Site icon Vistara News

Actress Sreeleela: ರಾಮ್ ಪೋತಿನೇನಿ ಜತೆ ಭರ್ಜರಿ ಸ್ಟೆಪ್ಸ್‌; ಶ್ರೀಲೀಲಾ ವಯ್ಯಾರಕ್ಕೆ ಫ್ಯಾನ್ಸ್‌ ಫಿದಾ!

Actress Sreeleela in Gandarabai song

ಬೆಂಗಳೂರು: ಉಸ್ತಾದ್ ರಾಮ್ ಪೋತಿನೇನಿ (ram pothineni) ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಷನ್ ಮಾಸ್ ಆ್ಯಕ್ಷನ್ ಎಂಟರ್‌ಟೈನರ್ ಸ್ಕಂದ ಸಿನಿಮಾದ (Skanda cinema) ‘ಗಂಡರಬಾಯ್..’ ( Gandarabai song)  ಹಾಡಿನ ಲಿರಿಕಲ್ ಹಾಡಿನ ಪ್ರೋಮೊ ಇತ್ತೀಚೆಗೆ ಬಿಡುಗಡೆ ಆಗಿದೆ. ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ʻಸ್ಕಂದʼ ಸಿನಿಮಾಗಾಗಿ ಮಾಸ್ ಅವತಾರ ತಾಳಿದ್ದಾರೆ. ಕನ್ನಡತಿ ಶ್ರೀಲೀಲಾ (Actress Sreeleela) ಅವರು ರಾಮ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಇದೀಗ ಗಂಡರಬಾಯ್ ಹಾಡಿನಲ್ಲಿ ರಾಮ್ ಪೋತಿನೇನಿ- ಶ್ರೀಲೀಲಾ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೊ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಹಾಡಿನ ಕೆಲ ಸ್ಟಿಲ್ಸ್​ಗಳನ್ನು ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರ ಸೆಪ್ಟೆಂಬರ್ 15ರಂದು ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಸಂಗೀತ ಚಿತ್ರಕ್ಕಿದೆ. ಸ್ಕಂದ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಆಗಸ್ಟ್‌ 26ರಂದು ಚಿತ್ರದ ಟ್ರೈಲರ್‌ ಬಿಡುಗಡೆಯಾಗಲಿದೆ.

ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಟಿ ಶ್ರೀಲೀಲಾ ಚಿತ್ರರಂಗಕ್ಕೆ ಕಾಲಿಟ್ಟರು. ರಶ್ಮಿಕಾ ಮಂದಣ್ಣ ರೀತಿ ಶ್ರೀಲೀಲಾ ತೆಲುಗಿನಲ್ಲಿ ಹೆಸರು ಮಾಡುತ್ತಿದ್ದಾರೆ. ನಟಿಯ ಕೈಯಲ್ಲಿ ಬರೋಬ್ಬರಿ ಎಂಟು ಸಿನಿಮಾಗಳಿವೆ. ಶ್ರೀಲೀಲಾ ಡ್ಯಾನ್ಸ್‌ ಮತ್ತು ನಟನೆಗೆ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ. ಬಹುತೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದರೆ, ಇನ್ನು ಕೆಲವು ಚಿತ್ರೀಕರಣ ಹಂತದಲ್ಲಿವೆ. ʻಪೆಲ್ಲಿ ಸಂದಡಿʼ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಶ್ರೀಲೀಲಾ. ಮಾಸ್ ಮಹಾರಾಜ ರವಿತೇಜ್ ಅಭಿನಯದ ʻಧಮಾಕಾʼ ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ: Actress Sreeleela: ’ಸ್ಕಂದ’ ಸಿನಿಮಾ ಸಾಂಗ್‌ ಔಟ್‌; ಶ್ರೀಲೀಲಾ ಡ್ಯಾನ್ಸ್ ಫ್ಲೋರ್!

ಸಿತಾರಾ ಎಂಟರ್​ಟೇನ್‌ಮೆಂಟ್ಸ್‌​ ಮತ್ತು ಫಾರ್ಚೂನ್​ ಫೋರ್​ ಸಿನಿಮಾಸ್​ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ‘ವಿಡಿ 12’ ಚಿತ್ರದಲ್ಲಿ ಶ್ರೀಲೀಲಾ ವಿಜಯ್‌ ದೇವರಕೊಂಡ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ʻಭಗವಂತ್‌ ಕೇಸರಿʼ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ (Nandamuri Balakrishna) ಮತ್ತು ನಟಿ ಶ್ರೀಲೀಲಾ (Actress Sreeleela) ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ವಕ್ಕಂತಂ ವಂಶಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎಕ್ಸ್ಟ್ರಾಡಿನರಿ ಮ್ಯಾನ್ ಚಿತ್ರಕ್ಕೂ ಶ್ರೀಲೀಲಾ ನಾಯಕಿ. ಈ ಮೊದಲು ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸುತ್ತಿರುವುದಾಗಿ ಚಿತ್ರತಂಡ ತಿಳಿಸಿತ್ತು. ಡೇಟ್ಸ್ ಕಾರಣದಿಂದ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದು, ಆ ಜಾಗಕ್ಕೆ ಶ್ರೀಲೀಲಾ ಎಂಟ್ರಿಯಾಗಿದೆ.

ಇದನ್ನೂ ಓದಿ: Rashmika Mandanna: ‘ಎಕ್ಸ್ಟ್ರಾಡಿನರಿ ಮ್ಯಾನ್’ಗೆ ಶ್ರೀಲೀಲಾ ನಾಯಕಿ; ರಶ್ಮಿಕಾ ಔಟ್‌!

ಈ ನಡುವೆ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪ 2’ (Pushpa 2 Movie) ಸಿನಿಮಾದಲ್ಲಿನ ಸ್ಪೆಷಲ್​ ಸಾಂಗ್​ಗೆ ಶ್ರೀಲೀಲಾ ಡ್ಯಾನ್ಸ್​ ಮಾಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ‘ಸೀಕ್ವೆಲ್​ನಲ್ಲಿ ಆ ಅವಕಾಶ ಶ್ರೀಲೀಲಾ ಪಾಲಾಗಿದೆ ಎನ್ನಲಾಗುತ್ತಿದೆ.

Exit mobile version