Site icon Vistara News

Rekha Das: ರೇಖಾ ದಾಸ್‌ ಮಗಳು ನಟಿ ಶ್ರಾವ್ಯಾ ರಾವ್‌ ಮೇಲೆ ಚೀಟಿಂಗ್‌ ಆರೋಪ!

Actress Shravya Rao, daughter of Rekha Das,

ಬೆಂಗಳೂರು: ನಟಿ ರೇಖಾ ದಾಸ್‌ ಪುತ್ರಿ (Rekha Das) ನಟಿ ಶ್ರಾವ್ಯಾ ರಾವ್‌ ಮೇಲೆ ʻರಾಯಲ್‌ ಮೆಕ್‌ʼ ಸಿನಿಮಾ ನಟ ಧನುಷ್‌ ನಟಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಟಿ ಈಗಾಗಲೇ ಚಿತ್ರತಂಡದಿಂದ 4 ಲಕ್ಷ ರೂ. ಪಡೆದಿದ್ದು, ಪ್ರಮೋಷನ್‌ಗೆ ಬಾರದ ಹಿನ್ನಲೆಯಲ್ಲಿ ಹಾಗೂ ಅಗ್ರಿಮೆಂಟ್‌ ಪಾಲಿಸದಿದ್ದಕ್ಕೆ ಶೇ.25ರಷ್ಟು ಹಣ ವಾಪಸ್‌ ನೀಡಬೇಕು ಎಂದು ಆರೋಪಿಸಿದ್ದಾರೆ. ಆದರೆ ನಟಿ ಮಾತ್ರ ನಿರ್ಮಾಪಕ, ನಟ ಧನುಷ್‌ ಮಾತಾಡುವ ವೈಖರಿ ಸರಿಯಿಲ್ಲ. ಸಿನಿಮಾಗಾಗಿ ಪಡೆದ ಹಣಕ್ಕೆ ನಾನು ನ್ಯಾಯ ಒದಗಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಶ್ರಾವ್ಯಾ ರಾವ್‌ ಮೇಲೆ ನಟ ಧನುಷ್‌ ಗಂಭೀರ ಆರೋಪ!

ಹಣ ಪಡೆದು ಸಿನಿಮಾ ಪ್ರಮೋಷನ್‌ಗೆ ನಟಿ ಬರುತ್ತಿಲ್ಲ. ಈಗಾಗಲೇ 4 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ. ಅಗ್ರಿಮೆಂಟ್‌ ಪಾಲಿಸದಿದ್ದಕ್ಕೆ ಶೇ.25ರಷ್ಟು ಹಣ ವಾಪಸ್ ನೀಡಬೇಕು. ಸಿನಿಮಾ ಪ್ರಚಾರಕ್ಕೆ ಬರಲಿ, ಇಲ್ಲವೇ ಹಣ ವಾಪಸ್ಸು ಕೊಡಲಿ. ಹಣ ಪಡೆದ ಬಳಿಕ ಶೂಟಿಂಗ್‌ ಗೈರಾಗಿದ್ದರು. ಶೂಟಿಂಗ್​ ಇದೆ ಎಂದು ಕಾಲ್‌ ಮಾಡಿದರೂ ಪ್ರತಿಕ್ರಿಯಿಸುತ್ತಿರಲಿಲ್ಲ. ಟೀಸರ್​, ಆಡಿಯೋ ​, ಟ್ರೈಲರ್​ ರಿಲೀಸ್​ಗೂ ಶ್ರಾವ್ಯ ಬಂದಿಲ್ಲ. ಹೊಸಬರ ಜತೆ ಪ್ರೆಸ್‌ ಮೀಟ್‌ಗಳಲ್ಲಿ ಭಾಗವಹಿಸಿದ್ದರೆ ಅವಮಾನವಂತೆʼʼ ಎಂದು ನಟ ಹೇಳಿದರು.

ಈ ಬಗ್ಗೆ ಶ್ರಾವ್ಯಾ ರಾವ್‌ ವಿಸ್ತಾರ ಜತೆ ಮಾತನಾಡಿ ʻʻಪಡೆದ ಸಂಭಾವನೆಗೆ ನಾನು ಸಿನಿಮಾ ಪೂರ್ತಿ ಮಾಡಿದ್ದೇನೆ. ಇಡೀ ಸಿನಿಮಾಗಾಗಿ ನಾನು 4 ಲಕ್ಷ ರೂ. ಸಂಭಾವನೆ ಪಡೆದಿದ್ದೆ. ರಾಯಲ್‌ ಮೆಕ್‌ ಸಿನಿಮಾಗಾಗಿ 4 ವರ್ಷ ಸಮಯ ಕೊಡಬೇಕಾ? 4 ವರ್ಷಗಳ ಹಿಂದೆ ಪ್ರಾರಂಭವಾದ ಸಿನಿಮಾ ಇನ್ನೂ ಮುಗಿದಿಲ್ಲ. ನಾಲ್ಕು ವರ್ಷಗಳ ನಂತರ ಪ್ರಮೋಷನ್‌ಗಾಗಿ ಕರೆಯುತ್ತಿದ್ದಾರೆ. ನಿರ್ಮಾಪಕ, ನಟ ಧನುಷ್‌ ಮಾತಾಡುವ ವೈಖರಿ ಸರಿಯಿಲ್ಲ. ಸಿನಿಮಾಗಾಗಿ ಪಡೆದ ಹಣಕ್ಕೆ ನಾನು ನ್ಯಾಯ ಒದಗಿಸಿದ್ದೇನೆ. ನಟ ಧನುಷ್ ಆರೋಪಗಳಲ್ಲಿ ಯಾವುದೇ ಹುರುಳಿಲ್ಲʼಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Raj Kundra: ರಾಜ್ ಕುಂದ್ರಾ ಸಿನಿಮಾ ತೆರೆಗೆ; ಹೊಗಳಿದ ಶಿಲ್ಪಾ ಶೆಟ್ಟಿ

ನಟ ಕೂಡ ವಿಸ್ತಾರ ಜತೆಗೆ ಮಾತನಾಡಿ ʻʻರೇಖಾ ದಾಸ್ ಅವರ ಗರಡಿಯಲ್ಲಿ ನಾನು ನಟನೆ ಕಲಿತ್ತಿದ್ದೇನೆ. ಹೀಗಾಗಿ ಅವರ ಮಗಳನ್ನೇ ಕ್ಯಾಸ್ಟ್ ಮಾಡಲು ನಿರ್ಧಾರ ಮಾಡಿದ್ದೆ. ಈಗ ಮಗಳು ಹಾಗು ಅಮ್ಮ ಇಬ್ಬರು ರೆಸ್ಪಾನ್ಸ್ ಮಾಡ್ತಿಲ್ಲ. ರಿಲೀಸ್ ಡೇಟ್ ಇನ್ನು ಫಿಕ್ಸ್ ಮಾಡಿಲ್ಲ. 2018ಮಾರ್ಚ್ ಅಲ್ಲಿ ಸಿನಿಮಾ ಶುರುವಾಗಿದ್ದು. ಶೇ. 80ರಷ್ಟು ಪೇಮೆಂಟ್ ಆಗಲೇ ಕ್ಲಿಯರ್ ಮಾಡಿದ್ದೆ. 2022ನಲ್ಲಿ ಡಬ್ಬಿಂಗ್ ಆಗಿದೆʼʼಎಂದು ಮಾಹಿತಿ ಹಂಚಿಕೊಂಡರು.

ಸ್ನೇಹಿತರೆಲ್ಲ ಸೇರಿಕೊಂಡು ‘ಶಬರಿ ಫಿಲ್ಮ್ಸ್​’ ಮೂಲಕ ಬಂಡವಾಳ ಹೂಡಿದ್ದಾರೆ. ನಾಗಭೂಷಣ್ ಜೆ.ಹೆಚ್.ಎಂ. ಹಾಗೂ ಡಾ. ಜಯದೇವ ಹಾಸನ್ ಅವರು ಜಂಟಿಯಾಗಿ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಧನುಶ್​ ಮತ್ತು ಶ್ರಾವ್ಯಾ ರಾವ್​ ಜತೆ ರಾಘವೇಂದ್ರ ರಾಜ್‌ಕುಮಾರ್, ಗೌತಮಿ ಜಯರಾಂ, ರಮೇಶ್‌ಭಟ್, ವಿನಯಾ ಪ್ರಸಾದ್, ನೀನಾಸಂ ಅಶ್ವಥ್, ಕುರಿಪ್ರತಾಪ್, ಪವನ್‌, ರೇಖಾ ದಾಸ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಂದ್ರಮೌಳಿ ಅವರ ಕ್ಯಾಮೆರಾ ವರ್ಕ್​, ರುತ್ವಿಕ್‌ ಶೆಟ್ಟಿ ಹಾಗೂ ನವೀನ್‌ ಶೆಟ್ಟಿ ಅವರ ಸಂಕಲನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಫಯಾಜ್‌ ಖಾನ್ ಮತ್ತು ಅಶೋಕ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಸ್ಟೀಫನ್ ಅವರ ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿದ್ದಾರೆ.

Exit mobile version