Site icon Vistara News

Actress Sreeleela | ಟಾಲಿವುಡ್‌ನಲ್ಲಿ ನಟಿ ಶ್ರೀಲೀಲಾ ಹವಾ: 7 ಚಿತ್ರಗಳಿಗೆ ಸಹಿ ಹಾಕಿದ ನಟಿ

Actress Sreeleela (signatured 7 films)

ಬೆಂಗಳೂರು: ಚಂದನವನದಲ್ಲಿ ʻಕಿಸ್ʼ, ʻಭರಾಟೆʼ, ʻಬೈಟು ಲವ್ʼ ಮೂರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶ್ರೀಲೀಲಾ (Actress Sreeleela) ಇದೀಗ ಏಳು ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಶ್ರೀಲೀಲಾ ಸದ್ಯ ಏಳು ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದು ಟಾಲಿವುಡ್‌ನಲ್ಲಿಯೇ ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಬ್ಯುಸಿಯಾಗುತ್ತಿದ್ದಾರೆ.

ʻಪೆಳ್ಳಿ ಸಂದಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರೀಲೀಲಾ ಈ ಹಿಂದೆ ಅಷ್ಟೇ ನಟಿ ಅಲ್ಲು ಅರ್ಜನ್​ (Allu Arjun) ಜತೆ ನಟಿಸಿರುವುದು ಸುದ್ದಿಯಾಗಿತ್ತು. ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡಿರುವುದು ಸಿನಿಮಾಗಾಗಿ ಅಲ್ಲ. ಬದಲಿಗೆ, ಒಂದು ಜಾಹೀರಾತಿನಲ್ಲಿ ಇವರಿಬ್ಬರು ಜೋಡಿ ಆಗಿದ್ದಾರೆ.

ಇದನ್ನೂ ಓದಿ | Tollywood News | ನಿರ್ಮಾಪಕನ ವಿರುದ್ಧ ಬೆತ್ತಲಾಗಿ ಪ್ರತಿಭಟನೆ ನಡೆಸಿದ ಟಾಲಿವುಡ್‌ ನಟಿ!

ಶ್ರೀಲೀಲಾ ಸದ್ಯ ಏಳು ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದು ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಚಿತ್ರ, ಬೋಯಾಪತಿ ಶ್ರೀನಿವಾಸ್ ಹಾಗೂ ರಾಮ್ ಪೋತಿನೇನಿ ಕಾಂಬಿನೇಶನ್‌ನ ಚಿತ್ರ, ನಿತಿನ್ ಅಭಿನಯದ 32ನೇ ಚಿತ್ರ, ವೈಷ್ಣವ್ ತೇಜಾ ಅಭಿನಯದ 4ನೇ ಚಿತ್ರ, ಅನಗನಗಾ ಒಕ ರೋಜು, ನಂದಮೂರಿ ಬಾಲಕೃಷ್ಣ ನಟನೆಯ 108ನೇ ಚಿತ್ರವಾಗಿದೆ.

ವಿ ತೇಜಾ ನಟನೆಯ ‘ಧಮಾಕಾ’ ಸಿನಿಮಾಗೆ ಶ್ರೀಲೀಲಾ ನಾಯಕಿ ಆಗಿದ್ದಾರೆ. ಆ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಹಲವು ಚಿತ್ರತಂಡಗಳ ಜತೆ ಅವರು ಮಾತುಕತೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ | Sreeleela | ನಟಿ ಶ್ರೀಲೀಲಾ ತಾಯಿ ವಿರುದ್ಧ ದಾಖಲಾಯ್ತು ಎಫ್‌ಐಆರ್‌: ಡೀಲ್ ಮಾಡಲು ಹೋಗಿ ಕೇಸಲ್ಲಿ ಫಿಟ್!

Exit mobile version