Site icon Vistara News

The Kerala Story: ನಾಳೆ 37 ದೇಶಗಳಲ್ಲಿ `ದಿ ಕೇರಳ ಸ್ಟೋರಿ’ ಬಿಡುಗಡೆ

Adah Sharma's The Kerala Story to release in 37 countries

ಬೆಂಗಳೂರು: `ದಿ ಕೇರಳ ಸ್ಟೋರಿ‘ (The Kerala Story) ಐದೇ ದಿನದಲ್ಲಿ 50 ಕೋಟಿ ರೂ. ಗಡಿ ದಾಟಿದೆ. ಸುದೀಪ್ತೋ ಸೇನ್ ನಿರ್ದೇಶನದ ವಿವಾದಾತ್ಮಕ ಚಿತ್ರ ʻದಿ ಕೇರಳ ಸ್ಟೋರಿʼ ಭಾರತದಲ್ಲಿಯ ಹಲವಾರು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಇದರ ನಡುವೆಯೂ ಮೇ 12ರಂದು 37 ವಿವಿಧ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾಗಲಿದೆ. ಈ ಮಾಹಿತಿಯನ್ನು ಚಿತ್ರದ ನಾಯಕಿ ಅದಾ ಶರ್ಮಾ ಮೇ 10ರಂದು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಅದಾ ಶರ್ಮಾ ಅವರು ಕೇರಳ ಸ್ಟೋರಿ ಸಿನಿಮಾವನ್ನು ಬೆಂಬಲಿಸಿದ್ದಕ್ಕಾಗಿ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ತಿಳಿಸಿದರು. ನಟಿ ಟ್ವೀಟ್‌ನಲ್ಲಿ “ನಮ್ಮ ಚಿತ್ರವನ್ನು ವೀಕ್ಷಿಸಲು ಹೊರಟಿರುವ ನಿಮಗೆಲ್ಲ ಧನ್ಯವಾದಗಳು. ಟ್ರೆಂಡ್ ಮಾಡಿದ್ದಕ್ಕಾಗಿ, ನನ್ನ ಅಭಿನಯವನ್ನು ಪ್ರೀತಿಸಿದ್ದಕ್ಕಾಗಿಯೂ ಧನ್ಯವಾದಗಳು. ಇದೇ 12ರಂದು ‘ದಿ ಕೇರಳ ಸ್ಟೋರಿ’ 37 ವಿವಿಧ ದೇಶಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಈ ಪೊಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ ಮಾಡಿ ʻʻಅದಾ ಅವರೇ ನೀವು ಅತ್ಯುತ್ತಮವಾಗಿ ಅಭಿನಯಿಸಿದ್ದೀರಿ. ನಟನೆ ಭಾವುಕನನ್ನಾಗಿಸಿತುʼʼಎಂದು ಒಬ್ಬರು ಬರೆದರೆ, ಇನ್ನೊಬ್ಬರು ʻʻಮರೆಮಾಚಲು ಬಯಸುವಂತಹ ಘಟನೆಗಳನ್ನು ಧೈರ್ಯದಿಂದ ಬೆಳಕಿಗೆ ತರುವ ಕೆಲಸವನ್ನು ಮಾಡಿದ್ದೀರಿ. ಅದನ್ನು ಮುಂದುವರಿಸಿ. ನಾವೆಲ್ಲರೂ ನಿಮ್ಮ ಹಿಂದೆ ಇದ್ದೇವೆʼʼಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʻʻಸರ್ಕಾರವು ಇಡೀ ಭಾರತದಲ್ಲಿ ತೆರಿಗೆ ಮುಕ್ತಗೊಳಿಸಬೇಕುʼʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: The Kerala Story : ಕೇರಳ ಸ್ಟೋರಿಯಲ್ಲಿ ಹೊಸ ಮಾದರಿಯ ಭಯೋತ್ಪಾದನೆ ಅನಾವರಣ ಎಂದ ಜೆ.ಪಿ ನಡ್ಡಾ

ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧಿಸಲಾಗಿದೆ (The Kerala Story Ban in West Bengal). ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ರದ್ದುಗೊಳಿಸುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಘೋಷಣೆ ಮಾಡಿದ್ದಾರೆ. ಮಾತ್ರವಲ್ಲದೆ, ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ, ತಮಿಳುನಾಡಿನ ಕೆಲವು ಮಲ್ಟಿಪ್ಲೆಕ್ಸ್‌ಗಳು ಕೇರಳ ಸ್ಟೋರಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದ್ದಾರೆ. ಇದರ ನಡುವೆಯೂ ಭಾರಿ ಕಲೆಕ್ಷನ್‌ನತ್ತ ಸಿನಿಮಾ ಸಾಗುತ್ತಿದೆ.

ಅದಾ ಶರ್ಮಾ ಪೋಸ್ಟ್‌

ಸುದೀಪ್ತೋ ಸೇನ್ ನಿರ್ದೇಶಿಸಿದ ಮತ್ತು ವಿಪುಲ್ ಶಾ ನಿರ್ಮಿಸಿದ ಈ ಚಲನಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ 56 ಕೋಟಿ ರೂ. ಗಳಿಕೆ ಮಾಡಿದೆ. ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್​ಗೆ ಮತಾಂತರ ಮಾಡುವ/ಲವ್ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ: The Kerala Story: ದೈಹಿಕವಾಗಿ, ಭಾವನಾತ್ಮಕವಾಗಿ ಭಯಭೀತಳನ್ನಾಗಿಸಿತು: ʻದಿ ಕೇರಳ ಸ್ಟೋರಿʼ ಬಗ್ಗೆ ನಟಿ ಅದಾ ಶರ್ಮಾ ಹೇಳಿದ್ದೇನು?

ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್​, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್​​​ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್​ಗಳಿಗೆ, ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್​ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಸಿನಿಮಾ ಬಿಡುಗಡೆಯಾಗಿತ್ತು.

Exit mobile version