Site icon Vistara News

Actress Soundarya Anniversary: ಅಭಿಮಾನಿಗಳ ಹೃದಯಲ್ಲಿ ʻಸೌಂದರ್ಯʼ ಇನ್ನೂ ಜೀವಂತ!

Actress Soundarya

ಸ್ಯಾಂಡಲ್‌ವುಡ್‌ ನಟಿ ಸೌಂದರ್ಯ (Actress Soundarya Anniversary) ಹೆಸರು ಕೇಳಿದಾಕ್ಷಣ ನೆನಪಾಗುವುದು ಆಪ್ತಮಿತ್ರ. ಸೌಂದರ್ಯ ಇಹಲೋಕ ತ್ಯಜಿಸಿ 19 ವರ್ಷ ಕಳೆದಿದೆ. ಬಹುಭಾಷಾ ತಾರೆಯಾಗಿರುವ ಸೌಂದರ್ಯ ಚಿಕ್ಕ ವಯಸ್ಸಿನಲ್ಲೇ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದರು. ನಟಿ ಜೀವಂತವಾಗಿರುತ್ತಿದ್ದರೆ ಜುಲೈ 18ರಂದು 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಇಂದಿಗೂ ನಟಿ ಅಭಿಮಾನಿಗಳ ಮನಸ್ಸಿನಿಂದ ದೂರವಾಗಿಲ್ಲ. ಸೌಂದರ್ಯಾ ಅವರ ಮೂಲ ಹೆಸರು ಕೆ.ಎಸ್​. ಸೌಮ್ಯ. ಆದರೆ ಚಿತ್ರರಂಗದಲ್ಲಿ ಅವರು ಸೌಂದರ್ಯ ಎಂಬ ಹೆಸರಿನಿಂದ ಗುರುತಿಸಿಕೊಂಡರು.

‘ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ’ ಎಂಬ ಬಿರುದು

ಜುಲೈ 18ರಂದು ಸೌಮ್ಯ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗಂಜಿಗುಂಟೆ ಗ್ರಾಮ ಹುಟ್ಟಿದರು. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿ ‘ದ್ವೀಪ’ ಸಿನಿಮಾ ನಿರ್ಮಿಸಿ ಸೌಂದರ್ಯ ಸಕ್ಸೆಸ್‌ ಕಂಡಿದ್ದರು. 1992ರಲ್ಲಿ ಕನ್ನಡದ ‘ಗಂಧರ್ವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಸೌಂದರ್ಯಾ ಪದಾರ್ಪಣೆ ಮಾಡಿದ್ದರು. ಪರಭಾಷೆಗೂ ಕಾಲಿಟ್ಟರು. ತಮಿಳು, ತೆಲುಗು ಕೊನೆಗೆ ಬಾಲಿವುಡ್ ಸಿನಿಮಾಗಳಲ್ಲೂ ಮಿಂಚಿ ಗಮನ ಸೆಳೆದರು. ‘ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ’ ಎಂಬ ಬಿರುದು ಪಡೆದರು. ರಜನಿಕಾಂತ್, ಅಮಿತಾಬ್ ಬಚ್ಚನ್, ವಿಷ್ಣುವರ್ಧನ್‌ರಂತಹ ನಟರುಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ‘ಆಪ್ತಮಿತ್ರ’ ಸಿನಿಮಾದ ನಾಗವಲ್ಲಿ/ಗಂಗಾ ಸೇರಿದಂತೆ ಬಗೆಬಗೆಯ ಪಾತ್ರಗಳನ್ನು ಅವರು ನಿಭಾಯಿಸಿದರು. ಆ ಮೂಲಕ ಅಭಿಮಾನಿಗಳ ಹೃದಯ ಕದ್ದರು.

ನಿರ್ಮಾಪಕಿಯಾಗಿಯೂ ಸೌಂದರ್ಯ ಗುರುತಿಸಿಕೊಂಡಿದ್ದರು. ಅವರು ನಿರ್ಮಿಸಿದ ‘ದ್ವೀಪ’ ಚಿತ್ರಕ್ಕೆ ಎರಡು ‘ರಾಷ್ಟ್ರ ಪ್ರಶಸ್ತಿ’ ಒಲಿದು ಬಂದವು. ನಾಲ್ಕು ‘ರಾಜ್ಯ ಪ್ರಶಸ್ತಿ’, ಮೂರು ‘ಫಿಲ್ಮ್​ ಫೇರ್​’ ಪ್ರಶಸ್ತಿ ಪಡೆದುಕೊಂಡಿದ್ದು ಈ ಸಿನಿಮಾದ ಹೆಗ್ಗಳಿಕೆ.

ಇದನ್ನೂ ಓದಿ: Pranitha Subhash: ಹಿಂದು ಆಚರಣೆಗಳು ಕೇವಲ ಪಿತೃಪ್ರಧಾನವಲ್ಲಎಂದ ನಟಿ ಪ್ರಣಿತಾ ಸುಭಾಷ್

Actress Soundarya Anniversary

12 ವರ್ಷಗಳ ವೃತ್ತಿಜೀವನದಲ್ಲಿ ಮುಖ್ಯವಾಗಿ ತೆಲುಗಿನಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಹಿಂದಿ ಚಲನಚಿತ್ರವನ್ನು ಮಾಡಲು ಸಾಧ್ಯವಾಯಿತು. ನಟಿ ನಿಧನರಾದಾಗ ಅವರು ಕೇವಲ 31 ವರ್ಷ ವಯಸ್ಸಿನವರಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದರು. ಆದರೆ ಅವರ ಮರಣದ ನಂತರ ಅವರ ದೇಹವೂ ಕುಟುಂಬ ಸದಸ್ಯರಿಗೆ ಸಿಗಲಿಲ್ಲ.

ವಾಸ್ತವವಾಗಿ ನಟಿ ಸಾಯುವ ಸ್ವಲ್ಪ ಮೊದಲು ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದರು. ಅದಕ್ಕಾಗಿ ಅವರು ಪ್ರಚಾರಕ್ಕಾಗಿ ಕರೀಂ ನಗರಕ್ಕೆ ಹೋಗುತ್ತಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಅವರ ಹೆಲಿಕಾಪ್ಟರ್ ಟೇಕಾಫ್ ಆಗಿದ್ದು, 100 ಅಡಿ ಎತ್ತರಕ್ಕೆ ಬಂದಾ ಪತನಗೊಂಡಿದೆ. ನಟಿಯ ವಿವಾಹವಾಗಿ ಒಂದು ವರ್ಷ ಪೂರ್ಣಗೊಂಡಿರಲಿಲ್ಲ. ಅದಕ್ಕೂ ಮುನ್ನವೇ ಅವರು ಈ ಜಗತ್ತಿಗೆ ವಿದಾಯ ಹೇಳಿದ್ದರು.

Exit mobile version