Site icon Vistara News

Actress Urvashi: ‘ರಾಣಿ’ ಸಿನಿಮಾ ಮೂಲಕ ಭಾವನಾ, ಹನಿ ರೋಸ್‌ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಊರ್ವಶಿ

Urvashi, Bhavana, and Honey Rose to team up ‘Rani’

ಬೆಂಗಳೂರು : ಶಂಕರ್ ರಾಮಕೃಷ್ಣನ್ ನಿರ್ದೇಶನದ ‘ರಾಣಿ’ (Actress Urvashi) ಚಿತ್ರಕ್ಕಾಗಿ ಲೆಜೆಂಡರಿ ನಟಿ ಊರ್ವಶಿ ಅವರು ನಟಿ ಭಾವನಾ (Bhavana) ಮತ್ತು ಹನಿ ರೋಸ್ (honey rose) ಅವರೊಂದಿಗೆ ಜತೆಯಾಗಲಿದ್ದಾರೆ. ಮಾಲಿವುಡ್‌ ‘ರಾಣಿ’ ಚಿತ್ರದ ನಿರ್ದೇಶಕರು ಇದೀಗ ಟೈಟಲ್ ಅನೌನ್ಸ್‌ಮೆಂಟ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಶಂಕರ್ ರಾಮಕೃಷ್ಣನ್‌ ಅಧಿಕೃತ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ‘ರಾಣಿ’ ಶೀರ್ಷಿಕೆಯ ಪ್ರಕಟಣೆಯ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಪೋಸ್ಟರ್‌ ಹಂಚಿಕೊಂಡು ʻ “ಆತ್ಮೀಯ ಶಂಕರ್ ರಾಮಕೃಷ್ಣನ್, ಊರ್ವಶಿ, ಭಾವನಾ, ಮಾಲಾಪಾರ್ವತಿ, ಹನಿರೋಸ್, ಅನುಮೋಲ್ ಇಂದ್ರನ್ಸ್ ಚೆಟ್ಟನ್ ಮತ್ತು ರಾಣಿ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. ಮಮ್ಮುಟ್ಟಿ, ಪೃಥ್ವಿರಾಜ್ ಸುಕುಮಾರನ್, ಆರ್ಯ ಮತ್ತು ಪ್ರಿಯಾ ಮಣಿ ಕೂಡ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೀರ್ಷಿಕೆ ಪ್ರಕಟಣೆಯ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Pranitha Subhash: ಮಾಲಿವುಡ್‌ಗೆ ಎಂಟ್ರಿ ಕೊಟ್ಟ `ಪೊರ್ಕಿ’  ಸಿನಿಮಾ ಖ್ಯಾತಿಯ ಪ್ರಣಿತಾ ಸುಭಾಷ್!

‘ರಾಣಿ’ ಸಿನಿಮಾ ಪೋಸ್ಟ್‌

ಶಂಕರ್ ರಾಮಕೃಷ್ಣನ್ ನಿರ್ದೇಶನದ ಈ ಚಿತ್ರವನ್ನು ವಿನಾಯಕ್ ಗೋಪಾಲ್ ಛಾಯಾಗ್ರಹಣವನ್ನು ನಿಭಾಯಿಸಲಿದ್ದಾರೆ. ಅಪ್ಪು ಭಟ್ಟತಿರಿ ಸಂಕಲನ, ಜೊನಾಥನ್ ಬ್ರೂಸ್ ಹಿನ್ನೆಲೆ ಸಂಗೀತ ಸಂಯೋಜಕರಾಗಿ ಹಾಗೂ ಸುಪ್ರೀಮ್ ಸುಂದರ್ ಸಾಹಸ ಚಿತ್ರಕ್ಕಿದೆ.

‘ರಾಣಿ’ ಚಿತ್ರದಲ್ಲಿ ಊರ್ವಶಿ, ಭಾವನಾ, ಮಾಲಾ ಪಾರ್ವತಿ, ಹನಿ ರೋಸ್, ಅನುಮೋಲ್, ಇಂದ್ರನ್ಸ್, ಗುರು ಸೋಮಸುಂದರಂ, ಮಣಿಯನ್ಪಿಳ್ಳ ರಾಜು, ಅಶ್ವಿನ್ ಗೋಪಿನಾಥ್, ಕೃಷ್ಣನ್ ಬಾಲಕೃಷ್ಣನ್, ಅಂಬಿ ನೀನಾಸಂ, ಅಶ್ವಥ್ ಲಾಲ್ ಮತ್ತು ನಿಯತಿ ಕಡಂಬಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

Exit mobile version