ಬೆಂಗಳೂರು: ರಾಖಿ ಸಾವಂತ್ (Rakhi Sawant) ಮಾಜಿ ಪತಿ ಆದಿಲ್ ಖಾನ್ ದುರಾನಿ (Adil Khan Durrani ) ಕೆಲವು ದಿನಗಳಿಂದ ಪರಸ್ಪರ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ, ಆದಿಲ್ ಮತ್ತೊಂದು ಭಾರಿ ಹೇಳಿಕೆ ನೀಡಿ ಬೆಚ್ಚಿ ಬೀಳಿಸಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಆದಿಲ್ ತನ್ನ ವಿರುದ್ಧ ರಾಖಿ ಮಾಡಿದ ಆರೋಪಗಳನ್ನು ಉದ್ದೇಶಿಸಿ ಮಾತನಾಡುತ್ತಾ, ʻʻನನ್ನ ಸಾವಾದ್ರೆ ಅದಕ್ಕೆ ರಾಖಿ ಸಾವಂತ್ ಕಾರಣʼʼ ಎಂದು ಹೇಳಿಕೆ ನೀಡಿದ್ದಾನೆ.
ರಾಖಿ ತನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿರುವ ಆದಿಲ್, “ಅವಳು ಸುಳ್ಳು ಹೇಳಿದರೆ, ನಾನು ಸಾಕ್ಷಿಯೊಂದಿಗೆ ಸಾರ್ವಜನಿಕವಾಗಿ ಹೊರಬರುತ್ತೇನೆ. ಇದು ನನ್ನ ಹೋರಾಟ ಮತ್ತು ನಾನು ಏಕಾಂಗಿಯಾಗಿ ಹೋರಾಡುತ್ತೇನೆ. ನಾನು ಎಲ್ಲದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದೇನೆʼʼಎಂದರು.
”ಯಾವುದೇ ಪುರಾವೆಗಳಿದ್ದರೂ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಬೇಕು. ಸುಖಾಸುಮ್ಮನೆ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ. ಮೈಸೂರಿನಲ್ಲಿ ಸುಪಾರಿ ಕಿಲ್ಲರ್‌ಗಳ ವಿರುದ್ಧ ದೂರು ದಾಖಲಿಸಿದ್ದೇನೆ. ನನ್ನ ಜೀವಕ್ಕೆ ಬೆದರಿಕೆ ಇದೆ. ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಓಶಿವಾರ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದೇನೆ. ರಾಖಿ ಸಾವಂತ್ ನನ್ನನ್ನು ಕೊಲ್ಲಲು ನೋಡುತ್ತಿದ್ದಾಳೆ. ಶೆಲ್ಲಿ ಲಾಥರ್‌ಗೆ ರಾಖಿ ಸುಪಾರಿ ನೀಡಿದ್ದಾಳೆ. ಈ ಬಗ್ಗೆ ಮೈಸೂರು ಪೊಲೀಸರಿಗೂ ತಿಳಿಸಿದ್ದೇನೆ. ನನ್ನ ಜೀವಕ್ಕೆ ಏನಾದರೂ ಆದರೆ ರಾಖಿ ಸಾವಂತ್ ಮತ್ತು ಶೆಲ್ಲಿ ಲಾಥರ್ ಕಾರಣ” ಎಂದು ಆದಿಲ್ ಆರೋಪಿಸಿದ್ದಾರೆ.
ಇದನ್ನೂ ಓದಿ: Rakhi Sawant: ಗಂಡಸರೇ ನನ್ನ ಹತ್ತಿರ ಬಂದರೆ ಹುಷಾರ್; ಮೆಕ್ಕಾದಿಂದ ಬಂದ ಮೇಲೆ ರಾಖಿ ಸಾವಂತ್ ಎಚ್ಚರಿಕೆ!
ಆಕೆಯ ಹಳೆಯ ಅಭ್ಯಾಸ
ಕೆಲವು ದಿನಗಳ ಹಿಂದೆ ರಾಖಿ ಆದಿಲ್ ತನ್ನ ನಗ್ನ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ದುರಾನಿ, “ಯಾವುದೇ ವಿಡಿಯೊಗಳನ್ನು ಸೆರೆಹಿಡಿದು ಸಾರ್ವಜನಿಕವಾಗಿ ಶೇರ್ ಮಾಡುವಂತಹ ವ್ಯಕ್ತಿ ನಾನಲ್ಲ. ರಾಖಿಯೇ ಸ್ವತಃ ತನ್ನ ವಿಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ನನ್ನ ವೈಯಕ್ತಿಕ ವಿಡಿಯೊಗಳನ್ನು ಶೂಟ್ ಮಾಡಿದ್ದಾಳೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ನನ್ನ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾಳೆ. ಇದು ಆಕೆಯ ಹಳೆಯ ಅಭ್ಯಾಸ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದರು.
“ನೀವು ನನ್ನ ಫೋನ್ ಗ್ಯಾಲರಿಯನ್ನು ಪರಿಶೀಲಿಸಬಹುದು ಅದರಲ್ಲಿ ಏನೂ ಇಲ್ಲ. ನನ್ನನ್ನು ಅರೆಸ್ಟ್ ಮಾಡಿದಾಗ ನನ್ನ ಎರಡೂ ಫೋನ್‌ಗಳು ಆಕೆಯ ಬಳಿ ಇದ್ದವು. ಇದು ಪೊಲೀಸರಿಗೂ ಗೊತ್ತು. ಅವಳು ನನ್ನ ಫೋನ್‌ಗಳನ್ನು ಮಾರಿ ಅದರಿಂದ ಜೀವನ ನಡೆಸುತ್ತಿದ್ದಳೋ ಇಲ್ಲವೋ ನನಗೆ ಗೊತ್ತಿಲ್ಲ. ಇದು ನನ್ನ ಹೊಸ ಐಫೋನ್. ನಾನು ನನ್ನ ಎರಡೂ ಫೋನ್‌ಗಳನ್ನು ನಿಮ್ಮೆಲ್ಲರಿಗೂ ಒಪ್ಪಿಸುತ್ತಿದ್ದೇನೆ, ”ಎಂದು ಅವರು ಹೇಳಿದರು.
ಇದನ್ನೂ ಓದಿ: Rakhi Sawant: ಮಗುವನ್ನು ಹೆರಲು ನಾನು ಸಮರ್ಥಳು ಎಂದ ರಾಖಿ ಸಾವಂತ್!
ರಿತೇಶ್ ಜತೆ ಮದುವೆಯಾಗಿರುವಾಗಲೇ ರಾಖಿ ತನ್ನನ್ನು ಮದುವೆಯಾಗಿದ್ದಾಳೆ ಎಂದು ಆದಿಲ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆಯಾದ ಮೇಲೂ ಆಕೆ ಮೊದಲ ಪತಿ ರಿತೇಶ್ (Ritesh) ಜತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದಿದ್ದರು. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್ ಮಾಡಿದಳು ಎಂದೆಲ್ಲಾ ಹೇಳಿದ್ದರು.