Site icon Vistara News

Actress Sridevi : ಶ್ರೀದೇವಿಯನ್ನು ನೆನಪಿಸಿಕೊಂಡ ಕುಟುಂಬ; ನಿನಗಾಗಿ ಇಂದಿಗೂ ಹುಡುಕುವೆ ಎಂದ ಜಾಹ್ನವಿ

#image_title

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ (Actress Sridevi) ಅವರು ನಮ್ಮನ್ನು ಅಗಲಿ ಇದೇ ತಿಂಗಳ 24ಕ್ಕೆ ಐದು ವರ್ಷಗಳಾಗಲಿವೆ. ಆ ಸಂಬಂಧ ಅವರ ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಶ್ರೀದೇವಿ ಅವರನ್ನು ನೆನೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral News : ಈ ಫೋಟೋದಲ್ಲಿ ಗೊಂಬೆಯನ್ನು ಹುಡುಕೋದು ಎಷ್ಟೊಂದು ಕಷ್ಟ! ನೀವೇನಾದರೂ ಹುಡುಕಬಲ್ಲಿರಾ?

ಜಾಹ್ನವಿ ಅವರು ಅಮ್ಮನೊಂದಿಗೆ ತಾವು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಫೋಟೋ ಹಂಚಿಕೊಂಡಿದ್ದು, “ನಾನು ಈಗಲೂ ನಿನ್ನನ್ನು ಎಲ್ಲೆಡೆ ಹುಡುಕುತ್ತೇನೆ ಅಮ್ಮಾ. ಈಗಲೂ ನಾನು ನೀನು ಹೆಮ್ಮೆ ಪಡುತ್ತೀಯೆಂದುಕೊಂಡೇ ಎಲ್ಲವನ್ನು ಮಾಡುತ್ತೇನೆ. ನಾನು ಎಲ್ಲಿಗೆ ಹೋದರೂ ಅಲ್ಲಿ ನಾನು ಮಾಡುವ ಪ್ರತಿಯೊಂದೂ ಕೆಲಸವೂ ನಿಮ್ಮೊಂದಿಗೆ ಪ್ರಾರಂಭವಾಗುತ್ತದೆ ಮತ್ತು ನಿಮ್ಮೊಂದಿಗೇ ಕೊನೆಗೊಳ್ಳುತ್ತದೆ” ಎಂದು ಬರೆದುಕೊಂಡಿದ್ದಾರೆ.


ಈ ಪೋಸ್ಟ್ ಬೆನ್ನಲ್ಲೇ ಬೋನಿ ಕಪೂರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀದೇವಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. “ನೀನು 5 ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದೆ. ನಿನ್ನ ಪ್ರೀತಿ ಮತ್ತು ನೆನಪುಗಳು ನಮ್ಮನ್ನು ಮುಂದುವರಿಸುತ್ತವೆ ಮತ್ತು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ” ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಫೋಟೋದೊಂದಿಗೆ “ನನ್ನನ್ನು ಒಂಟಿಯಾಗಿ ಬಿಟ್ಟು ಹೋದವರೇ ಇಂದಿಗೂ ನನ್ನೊಂದಿಗಿದ್ದಾರೆ” ಎಂದೂ ತಿಳಿಸಿದ್ದಾರೆ.


ತಂದೆ ಮತ್ತು ಅಕ್ಕನ ಪೋಸ್ಟ್ ನೋಡಿರುವ ಖುಷಿ ಕಪೂರ್ ಕೂಡ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ಅಮ್ಮನೊಂದಿಗೆ ತಾವಿದ್ದ ಫೋಟೋವನ್ನು ಹಂಚಿಕೊಂಡಿದ್ದಾರೆ.

Exit mobile version