Site icon Vistara News

Actress Tamanna Bhatia: ಬೆಂಗಳೂರಿನ ಶಾಲೆಯಲ್ಲಿ ನಟಿ ತಮನ್ನಾ ಭಾಟಿಯಾ ಬಗ್ಗೆ ಪಾಠ; ಪೋಷಕರ ಆಕ್ಷೇಪ

tamanna bhatia gold

ಬೆಂಗಳೂರು: ನಟಿ ತಮನ್ನಾ ಭಾಟಿಯಾ (Actress Tamanna Bhatia) ಬಗ್ಗೆ ಬೆಂಗಳೂರಿನ ಸಿಂಧಿ ಶಾಲೆಯೊಂದರಲ್ಲಿ (Sindhi School) ಪಠ್ಯವೊಂದನ್ನು (Text) ಸೇರಿಸಲಾಗಿದೆ. ಪೋಷಕರು ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ್ದು, ಈಕೆಯ ಬಗ್ಗೆ ಮಕ್ಕಳು ʼಹೆಚ್ಚಿನ ಅಧ್ಯಯನʼಕ್ಕೆ ಇಂಟರ್‌ನೆಟ್‌ (Internet) ಮೊರೆ ಹೋದರೆ ಗತಿಯೇನು?ʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ, ಇತ್ತೀಚೆಗೆ ವೆಬ್‌ಸಿರೀಸ್‌ನಲ್ಲಿ ಬೋಲ್ಡ್ ದೃಶ್ಯಗಳ ಮೂಲಕ ಸುದ್ದಿಯಾಗಿದ್ದ ನಟಿ ತಮನ್ನಾ ಭಾಟಿಯಾ ಕುರಿತ ಅಧ್ಯಾಯವನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ʼಸಿಂಧಿ ಹೈಸ್ಕೂಲ್’ನಲ್ಲಿನ ಪಠ್ಯದಲ್ಲಿ ಸೇರಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಸಿಂಧಿ ಮಹನೀಯರ ಕುರಿತು ಸೇರಿಸಲಾದ ಅಧ್ಯಾಯದಲ್ಲಿ ತಮನ್ನಾ ಭಾಟಿಯಾ ಕುರಿತ ವಿವರವೂ ಇದೆ.

ಇದಕ್ಕೆ ಇಲ್ಲಿ ಓದುತ್ತಿರುವ ಏಳನೇ ತರಗತಿ ಮಕ್ಕಳ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಅವರೆಲ್ಲ ದೂರು ದಾಖಲಿಸಿದ್ದಾರೆ. ಅಧ್ಯಾಯ ಸೇರ್ಪಡೆ ಕುರಿತು ಪೋಷಕರು ಶಾಲೆಯ ಆಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ, ʼಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್’ ಸಂಪರ್ಕಿಸುವಂತೆ ತಿಳಿಸಿದೆ ಎಂದು ತಿಳಿದು ಬಂದಿದೆ.

ಹೆಬ್ಬಾಳದ ಸಿಂಧಿ ಶಾಲೆಯಲ್ಲಿ 7ನೇ ತರಗತಿಯ ಪಠ್ಯಪುಸ್ತಕದಲ್ಲಿ ಈ ಸಮುದಾಯದ ಬಗ್ಗೆ ಪಾಠ ಒಳಗೊಂಡಿದೆ. ಅದರಲ್ಲಿ ಒಂದು ಅಧ್ಯಾಯವು ದೇಶದ ವಿಭಜನೆಯ ನಂತರದ ಜೀವನ, ಸಿಂಧ್‌ನಲ್ಲಿ ವಲಸೆ, ಸಮುದಾಯ ಮತ್ತು ಕಲಹ, 1947ರಿಂದ 1962 ಕುರಿತಾದ ಅಂಶಗಳು ಇವೆ. ಭಾಷಾ ಅಲ್ಪಸಂಖ್ಯಾತರಾದ ಸಿಂಧಿ ಸಮುದಾಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವಕಾಶ ಮಾಡಿಕೊಡಲಾಗಿದೆ.

ಸಿಂಧಿ ಸಮುದಾಯದ ನಟ ರಣವೀರ್ ಸಿಂಗ್ (Actor Ranveer Singh) ಅವರಂತಹ ಸಮುದಾಯದ ಪ್ರಮುಖ ಮತ್ತು ಯಶಸ್ವಿ ಸದಸ್ಯರನ್ನು ಅಧ್ಯಾಯದಲ್ಲಿ ಸೇರಿಸಿದರೆ ಯಾವುದೇ ವಿರೋಧ ಇಲ್ಲ. ಆದರೆ ತಮನ್ನಾಗೆ ಸಂಬಂಧಿಸಿದ ವಿಷಯ ಸೇರ್ಪಡೆ ಸರಿಯಲ್ಲ ಎಂದು ಪೋಷಕರು ಹೇಳಿದರು.

ಸ್ವಾತಂತ್ರ್ಯಾ ನಂತರದ ಭಾರತೀಯರ ಜನಜೀವನ ಆಧ್ಯಾಯದಲ್ಲಿ ತಮನ್ನಾ ಭಾಟಿಯಾ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಅವರು ಹಸಿ ಬಿಸಿ, ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಾರೆ. ಅವರು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರು ಮಕ್ಕಳಿಗೆ ಆದರ್ಶವಾಗಬೇಕೇ?. ಇದು ಸರಿಯಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಮತ್ತೊಂದು ಸಂಸ್ಕೃತಿಯ ಬಗ್ಗೆ ಪರಿಚಯಿಸುವ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ಪೋಷಕರು ನಮ್ಮ ಆಕ್ಷೇಪಣೆಯು 7ನೇ ತರಗತಿ ವಿದ್ಯಾರ್ಥಿಗಳಿಗೆ ಸೂಕ್ತವಲ್ಲದ ನಟಿಯ ಅಧ್ಯಾಯ ಒಳಗೊಂಡಿದೆ. ಇದನ್ನು ವಿರೋಧಿಸಿದರೆ, ತಮ್ಮ ವಾರ್ಡ್‌ಗಳಿಗೆ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಶಾಲಾ ಆಡಳಿತ ಮಂಡಳಿ ಬೆದರಿಕೆ ನೀಡುತ್ತಿದೆ ಎಂದು ಪೋಷಕರು ಆರೋಪಿಸಿದರು.

ಸಿಂಧಿ ಸಮುದಾಯದ ಹಿರಿಯ ಕಲಾವಿದರ ಕುರಿತ ಅಧ್ಯಾಯಗಳ ಬೋಧನೆ ಬಗ್ಗೆ ಸಮಸ್ಯೆ ಇಲ್ಲ. ಆದರೆ ತಮನ್ನಾ ಭಾಟಿಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಿದರೆ ಅರೆಬರೆ ಬಟ್ಟೆಯ, ಅಸೂಕ್ತವಾದ ವಿಷಯ ಕಾಣಿಸುತ್ತದೆ. ಹೀಗಾಗಿ ಇವರ ಬಗ್ಗೆ ಮಕ್ಕಳಿಗೆ ಹೇಳಿಕೊಡುವುದು ಸೂಕ್ತ ಅಲ್ಲ ಎಂದು ಪೋಷಕರು ಆಡಳಿತ ಮಂಡಳಿಗೆ, ಸಂಬಂಧಿಸಿದ ಇಲಾಖೆಗೆ ದೂರಿದ್ದಾರೆ.

ಇದನ್ನೂ ಓದಿ: Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Exit mobile version