿ ನೀವು ನಿಜಕ್ಕೂ ಅದ್ಭುತʼ ಎಂದ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ!

Exit mobile version