ಮುಂಬೈ: ಪ್ರಸಿದ್ಧ ಹಿರಿಯ ನಟಿ ವಹೀದಾ ರೆಹಮಾನ್ (Actress Waheeda Rehman) ಹಿಂದಿನ ಕಾಲದಲ್ಲಿ ತಮ್ಮ ಸಿನಿಮಾಗಳ ಮೂಲಕವೇ ಜನರಿಗೆ ಹತ್ತಿರವಾದವರು. ನಟನೆಯ ಜತೆಯಲ್ಲಿ ಭರತನಾಟ್ಯದಲ್ಲೂ ಪ್ರವೀಣರಾಗಿರುವ ಅವರು ತಮ್ಮ ಮೊದಲನೇ ನೃತ್ಯ ಪ್ರದರ್ಶನದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ನಾಟು ನಾಟು ಹಾಡಿಗೆ ನೃತ್ಯ ಮಾಡಿದ ಪಾಕಿಸ್ತಾನಿ ನಟಿ; ಅಬ್ಬಬ್ಬಾ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು
ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಹೀದಾ ಅವರು ತಮ್ಮ ನೃತ್ಯ ಪ್ರದರ್ಶನದ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಮೊದಲ ಭರತನಾಟ್ಯ ಪ್ರದರ್ಶವವು ಭಾರತದ ಮೊದಲ ವೈಸರಾಯ್ ಸಿ. ರಾಜಗೋಪಾಲಾಚಾರಿ ಅವರ ಎದುರು ನಡೆದಿದ್ದಂತೆ.
ರಾಮಗೋಪಾಲಾಚಾರಿ ಅವರು ವಿಶಾಖಪಟ್ಟಣಂಗೆ ಬರುವುದಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆಗ ವಹೀದಾ ಅವರ ತಂದೆ ರೆಹಮಾನ್ ಅವರು ಅಲ್ಲಿನ ಐಎಎಸ್ ಅಧಿಕಾರಿಯಾಗಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಂದಲೇ ಮನೋರಂಜನೆ ನೀಡಿಸಬೇಕೆಂದು ಆದೇಶವಿತ್ತು. ಅದೆಷ್ಟೇ ಹುಡುಕಿದರೂ ವೀಣೆ ನುಡಿಸುವವರ ಹೊರತುಪಡಿಸಿ ಬೇರಾವುದೇ ಕಲಾವಿದರು ಸಿಕ್ಕಿರಲಿಲ್ಲ. ಆಗ ಅಧಿಕಾರಿಗಳೆಲ್ಲರೂ ಹಠ ಮಾಡಿ, ವಹೀದಾ ಅವರಿಂದಲೇ ನೃತ್ಯ ಮಾಡಿಸಿದ್ದರು.
ಇದನ್ನೂ ಓದಿ: Viral Video : ಇದು ಈ ಯುಗದ ಅದಿತಿ-ಜೈ ಜೋಡಿ; ವೈರಲ್ ಆಗ್ತಿದೆ ಕಾಲೇಜು ವಿದ್ಯಾರ್ಥಿಗಳ ವಿಡಿಯೊ
ಕಾರ್ಯಕ್ರಮದ ವೇದಿಕೆ ಮೇಲೆ ವಹೀದಾ ರೆಹಮಾನ್ ಅವರಿಂದ ಭರತನಾಟ್ಯ ಕಾರ್ಯಕ್ರಮ ಎಂದಾಕ್ಷಣ ರಾಜಗೋಪಾಲಾಚಾರಿ ಆಶ್ಚರ್ಯ ಪಟ್ಟಿದ್ದರಂತೆ. ಮುಸ್ಲಿಂ ಹೆಣ್ಣು ಮಗಳಾಗಿ ಭರತನಾಟ್ಯ ಕಲಿತು, ಪ್ರದರ್ಶನ ನೀಡುತ್ತಿದ್ದಾರೆಯೇ ಎಂದು ಕೇಳಿದ್ದರಂತೆ. ಹಾಗೆಯೇ ಅವರ ತಂದೆಯನ್ನು ಸಾಕಷ್ಟು ಹೊಗಳಿದ್ದರು ಎಂದು ವಹೀದಾ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದ ಮಾರನೇ ದಿನ ವಹೀದಾ ಅವರ ಫೋಟೋ ದಿನಪತ್ರಿಕೆಗಳ ಮೊದಲನೇ ಪುಟದಲ್ಲಿ ಅಚ್ಚಾಗಿದ್ದ ನೆನಪನ್ನೂ ಅವರು ಮಾಡಿಕೊಂಡಿದ್ದಾರೆ.